ಮುಂಬೈ: ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಇಬ್ಬರು ನಾಪತ್ತೆಯಾಗಿರುವ ಘಟನೆ ಮುಂಬೈ ಸಮೀಪದ ಲೋನಾವಾಲಾ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ.
ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಎನ್ನಲಾಗಿದ್ದು. ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸೈಯದ್ (9) ನಾಪತ್ತೆಯಾಗಿದ್ದಾರೆ.
ಭಾನುವಾರ ಪುಣೆ ನಗರದ ಸೈಯದ್ ನಗರ ಮೂಲದ ಕುಟುಂಬವೊಂದು ರಜಾದಿನವಾಗಿದ್ದರಿಂದ ಕುಟುಂಬದ ಏಳು ಮಂದಿ ಸದಸ್ಯರು ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀರಿನ ಲೋನಾವಾಲಾ ಜಲಪಾತ ಬಳಿ ಬಂದಿದ್ದಾರೆ ಈ ವೇಳೆ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಕುಟುಂಬ ಸದಸ್ಯರು ನೀರಿನ ನಡುವೆ ಆಟವಾಡಲು ತೆರಳಿದ್ದಾರೆ ದುರದೃಷ್ಟವಶಾತ್ ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸರಿಯುತ್ತಿರುವ ಮಳೆಯಿಂದ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಪರಿಣಾಮ ಹಿನ್ನೀರಿನ ಮಟ್ಟ ಏರಿಕೆಯಾಗಿದೆ ಹಾಗಾಗಿ ಏಕಾಏಕಿ ಜಲಪಾತದ ಬಳಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಏಳು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಈ ವೇಳೆ ಇಬ್ಬರು ಈಜಿ ದಡ ಸೇರಿ ಬಚಾವಾಗಿದ್ದು ಐವರು ನಿರುಪಾಲಾಗಿದ್ದರೆ ಇದರಲ್ಲಿ ಮೂವರ ಮೃತ ದೇಹ ಭಾನುವಾರ ಪತ್ತೆಯಾಗಿದ್ದು ಇಬ್ಬರು ನಾಪತ್ತೆಯಾಗಿದ್ದರು ಅವರ ಪತ್ತೆ ಕಾರ್ಯಾಚರಣೆ ಸೋಮವಾರ ನಡೆಸುವುದಾಗಿ ರಕ್ಷಣಾ ತಂಡ ತಿಳಿಸಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರೂ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇದನ್ನು ಓದಿ: Box office: ರಿಲೀಸ್ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’