Advertisement

ʼAdipurushʼ ನಿಂದ ಜನರ ಭಾವನೆಗೆ ಧಕ್ಕೆಯಾಗಿದೆ ಕೈಮುಗಿದು ಕ್ಷಮೆ ಕೇಳುತ್ತೇನೆಂದ ಸಂಭಾಷಣೆಕಾರ

10:25 AM Jul 08, 2023 | Team Udayavani |

ಮುಂಬಯಿ: ಪ್ರಭಾಸ್‌ ಅಭಿನಯದ ಬಹುಕೋಟಿ ನಿರ್ಮಾಣದ ʼಆದಿಪುರುಷ್‌ʼ ಸಿನಿಮಾ ಈಗಾಗಲೇ ಬಹುತೇಕ ಥಿಯೇಟರ್‌ ನಿಂದ ಹೊರಬಿದ್ದಿದೆ. ಒಂದಷ್ಟು ವಿವಾದ, ಗೊಂದಲದ ನಡುವೆ ಸಿನಿಮಾ ಕೋಟಿ ಕ್ಲಬ್‌ ದಾಟಿದೆ.

Advertisement

ಸಿನಿಮಾ ರಿಲೀಸ್‌ ಆದ ದಿನದಿಂದ ಸಿನಿಮಾದ ಬಗ್ಗೆ ಹಲವು ರೀತಿಯಲ್ಲಿ ವಿಮರ್ಶೆಗಳು ಬಂದಿದೆ. ಸಿನಿಮಾದಲ್ಲಿನ ವಿಎಫ್ಎಕ್ಸ್‌ ಕುರಿತಂತೆ ಹಲವರು ಸಿನಿಮಾವನ್ನು ಟೀಕಿಸಿದ್ದಾರೆ. ಮತ್ತೊಂದೆಡೆ ಸಿನಿಮಾದಲ್ಲಿನ ಡೈಲಾಗ್ಸ್‌ ಗಳಿಗೂ ಟೀಕೆ ವ್ಯಕ್ತವಾಗಿತ್ತು.

ಹನುಮಾನ್‌ ಪಾತ್ರಧಾರಿಗೆ ಬರೆದ ಡೈಲಾಗ್ಸ್‌ ಗಳಿಗೆ ವಿರೋಧ ವ್ಯಕ್ತವಾಗಿತ್ತು. ಡೈಲಾಗ್ಸ್‌ ಬರೆದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಅವರಿಗೆ ಈ ಕಾರಣಕ್ಕಾಗಿ ಜೀವ ಬೆದರಿಕೆಗಳು ಬಂದಿತ್ತು. ಈ ಸಂಬಂಧ ಮುಂಬಯಿ ಪೊಲೀಸರು ಸಂಭಾಷಣೆಕಾರನಿಗೆ ಭದ್ರತೆಯನ್ನು ನೀಡಿದ್ದರು.

ಆ ಬಳಿಕ “ಬಜರಂಗಬಲಿ ದೇವರಲ್ಲ, ಅವರು ಅಪ್ಪಟ ಭಕ್ತ ಮಾತ್ರ. ನಾವು ಹನುಮಾನ್‌ ರನ್ನು ದೇವರಾಗಿ ಮಾಡಿದ್ದೇವೆ. ಏಕೆಂದರೆ ಅವರ ಭಕ್ತಿ ಶಕ್ತಿಶಾಲಿ ಆಗಿತ್ತು” ಎಂದು ಸಂದರ್ಶನವೊಂದರಲ್ಲಿ ಹೇಳಿ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಇದನ್ನೂ ಓದಿ: Rishab Shetty Birthday: ಒಂದೇ ತಟ್ಟೆಯಲ್ಲಿ ಬಿರಿಯಾನಿ ಸವಿದ ರಿಷಬ್‌ – ರಕ್ಷಿತ್

Advertisement

ಇದೀಗ ಈ ಬಗ್ಗೆ ಮತ್ತೊಮ್ಮೆ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಕ್ಷಮೆ ಕೇಳಿದ್ದಾರೆ. “ಆದಿಪುರುಷ್ ನಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಇದಕ್ಕೆ ನಾನು ಕೈಮುಗಿದು ಕ್ಷಮೆ ಕೇಳುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಬರೆದುಕೊಂಡಿದ್ದಾರೆ.

ಜೂ.16 ರಂದು ಓಂ ರಾವತ್‌ ನಿರ್ದೇಶನ ಮಾಡಿರುವ ʼಆದಿಪುರುಷ್‌ʼ ರಿಲೀಸ್‌ ಆಗಿತ್ತು. ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next