ದೇವನಹಳ್ಳಿ: ಪ,ಜಾತಿ, ಪಂಗಡ, ರೈತರು ಮತ್ತು ಶೋಷಿತ ವರ್ಗದವರಿಗೆ ಸರ್ಕಾರ ಜಾಗ ಗುರುತಿಸಿ ಕೊಟ್ಟು ನಿವೇಶನ ಕಲ್ಪಿಸಿ ಕೊಡಬೇಕು. ದೇವನಹಳ್ಳಿ ತಾಲೂಕಿನಲ್ಲಿ ಖಾಸಗಿ ಕಂಪನಿ ಸರ್ಕಾರಿ ಜಾಗ ಕಬಳಿಸಿದ್ದರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನುರಾಧ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರವೇ ಸ್ವಾಭಿಮಾನ ಸೇನೆ ವತಿಯಿಂದ ಬೆಂಗಳೂರು ಗ್ರಾಮಾಂತರ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನುರಾಧ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಪ್ರತಿಭಟನೆಗೆ ಸಂಬಂಧಿಸಿದಂತೆ ಇಂತಹ ಸರ್ಕಾರಿ ಜಾಗಗಳನ್ನು ಗುರುತಿಸಿ ಬಡವರಿಗೆ ಹಂಚಿಕೆ ಮಾಡುವುದು. ರಾಯಸಂದ್ರ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ನೂರು ಜನರು ಗುಡಿಸಲು ಹಾಕಿಕೊಂಡಿದ್ದಾರೆ.
ಆ ಜಾಗವನ್ನು ಗುರುತಿಸಿ ಅವರಿಗೆ ನಿವೇಶವನ್ನು ಹಂಚಬೇಕು. ದೇವನಹಳ್ಳಿಯಲ್ಲಿ ಶೋಷಿತ ವರ್ಗದ ಮೇಲೆ ರಾಜಕೀಯದವರು, ಬಲಾಡ್ಯರು ದೌರ್ಜನ್ಯ ವೆಸಗುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲು ಜಿಲ್ಲಾಧಿಕಾರಿ ಆಫೀಸ್ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ದೇವನಹಳ್ಳಿ ತಾಲೂಕು ಕರವೇ ಸ್ವಾಭಿಮಾನ ಸೇನೆ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕರವೇ ಸ್ವಾಭಿಮಾನ ಸೇನೆ ವತಿಯಿಂದ ತಾಲೂಕಿನಲ್ಲಿರುವ ನಿರಾಶ್ರಿತರ ಪರವಾಗಿ ಹೋರಾಟದ ರೂಪುರೇಷುಗಳ ಬಗ್ಗೆ ಚರ್ಚಿಸಲಾಗಿದ್ದು, ಸಂಘಟನೆಯ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸಾವಿರಕ್ಕೂ ಹೆಚ್ಚು ಜನರು ಗಿ: ತಾಲೂಕಿನಲ್ಲಿ ಪ. ಜಾತಿ, ಪಂಗಡದವರು ಮತ್ತು ಇತರೆ ಜನಾಂಗದವರು ನಿವೇಶನವಿಲ್ಲದೆ, ನಿವೇಶನಕ್ಕಾಗಿ ಸುಮಾರು ಜನ ಹಲವಾರು ಬಾರಿ ಹೋರಾಟ ಮಾಡಿದ್ದರೂ ಫಲಕಾರಿಯಾಗದೆ, ನಿರಾಶ್ರಿತರು ಬೇಸತ್ತು, ಮನನೊಂದು ಕೈಲಾಗದೆ ಕಂಗಾಲಾಗಿದ್ದಾರೆ. ನಮ್ಮ ಸಂಘಟನೆಯ ಕಡೆಯಿಂದ ಹೋರಾಟವನ್ನು. ಹಮ್ಮಿಕೊಂಡು ಎಲ್ಲಾ ಜಾತಿ, ಜನಾಂಗದವರಿಗೆ ನಿವೇಶನ ಕಲ್ಪಿಸಿಕೊಡಬೇಕೆಂದು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬೃಹತ್ ಹೋರಾಟ ಮಾಡಲಾಗುತ್ತದೆ. ಈ ಹೋರಾಟದಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಕನ್ನಮಂಗಲ ಶ್ರೀನಿವಾಸ್, ಗೌರವಾಧ್ಯಕ್ಷ ಮುನೇಗೌಡ, ಮಹಿಳಾ ಘಟಕ ತಾಲೂಕು ಅಧ್ಯಕ್ಷ ಅನಿತಾ, ಟೌನ್ ಅಧ್ಯಕ್ಷ ಪ್ರವೀಣ್, ಪ್ರಭು, ಅನಂತ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಂಬರೀಶ್, ಸಿಂಗ್ರಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಜಾಲಿಗೆ ವೆಂಕಟೇಶ್, ಅದಂ, ರಾಕೇಶ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.