Advertisement

ಉಡದ ಹಿಡಿತ ಅನ್ನೋದು ಯಾಕೆ ಗೊತ್ತಾ?

12:30 AM Feb 21, 2019 | |

ಹಿಂದಿನ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಚದುರಂಗ ದಳದ ಭಾಗವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಸರೀಸೃಪಗಳ ಜಾತಿಗೆ ಸೇರಿದ ಉಡವನ್ನು ಕೂಡ ಯುದ್ಧದ ವೇಳೆಯಲ್ಲಿ ಬಳಸಿದ ಕತೆ ಗೊತ್ತಿದೆಯಾ? ಕೋಟೆಗಳಿಗೆ ಲಗ್ಗೆ ಹಾಕಿ, ಕೋಟೆಯ ಮೇಲಕ್ಕೇರಲು ಉಡಗಳನ್ನು ಉಪಯೋಗಿಸುತ್ತಿದ್ದ ಅನೇಕ ನಿದರ್ಶನಗಳು ಭಾರತದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ದೊರೆಯುತ್ತವೆ. ಒಮ್ಮೆ ಛತ್ರಪತಿ ಶಿವಾಜಿಯ ಸೈನ್ಯದ ಮುಖ್ಯಸ್ಥ ತಾನಾಜಿಯು, ರಾಯಘಢ ಕೋಟೆಗೆ ಮುತ್ತಿಗೆ ಹಾಕಿದ. ಆ ಕೋಟೆ ಬಹಳ ಭದ್ರವಾಗಿತ್ತು.  ಉಡದ ಬಿಗಿಯಾದ ಹಿಡಿತದ ಬಗ್ಗೆ ತಿಳಿದಿದ್ದ ತಾನಾಜಿ, ಉಡದ ಟೊಂಕಕ್ಕೆ ಹಗ್ಗ ಕಟ್ಟಿ ರಾಯಘಢ ಕೋಟೆಯನ್ನು ಏರಿಸಿದ. ಉಡ ಕೋಟೆಯನ್ನು ಏರುತ್ತಾ, ಆಚೆ ಬದಿಗೆ ಹೋಗಿ ಗೋಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಆನಂತರ ತಾನಾಜಿಯ ಸೈನಿಕರು ಒಬ್ಬೊಬ್ಬರಾಗಿ ಹಗ್ಗದ ಸಹಾಯದಿಂದ ಗೋಡೆಯನ್ನು ಏರಿ ಕೋಟೆಯೊಳಗೆ ಪ್ರವೇಶ ಪಡೆದು, ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. 

Advertisement

ಇದು, ಹಲ್ಲಿಯ ಉಪಗಣಕ್ಕೆ, ವೆರಾನಸ್‌ ವಂಶಕ್ಕೆ ಸೇರುವ ಸರೀಸೃಪ. ಇಂಗ್ಲಿಷ್‌ನಲ್ಲಿ ಇದಕ್ಕೆ ommon indian monitor  ಎಂದು ಕರೆಯುತ್ತಾರೆ. ಮರ ಮತ್ತು ನೆಲದ ಬಿಲಗಳಲ್ಲಿ ಇದರ ವಾಸ. ಸಾಮಾನ್ಯವಾಗಿ 61ರಿಂದ 175 ಸೆಂಟಿಮೀಟರ್‌ ಉದ್ದವಿದ್ದು, ಸುಮಾರು 7.2 ಕಿ.ಗ್ರಾಂ. ತೂಗುತ್ತದೆ. ಉಡ ವೇಗವಾಗಿ ಓಡುವ ಶಕ್ತಿಯನ್ನು ಹೊಂದಿದೆ. ಕೋಪಗೊಂಡಾಗ, ಶತ್ರುಗಳೊಂದಿಗೆ ಕಾದಾಡುವಾಗ ಆವೇಶದಿಂದ ಬಾಲವನ್ನು ಬಡಿಯುತ್ತಾ, ನಾಲಿಗೆಯನ್ನು ಹೊರಚಾಚಿ ಹಾವುಗಳಂತೆ ಬುಸುಗುಡುತ್ತದೆ. ಇದರ ಕೊಬ್ಬಿನಿಂದ ಉಡದ ತುಪ್ಪ ತಯಾರಿಸಿ ವಾತ ರೋಗಿಗಳಿಗೆ ಕೊಡುತ್ತಾರೆ. 

ಹವನ

Advertisement

Udayavani is now on Telegram. Click here to join our channel and stay updated with the latest news.

Next