Advertisement
ಹೀಗೆಂದು ಹೇಳಿದ್ದು ದೇಶದ ಪ್ರಮುಖ ವೈರಾಲಜಿಸ್ಟ್ ಹಾಗೂ ಕೋವಿಡ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಡಾ| ಶಾಹಿದ್ ಜಮೀಲ್. ಇಡೀ ದೇಶವೇ ಒಮಿಕ್ರಾನ್ ಭೀತಿಯಲ್ಲಿರುವಾಗ ಜಮೀಲ್ ಅವರು ಈ ಹೇಳಿಕೆ ನೀಡುವ ಮೂಲಕ ಭಾರತೀಯರಿಗೆ ರಿಲೀಫ್ ನೀಡಿದ್ದಾರೆ.
Related Articles
Advertisement
ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್ ದೇಶ್‌ಮುಖ್
ಆರ್‌ಟಿ-ಪಿಸಿಆರ್‌ನಿಂದ ಒಮಿಕ್ರಾನ್ ಪತ್ತೆ ಸಾಧ್ಯಲಸಿಕೆ ಪಡೆಯದವರಿಗೆ ಉಚಿತ ಚಿಕಿತ್ಸೆ ಇಲ್ಲ!ಲಸಿಕೆ ಪಡೆಯದವರು, ಕೊರೊನಾ ಮುನ್ನೆಚ್ಚರಿಕ ಕ್ರಮಗಳಿಗೆ ಸಹಕಾರ ನೀಡದವರಿಗೆ ಸೋಂಕು ತಗಲಿದರೆ ಸರಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆರೋಗ್ಯ ಸಮಸ್ಯೆಯಿರುವ ಕಾರಣಕ್ಕೆ ಅಥವಾ ಅಲರ್ಜಿ ಇರುವ ಕಾರಣಕ್ಕೆ ಲಸಿಕೆ ಪಡೆಯದವರು ಅದಕ್ಕೆ ಸಂಬಂಧಿಸಿ ಸರಕಾರಿ ವೈದ್ಯರಿಂದ ಪ್ರಮಾಣಪತ್ರ ತರಬೇಕು ಎಂದೂ ಸೂಚಿಸಿದ್ದಾರೆ. “ಒಮಿಕ್ರಾನ್ ಅನ್ನು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್‌ಎಟಿ), ಆರ್‌ಟಿ-ಪಿಸಿಆರ್ ಟೆಸ್ಟ್ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಶೇಷವಾಗಿ, ಸೋಂಕಿನಿಂದಾಗಿ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ದೇಶಗಳಿಂದ (ಹೈರಿಸ್ಕ್) ಬಂದಿರುವವರ ಮೇಲೆ ನಿಗಾ ಇರಿಸಬೇಕು. ಹೋಮ್ ಐಸೊಲೇಶನ್‌ಗೆ ಶಿಫಾರಸು ಮಾಡಲಾದ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದಿದ್ದಾರೆ. ವಿದೇಶಗಳಿಂದ ಬಂದವರ ಮನೆಗೆ ಖುದ್ದಾಗಿ ಭೇಟಿ ನೀಡಬೇಕು. 8ನೇ ದಿನದ ಪರೀಕ್ಷೆಯ ಅನಂತರವೂ ಅವರ ಮೇಲೆ ನಿಗಾ ಇರಿಸಬೇಕು ಎಂದಿದ್ದಾರೆ. ಇದೇ ವೇಳೆ ಹೈರಿಸ್ಕ್ ದೇಶಗಳಿಂದ ಬಂದವರಿಗೆ ಕಟ್ಟು ನಿಟ್ಟಿನ ನಿಯಮ ಮಂಗಳವಾರ ರಾತ್ರಿಯಿಂದಲೇ ಜಾರಿಯಾಗಿದೆ.