Advertisement

ಒಮಿಕ್ರಾನ್‌ ಪ್ರಭಾವ: ಲಸಿಕೆ ಬೇಡಿಕೆ ಶೇ. 94.41ಕ್ಕೆ

01:49 AM Dec 01, 2021 | Team Udayavani |

ಬೆಂಗಳೂರು: ಒಮಿಕ್ರಾನ್‌ ಆತಂಕ ಹೆಚ್ಚಿರುವಂತೆ ಇದುವರೆಗೆ ಲಸಿಕೆ ಪಡೆಯಲು ನಿರಾಸಕ್ತಿ ತೋರುತ್ತಿದ್ದವರೆಲ್ಲ ಲಸಿಕೆ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ!

Advertisement

ಇದಕ್ಕೆ ಸಾಕ್ಷಿ ಎಂಬಂತೆ ಮಂಗಳವಾರ ಒಂದೇ ದಿನ ರಾಜ್ಯಾದ್ಯಂತ ಒಟ್ಟು 5.83 ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10 ದಿನಗಳಿಂದ ಕೋವಿಡ್‌ ಲಸಿಕೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಿಸಿದೆ.

ಪ್ರಸ್ತುತ 7.43 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. 2.95 ಕೋಟಿ ಮಂದಿ ಎರಡನೇ ಡೋಸ್‌ ಮತ್ತು 4.47 ಕೋಟಿ ಮಂದಿ ಒಂದನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ನ. 30, ಮಂಗಳವಾರ ಪ್ರಥಮ ಮತ್ತು ದ್ವಿತೀಯ ಡೋಸ್‌ಗಳನ್ನು ಕ್ರಮವಾಗಿ 1.82 ಲಕ್ಷ, 4.1 ಲಕ್ಷ ಮಂದಿ ಪಡೆದಿದ್ದು, ಒಂದೇ ದಿನ 5.83 ಲಕ್ಷ ಡೋಸ್‌ ನೀಡಲಾಗಿದೆ. 10 ದಿನಗಳ ಹಿಂದೆ ಪ್ರತೀ ದಿನ ಒಟ್ಟು ಸುಮಾರು 2.61 ಲಕ್ಷ ಜನರು ಲಸಿಕೆ ಪಡೆಯುತ್ತಿದ್ದರು. ಮಂಗಳವಾರ ಒಂದೇ ದಿನ 5.83 ಲಕ್ಷ ಪಡೆಯುವ ಮೂಲಕ ಲಸಿಕೆ ಪಡೆಯುವವರ ಸಂಖ್ಯೆ ಇಮ್ಮಡಿಯಾಗಿದೆ.

ಎರಡನೇ ಡೋಸ್‌ಗೆ ಒಲವು
ವಾರದ ಹಿಂದೆ ಎರಡನೇ ಡೋಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದವರು ಈಗ ಧಾವಿಸುತ್ತಿದ್ದಾರೆ. 3ನೇ ಅಲೆ ಭೀತಿಯಲ್ಲಿ ಕಳೆದ 10 ದಿನದಲ್ಲಿ ಒಟ್ಟು ಲಸಿಕೆ ಪಡೆಯುವ ಸಂಖ್ಯೆಯಲ್ಲಿ ಶೇ. 94.41ರಷ್ಟು ಏರಿಕೆಯಾಗಿದೆ. ಎರಡನೇ ಡೋಸ್‌ ಲಸಿಕೆ ಪಡೆಯವವರ‌ ಸಂಖ್ಯೆಯಲ್ಲಿ ಶೇ. 89 ಮತ್ತು ಒಂದನೇ ಡೋಸ್‌ ಪಡೆಯುವವರಲ್ಲಿ ಶೇ. 97ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

Advertisement

ವಾರದಲ್ಲಿ 30 ಲಕ್ಷ ಡೋಸ್‌ ವಿತರಣೆ
ನ. 20ರಿಂದ ನ. 30ರ ವರೆಗೆ 11 ಲಕ್ಷ ಪ್ರಥಮ, 30 ಲಕ್ಷ ದ್ವಿತೀಯ ಡೋಸ್‌ ಸೇರಿದಂತೆ ಒಟ್ಟು 41.50 ಲಕ್ಷ ಮಂದಿ ಲಸಿಕೆ ಪಡೆದಿರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ.

ಲಸಿಕೆ ವಿತರಣೆ ಪ್ರಗತಿ
- ನ. 10ರಿಂದ ನ. 19 ವರೆಗೆ 24.01 ಲಕ್ಷ ಡೋಸ್‌
- ನ. 20ರಿಂದ ನ. 30 ವರೆಗೆ 41.50 ಲಕ್ಷ ಡೋಸ್‌
- ಪ್ರಥಮ ಡೋಸ್‌ ವಿತರಣೆಯಲ್ಲಿ ಶೇ. 97 ಏರಿಕೆ
- ದ್ವಿತೀಯ ಡೋಸ್‌ ವಿತರಣೆಯಲ್ಲಿ ಶೇ. 89 ಏರಿಕೆ
- ಒಟ್ಟು ಲಸಿಕೆ ವಿತರಣೆಯಲ್ಲಿ ಶೇ. 94.41 ಏರಿಕೆ
- ಒಂದೇ ದಿನ 5.83 ಲಕ್ಷ ಡೋಸ್‌ ವಿತರಣೆ
- ಎರಡನೇ ಡೋಸ್‌ ಬಾಕಿ ಇರುವವರು 41 ಲಕ್ಷ

ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಎರಡನೇ ಡೋಸ್‌ ಹೆಚ್ಚು ಜನರು ಪಡೆದಷ್ಟು ರೋಗ ನಿಯಂತ್ರಣಕ್ಕೆ ಅನುಕೂಲ. ಲಸಿಕೆ ಹಾಕಿಸಿಕೊಳ್ಳದವರು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ.
– ಟಿ.ಕೆ. ಅನಿಲ್‌ ಕುಮಾರ್‌, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next