Advertisement

ಒಮಿಕ್ರಾನ್ ; ಆರೂ ಮಂದಿಯ ಮೇಲೆ ನಿಗಾ ಇಟ್ಟಿದ್ದೇವೆ: ಸಚಿವ ಡಾ.ಸುಧಾಕರ್

07:17 PM Dec 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿ ಆತಂಕ ಮೂಡಿಸಿದ ಬೆನ್ನಲ್ಲೇ ಆರೋಗ್ಯ ಸಚಿವ ಡಾ. ಸುಧಾಕರ್ ಅವರೌ ಗುರುವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ಜನತೆಗೆ ಧೈರ್ಯ ತುಂಬಿದ್ದು, ಸರಕಾರ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದಿದ್ದಾರೆ.

Advertisement

ಒಬ್ಬ ವ್ಯಕ್ತಿ ಸೌತ್ ಆಫ್ರಿಕಾದಿಂದ ಬಂದಿದ್ದರು, ಮೊದಲು ಟೆಸ್ಟ್ ಮಾಡಿಸಿದಾಗ ರೋಗದ ಲಕ್ಷಣ ಇರಲಿಲ್ಲ.ನವೆಂಬರ್ 23ರಂದು ಟೆಸ್ಟ್ ಮಾಸಿದಾಗ ನೆಗೆಟೀವ್ ಬಂದ ಬಳಿಕ ನ. 27ರಂದು ದುಬೈಗೆ ಹೋಗಿದ್ದಾರೆ. ಅವರನ್ನ ಟ್ರೇಸ್ ಮಾಡಿದ್ದು,247 ಪ್ರಾಥಮಿಕ ಸಂಪರ್ಕ ಇತ್ತು ಎಂದು ತಿಳಿಸಿದರು.

ಕಳೆದ ಎರಡು ಮೂರು ದಿನದಿಂದ ರಿಪೋರ್ಟ್ ಗಾಗಿ ಕಾಯುತ್ತಿದ್ದೆವು, ನಾವು ಕಳಿಸಿದ್ದ ಸ್ಯಾಂಪಲ್ಸ್ ಅಧಿಕೃತವಾಗಿ, ದಕ್ಷಿಣ ಆಫ್ರಿಕಾ ದಲ್ಲಿ ಕಾಣಿಸಿಕೊಂಡ ಸೋಂಕು ಆಗಿದೆ ಎಂದರು.

ಒಮಿಕ್ರಾನ್ ಎರಡೂ ಪ್ರಕರಣ ಕರ್ನಾಟಕ ದಲ್ಲಿ ಪತ್ತೆ ಮಾಡಿದ್ದು, ನಮ್ಮ ಅಗ್ರೆಸ್ಸೀವ್ ಟೆಸ್ಟಿಂಗ್ ಬೇಗ ಪತ್ತೆ ಮಾಡಿದ ರಾಜ್ಯ ನಮ್ಮದು . ಟೆಸ್ಟ್ ಮಾಡಿದಾಗ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ,ನೆಗೆಟೀವ್ ಬಂದಿದೆ ಎಂದರು.

ಎರಡನೇ ಸ್ಯಾಂಪಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ 45 ವರ್ಷದ ವೈದ್ಯರಲ್ಲಿ ಕಾಣಿಸಿಕೊಂಡಿದ್ದು, ಅವರು ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದು ಅವರೇ ಐಸೋಲೇಟ್ ಆಗಿದ್ದಾರೆ ಎಂದರು.

Advertisement

ಆರೂ ಮಂದಿ ಐಸೋಲೇಟ್

ಇಲ್ಲಿ ವೈದ್ಯರಲ್ಲಿ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಟೆಸ್ಟ್ ಮಾಡಿದ್ದು, ಐದು ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯ ಸೇರಿ ಆರೂ ಮಂದಿಯನ್ನು ಐಸೋಲೇಟ್ ಮಾಡಿದ್ದೇವೆ. ಸತತವಾಗಿ ಸಂಪರ್ಕ ದಲ್ಲಿದ್ದು, ಯಾರಿಗೂ ರೋಗದ ಗಂಭೀರತೆ ಇಲ್ಲ. ಸಣ್ಣ ಪ್ರಮಾಣದ ಲಕ್ಷಣಗಳು ಇರುವುದರಿಂದ ಆತಂಕ ಇಲ್ಲ ಎಂದರು.

ಅನುಮಾನ ಬಂದು ಜಿನೋಮಿಕ್ ಸೀಕ್ವೆನ್ಸ್ ಕಳುಹಿಸಿದ ಕಾರಣ ಒಮಿಕ್ರಾನ್ ಅಂತ ಪತ್ತೆಯಾಗಿದ್ದು, ದೆಹಲಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ವಿಮಾನ ನಿಲ್ದಾಣ ದಲ್ಲಿ ಟ್ರೇಸ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಮಾಸ್ಕ್ ಕಡ್ಡಾಯ, ದೊಡ್ಡ ಸಭೆ, ಸಮಾರಂಭ, ಗುಂಪು ಸೇರುವುದಕ್ಕೆ ಕಡಿವಾಣ ಹಾಕುತ್ತೇವೆ, ಯಾವ ರೀತಿ ಹರಡಲಿದೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ.ಈಗ ಬಂದಿರುವ ಆರೂ ಪ್ರಕರಣದಲ್ಲಿ ಗಂಭೀರ ಸಮಸ್ಯೆ ಕಂಡು ಬಂದಿಲ್ಲ ಎಂದರು.

ಡೆಲ್ಟಾದಲ್ಲಿ ಬಹಳ ತೀವ್ರತೇ ಹೆಚ್ಚಿದ್ದು, ಸಮಸ್ಯೆ ಹೆಚ್ಚಿತ್ತು.ಉಸಿರಾಟದ ಸಮಸ್ಯೆ ಹೆಚ್ಚಾಗಿತ್ತು.
ಇಲ್ಲಿ ಆ ಲಕ್ಷಣಗಳು ಕಂಡು ಬಂದಿಲ್ಲ ಎಂದರು.

ಎಲ್ಲರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು, ಮಾಧ್ಯಮಗಳ ಮೂಲಕ ಬುಲೆಟಿನ್ ಬಿಡುಗಡೆ ಮಾಡುತ್ತೇವೆ.
ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತನಾಡಲಿದ್ದಾರೆ. ನಾಳೆ (ಶುಕ್ರವಾರ) ಹಿರಿಯ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳ ಸಭೆ ಮಾಡಲಿದ್ದಾರೆ ಎಂದರು.

ಯಾರೂ ಆತಂಕ ಪಡುವುದು ಬೇಡ
ಅನಗತ್ಯವಾಗಿ ಗೊಂದಲ ಬೇಡ, ಊಹಾ ಪೂಹಗಳು ಹರಡುವುದು ಬೇಡ ಎಂದು ಮನವಿ ಮಾಡಿದರು.

ಸೋಂಕಿತ ವ್ಯಕ್ತಿಗಳ ವೈಯಕ್ತಿಕ ವಿಚಾರ, ಹೆಸರು, ಯಾವ ಆಸ್ಪತ್ರೆ ಎಂದು ಘೋಷಣೆ ಮಾಡುವುದಿಲ್ಲ ಎಂದರು.

ಒಂದು ಲಕ್ಷ ವಿದೇಶಿಗರು ಭಾರತಕ್ಕೆ ಬರುತ್ತಿದ್ದರು. ಇಲ್ಲಿವರೆಗೂ ಗಮನಿಸಿರುವಂತೆ 11ದೇಶಗಳಲ್ಲಿ ನೋಟಿಫಿಕೇಷನ್ ಪ್ರಕಾರ ಯಾವುದೇ ಸಮಸ್ಯೆ ಇಲ್ಲ ಅಂತ ಕಂಡು ಬಂದಿದೆ. ಒಂದಲ್ಲ ಒಂದು ದಿನ ಭಾರತಕ್ಕೆ ಬರಬೇಕಿತ್ತು.ಪ್ರತೀ ದಿನ 1ಲಕ್ಷ ಜನ ಭಾರತಕ್ಕೆ ಬರುತ್ತಿದ್ದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ವೇಗವಾಗಿ ಪತ್ತೆ ಹಚ್ಚಿದ್ದೇವೆ. ಬೆಳಗಾವಿ ಅಧಿವೇಶನ ಮಾಡುವುದೂ ಸೇರಿದಂತೆ, ಹಲವು ವಿಚಾರ. ಸಿಎಂ ಬಂದ ಮೇಲೆ ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next