ಕೊಪ್ಪಳ: ಓಮಿಕ್ರಾನ್ ಉಲ್ಬಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಂಗನವಾಡಿ ಬಂದ್ ಮಾಡುವ ಪ್ರಸ್ತಾಪ ಇಲ್ಲ. ನಾವಾಗಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ತಜ್ಞರ ಸಮಿತಿ ಅಭಿಪ್ರಾಯ, ಸಲಹೆ ಪಡೆಯಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವ್ಯಾರೂ ವೈದ್ಯರು, ವಿಜ್ಞಾನಿಗಳಲ್ಲ. ತಜ್ಞರ ಸಮಿತಿ ನೀಡುವ ವರದಿ ಮೇಲೆ ನಾವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವರ ಜತೆ ಚರ್ಚಿಸುತ್ತೇವೆ. ಏನೇ ಇದ್ದರೂ ಅವರು ನಮಗೆ ಸಲಹೆ-ಸೂಚನೆ ನೀಡುತ್ತಾರೆ.
15-18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯ ನಡೆಯುತ್ತಿದೆ. ಪಾಲಕರಿಗೆ, ಅವರ ಮಕ್ಕಳಿಗೆ ಲಸಿಕೆ ಪಡೆಯಲು ಸೂಚಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ:ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವರ್ಗಾವಣೆ
ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಲಸಿಕೆ ಹಾಕುವುದು ನಮ್ಮ ಗುರಿ. ಓಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರವು ಹಲವು ಕ್ರಮ ಕೈಗೊಳ್ಳುತ್ತಿದೆ. ನಿಯಂತ್ರಣಕ್ಕೆ ಹಲವು ಪರೀûಾ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಬಂದವರ ತಪಾಸಣೆ ನಡೆಯುತ್ತಿದೆ. ಅಂತಹವರನ್ನು ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಕೋವಿಡ್ ಬಂದ ನಂತರ ಕುಸ್ತಿಯಾಡುವುದಕ್ಕಿಂತಲೂ ಮೊದಲೇ ನಿಯಂತ್ರಣ ಮಾಡಲು ನಾವು ಕ್ರಮ ಕೈಗೊಳ್ಳಬೇಕಿದೆ. ಹಾಗಾಗಿ ಸರ್ಕಾರ ಕೆಲ ನಿರ್ಧಾರ ಕೈಗೊಳ್ಳುತ್ತಿದೆ ಎಂದರು.
ಕೊಪ್ಪಳ ಏತ ನೀರಾವರಿಯಡಿ ಬಿ ಸ್ಕೀಂಗೆ ಯಾವುದೇ ಮಂಡಳಿಯಲ್ಲಿ ಕಾಂಗ್ರೆಸ್ ಅನುದಾನ ಕೊಟ್ಟಿಲ್ಲ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಯೋಜನೆಗೆ ಹಣ ಕೊಟ್ಟಿದ್ದರು. ಅಧಿಕಾರದಲ್ಲಿದ್ದಾಗ ಕೆಲಸ ಮಾಡಿಕೊಟ್ಟರು. ಹಾಗಾಗಿ ಅವರನ್ನು ನಾನು ನೆನಪಿಸಬೇಕಾಗುತ್ತದೆ ಎಂದರು.