Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ತಡೆಗಟ್ಟಲು ಈಗಾಗಲೇ ಹುಬ್ಬಳ್ಳಿಯಲ್ಲಿ 28, ಧಾರವಾಡದಲ್ಲಿ 6 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಿಸಲು ಕೆಲ ದಿನಗಳಲ್ಲಿ ನವಲಗುಂದ, ಕಲಘಟಗಿ, ಕುಂದಗೋಳಕ್ಕೆ ತಲಾ ಒಂದು ಮೊಬೈಲ್ ತಂಡವನ್ನು ವ್ಯಾನ್ ಸಮೇತ ರಚಿಸಲಾಗುವುದು ಎಂದರು.
ಸೆಂಟರ್‌ನಲ್ಲಿ 44 ಜನ ದಾಖಲಾಗಿದ್ದಾರೆ. ಹೋಮ್ ಐಸೋಲೇಷನ್‌ದಲ್ಲಿ 2,321 ಜನ ಇದ್ದಾರೆ. ಐಸಿಯುದಲ್ಲಿ ಐವರು ದಾಖಲಾಗಿದ್ದಾರೆ. ಒಮಿಕ್ರಾನ್ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಕೋವಿಡ್-19 ಆರಂಭವಾದಾಗಿನಿಂದ ಇಲ್ಲಿಯವರೆಗೆ 64,537 ಪ್ರಕರಣಗಳಿದ್ದು, 60,740 ಡಿಸಾcರ್ಜ್ ಆಗಿವೆ ಎಂದರು. ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ಶಹರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಕಾರಣ ಶಹರ ಪ್ರದೇಶಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಕೋವಿಡ್-19ರ ಮೂರನೇ ಅಲೆ ಮೊದಲಿನ ಎರಡನೆ ಅಲೆಯಷ್ಟು ಪರಿಣಾಮಕಾರಿ ಆಗಿಲ್ಲ. ಪ್ರಕರಣಗಳು ಹೆಚ್ಚಾಗುತ್ತಿವೆ ವಿನಃ ಸಾವು-ನೋವುಗಳಿಲ್ಲ. ಲಕ್ಷಣಗಳು ಗಂಭೀರವಾಗಿಲ್ಲ. ಜ್ವರ, ನೆಗಡಿ, ಕೆಮ್ಮು ಸಾಮಾನ್ಯವಾಗಿದೆ. ಮೊದಲಿನ ಅಲೆಗಳಿಗಿಂತ ಇದರ ಪರಿಣಾಮ ತೀರಾ ಕಡಿಮೆ ಇದೆ. ಒಇಕ್ರಾನ್ ನಿಯಂತ್ರಿಸಲು ಜನರ ಸಹಕಾರವು ಮುಖ್ಯ. ಯಾರಿಗಾದರೂ ರೋಗದ
ಲಕ್ಷಣ ಕಂಡು ಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೆ ತಪಾಸಣಾ ಕೇಂದ್ರಕ್ಕೆ ತೆರಳಿ ಕಫ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಡಿಎಚ್‌ಒ ಮನವಿ ಮಾಡಿದರು.