Advertisement

ಓಂ ಶಕ್ತಿ ಮಹಿಳಾ ಕಲ್ಯಾಣ್‌ ಶಾಲಾ ಪರಿಕರಗಳ ವಿತರಣೆ

04:54 PM Jul 05, 2019 | Vishnu Das |

ಕಲ್ಯಾಣ್‌: ಹಲವಾರು ವರ್ಷಗಳಿಂದ ಓಂ ಶಕ್ತಿ ಮಹಿಳಾ ಸಂಸ್ಥೆ ಕನ್ನಡ ಮತ್ತು ಮರಾಠಿ ಶಾಲೆಯ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಕನ್ನಡ ನಮ್ಮ ಜನ್ಮಭೂಮಿಯ ಪ್ರಾದೇಶಿಕ ಭಾಷೆ. ಇಂದಿನ ಕಾಲದಲ್ಲಿ ಪ್ರಾದೇಶಿಕ ಭಾಷೆಗಳ ಶಾಲೆಗಳು ವಿರಳವಾಗುತ್ತಾ ಬಂದಿದೆ. ಕಲ್ಯಾಣ್‌ ಪರಿಸರದ ಅಂಬರ್‌ನಾಥ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ. ಮಕ್ಕಳ ಶಿಸ್ತು, ನಡತೆಗಳನ್ನು ನೋಡುವಾಗ ಇಲ್ಲಿಯ ಶಿಕ್ಷಕರನ್ನು ಮೆಚ್ಚಲೇಬೇಕಾಗಿದೆ. ನಾವು ಸಂಘ-ಸಂಸ್ಥೆಯೊಂದರ ಕನ್ನಡಿಗರೆಲ್ಲರೂ ಸೇರಿ ಈ ಮಣ್ಣಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಬೇಕು. ಈ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿ ಅವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಲ್ಯಾಣ್‌ನ ಓಂ ಶಕ್ತಿ ಮಹಿಳಾ ಸಂಸ್ಥೆಯ ಸ್ಥಾಪಕ ಗೌರವಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಅವರು ನುಡಿದರು.

Advertisement

ಇತ್ತೀಚೆಗೆ ಅಂಬರ್‌ನಾಥ್‌ನ ಕರ್ನಾಟಕ ವೈಭವ ಸಂಸ್ಥೆಯ ಎಸ್‌. ನಿಜಲಿಂಗಪ್ಪ ಕನ್ನಡ ಶಾಲೆಯಲ್ಲಿ ಕಲ್ಯಾಣ್‌ನ ಓಂ ಶಕ್ತಿ ಮಹಿಳಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಸಂಸ್ಥೆಯ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಕಲ್ಯಾಣ್‌ನ ಓಂ ಶಕ್ತಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಹರಿಣಿ ಟಿ. ಶೆಟ್ಟಿ ಅವರು ಮಾತನಾಡಿ, ಈ ಶಾಲೆಯ ವಿದ್ಯಾರ್ಥಿಗಳೊಂದಿಗೆ ಓಂ ಶಕ್ತಿ ಮಹಿಳಾ ಸಂಸ್ಥೆಯು ಅನ್ಯೋನ್ಯ ಸಂಬಂಧವನ್ನು ಹೊಂದಿದ್ದು, ಪ್ರತೀ ವರ್ಷ ಸ್ವಾತಂತ್ರÂ ದಿನಾಚರಣೆಯಂದು ಎಲ್ಲರಿಗೂ ಸಿಹಿತಿಂಡಿ ಹಾಗೂ ಉಪಾಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಮುಂದೆಯೂ ನಮ್ಮಿಂದ ಸಾಧ್ಯವಾದಷ್ಟು ಈ ಶಾಲೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ

ದರು. ದಾನಿಗಳು, ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸಂಸ್ಥೆಗೆ ಸದಾಯಿರಲಿ ಎಂದರು.

ಸಂಸ್ಥೆಯ ಜತೆ ಕೋಶಾಧಿಕಾರಿ ಕುಶಲಾ ಜಿ. ಶೆಟ್ಟಿ ಮತ್ತು ಉಷಾ ಎ. ಶೆಟ್ಟಿ ಅವರು ಉಪಸ್ಥಿತರಿದ್ದು ಶುಭಹಾರೈಸಿದರು. ಕರ್ನಾಟಕ ವೈಭವ ಸಂಸ್ಥೆಯ ಸಂಸ್ಥೆಯ ಕಾರ್ಯದರ್ಶಿಗಳಾದ ಬಸವಂತ ಪೂಜಾರಿ ಮತ್ತು ಜತೆ ಕಾರ್ಯದರ್ಶಿಗಳಾದ ಎಚ್‌. ಆರ್‌. ಚಲವಾದಿ, ಸದಸ್ಯರಾದ ಎಂ. ಎಸ್‌. ಜಲದೆ, ಮುಖ್ಯ ಶಿಕ್ಷಕರಾದ ಎ. ಕೆ. ಹೊನ್ನಳ್ಳಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸಹಕರಿಸಿದರು.

Advertisement

ಕಾರ್ಯಕ್ರಮದಲ್ಲಿ ಗಣ್ಯರನ್ನು ಶಾಲೆಯ ಶಿಕ್ಷಕರಾದ ಸುಭಾಷ್‌ ಆರ್‌. ಯಾಗಂಟೆ ಅವರು ಸ್ವಾಗತಿಸಿದರು. ಸಂಸ್ಥೆಯ ಸದಸ್ಯರಾದ ಎಂ. ಎಸ್‌. ಜಲದೆ ಅವರು ವಂದಿಸಿದರು. ಅಲ್ಲದೆ ಇತ್ತೀಚೆಗೆ ಓಂ ಶಕ್ತಿ ಮಹಿಳಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾ ಸೇವಾ ಸಂಘ ಕೇನ್ಯ ಇವರ ಆಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ ಗ್ರಾಮ ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳ್ಳಿಯ ಬಡ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಮುಂಬರುವ ಅವಧಿಯಲ್ಲಿ ನಮ್ಮ ಜಿಲ್ಲೆಯ ಹೆಚ್ಚಿನ ಸರಕಾರಿ ಶಾಲೆಗಳ ಬಡ ಮಕ್ಕಳಿಗೆ ತಮ್ಮಿಂದಾದಷ್ಟು ಸಹಾಯ ಮಾಡುವೆವು ಮತ್ತು ಈ ಕಾರ್ಯದಲ್ಲಿ ಸಹಕರಿಸಿದವರೆಲ್ಲರಿಗೂ ಚಿತ್ರಾ ಆರ್‌. ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next