Advertisement

National Tourism Day: ಗೋಕರ್ಣದಲ್ಲೊಂದು ಓಂ ಆಕಾರವನ್ನೇ ಹೋಲುವ ‘ಓಂ ಬೀಚ್’…

03:13 PM Jan 25, 2024 | Team Udayavani |

ಉತ್ತರ ಕನ್ನಡ ಎಂದಾಕ್ಷಣ ನೆನಪಾಗೋದು ಹಚ್ಚಹಸಿರಾದ ಕಾಡುಗಳು, ಘಟ್ಟಗಳು, ಭೋರ್ಗರೆಯುವ ಜಲಪಾತಗಳು, ಸಹ್ಯಾದ್ರಿ ಸಾಲುಗಳು, ದೇವಾಲಯಗಳು, ಸದಾಕಾಲ ಹರಿಯುವ ನದಿಗಳು ಮತ್ತು ಪ್ರವಾಸಿಗರ ಮನಸೆಳೆಯುವ ಕಡಲ ತೀರಗಳು. ಅದೇ ರೀತಿ ಜಗತ್ತಪ್ರಸಿದ್ದಿ ಪಡೆದಿರುವ ಬೀಚ್ಗಳಲ್ಲಿ ಒಂದಾದ ಓಂ ಬೀಚ್ ಇರುವುದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ.

Advertisement

ನೈಸರ್ಗಿಕವಾಗಿ ಓಂ ಆಕಾರದಿಂದ ಕೂಡಿರುವ ಓಂ ಬೀಚ್ ತನ್ನ ರಮಣೀಯ ಸೌಂದರ್ಯ ಮತ್ತು ಶಾಂತಿಗೆ ಪ್ರಸಿದ್ಧಿಯಾಗಿದೆ. ಈ ಬೀಚನ್ನು ಎತ್ತರದಿಂದ ನೋಡಿದಾಗ ಓಂ ಚಿಹ್ನೆಯನ್ನು ಹೋಲುತ್ತದೆ. ಸಮುದ್ರತೀರದಲ್ಲಿ ಎರಡು ಅರ್ಧವೃತ್ತಕಾರದ ಕೊಲ್ಲಿಗಳು ಪೂಜ್ಯ ಹಿಂದೂ ಚಿಹ್ನೆಯ ಆಕಾರವನ್ನು ರೂಪಿಸುತ್ತದೆ. ಕಡಲ ತೀರವು ಅದರ ವಿಶಿಷ್ಟವಾದ ಆಕಾರದಿಂದಾಗಿ ಓಂ ಬೀಚ್ ಎಂದು ಹೆಸರಿಸಲಾಗಿದೆ.

ಎಷ್ಟೇ ನೋಡಿದರೂ ಕರಗದ ಸೌಂದರ್ಯ ರಾಶಿಯ ಈ ಪ್ರದೇಶದಲ್ಲಿ ಸಮಯ ಕಳೆದಂತೆ ಹಲವಾರು ಬದಲಾವಣೆಗಳಾಗಿವೆ. ಬೀಚ್ ರಸ್ತೆಯ ಮೇಲ್ಭಾಗದ ಗುಡ್ಡದಲ್ಲಿ ಸುಂದರ ಉದ್ಯಾನವನ, ಸೂರ್ಯಾಸ್ತ ವೀಕ್ಷಣೆಗೆ ಪ್ಯಾರಗೋಲ್, ಕಲ್ಲಿನ ಕಲಾತ್ಮಕ ಆಸನಗಳು, ಕಪ್ಪೆ ಚಿಪ್ಪುಗಳ ಕಲಾಕೃತಿ ಮತ್ತು ಬೆಣಚು ಕಲ್ಲಿನಿಂದ ತಯಾರಿಸಲ್ಪಟ್ಟ ವಿವಿಧ ಆಸನಗಳು ವಿದೇಶಿಗರನ್ನು ಮತ್ತಷ್ಟು ಆಕರ್ಷಸುವಂತೆ ಮಾಡಿದೆ.

ಕೇವಲ ಇಷ್ಟೇ ಅಲ್ಲ ಓಂ ಬೀಚ್ನಲ್ಲಿ ಹಲವಾರು ಜಲಕ್ರೀಡೆಗಳನ್ನು ಆನಂದಿಸಬಹುದಾಗಿದೆ. ಬಾಳೆಹಣ್ಣಿನ ದೋಣಿ ಸವಾರಿ, ಬಂಪರ್ ಬೋಟ್ ರೈಡ್, ಡಾಲ್ಫಿನ ಸ್ಟಾಟಿಂಗ್, ಜೆಟ್-ಸ್ಕಿಯಿಂಗ್, ಸ್ಪೀಡ್ ಬೋಟಿಂಗ್, ಸ್ಕೋಬಾ ಡೈವಿಂಗ್, ಪ್ಯಾರಾಸೈಲಿಂಗ್, ಮನರಂಜನಾ ಮೀನುಗಾರಿಕೆ, ಬೀಚ್ ಸೈಡ್ ಟ್ರಕ್ಕಿಂಗ್ ಹೀಗೆ ಮುಂತಾದವುಗಳನ್ನು ಮನರಂಜಿಸಬಹುದಾಗಿದೆ..

ಬೀಚ್ ನಲ್ಲಿ ಆಡುವ ಖುಷಿ ಒಂದೆಡೆಯಾದರೆ, ಸಮುದ್ರಹಾರವನ್ನು ಸೇವಿಸುವುದು ಇನ್ನೊಂದು ರೀತಿಯ ಆನಂದ. ಭಾರತೀಯ, ಇಟಲಿಯನ್, ಚೈನೀಸ್, ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಪಾಕಪದ್ಧತಿಯ ಜೊತೆಗೆ ಬಗೆ ಬಗೆಯ ಸಮುದ್ರಹಾರಗಳೂ ಕೂಡ ಓಂ ಬೀಚ್ ಕೇಫೆಗಳಲ್ಲಿ ಲಭ್ಯವಿದೆ..

Advertisement

ಓಂ ಬೀಚ್, ಗೋಕರ್ಣವನ್ನು ತಲುಪುವುದು ಹೇಗೆ..?
ಬೀಚ್ ನಗರ ಕೇಂದ್ರದಿಂದ 6 ಕೀಮೀ ದೂರದಲ್ಲಿದೆ ಗೋಕರ್ಣ ಬೆಂಗಳೂರಿನಿಂದ 486ಕೀಮಿ, ಮಂಗಳೂರಿನಿಂದ 231ಕೀಮಿ ಕಾರವಾರದಿಂದ 55ಕೀಮಿ ದೂರದಲ್ಲಿದೆ. ಗೋವಾ ವಿಮಾನ ನಿಲ್ದಾಣದಿಂದ ಗೋಕರ್ಣಕ್ಕೆ 150ಕೀಮಿ ಮತ್ತು ಅಂಕೋಲಾ ರೈಲು ನಿಲ್ದಾಣದಿಂದ 19 ಕೀಮಿ ದೂರದಲ್ಲಿದೆ. ಗೋಕರ್ಣ ನಗರದಿಂದ ಆಟೋ ರಿಕ್ಷಾ ಟ್ಯಾಕ್ಸಿ ವ್ಯವಸ್ಥೆಯಿದೆ.

– ಕೆ. ಎಂ. ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next