Advertisement
ಮನೀಷ್ ಕೌಶಿಕ್ 2ನೇ ಶ್ರೇಯಾಂಕದ ಬಾಕ್ಸರ್, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಹ್ಯಾರಿಸನ್ ಗಾರ್ಸಿಡೆ ಅವರನ್ನು 4-1 ಅಂತರದಿಂದ ಮಣಿಸಿ ಅರ್ಹತೆ ಪಡೆದರು. ಇವರಿಬ್ಬರೂ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡಿದ್ದರು. ಇವರ ಬುಧವಾರದ ಬಾಕ್ಸ್-ಆಫ್ ಪಂದ್ಯ 2018ರ ಕಾಮನ್ವೆಲ್ತ್ ಗೇಮ್ಸ್‌ನ ಪುನರಾವರ್ತನೆ ಆಗಿತ್ತು. ಅಲ್ಲಿ ಮನೀಷ್ ಕೌಶಿಕ್ ಪರಾಭವಗೊಂಡಿದ್ದರು.
ಇದಕ್ಕೂ ಮೊದಲು ಗಾಯಾಳಾಗಿ 69 ಕೆಜಿ ಫೈನಲ್‌ನಿಂದ ಹಿಂದೆ ಸರಿದ ವಿಕಾಸ್ ಕೃಷ್ಣನ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆತಿಥೇಯ ಜೋರ್ಡಾನ್‌ನ ಜೆಯಾದ್ ಎಹ್ಸಾಸ್ ಚಿನ್ನದ ಪದಕ ಗೆದ್ದರು. ವಿಕಾಸ್ ಕೃಷ್ಣನ್ ಸೆಮಿಫೈನಲ್‌ನಲ್ಲಿ ಕಝಾಕ್‌ಸ್ಥಾನದ ದ್ವಿತೀಯ ಶ್ರೇಯಾಂಕದ ಅಬ್ಲೇಖಾನ್ ಝುಸುಪೋವ್ ಅವರನ್ನು ಕೆಡವಿದ್ದರು. ಈ ಪಂದ್ಯದ ವೇಳೆ ವಿಕಾಸ್ ಕಣ್ಣಿನ ಕೆಳಭಾಗಕ್ಕೆ ಗಾಯವಾಗಿತ್ತು. ಆದರೂ ಎದುರಾಳಿಯನ್ನು ತಮ್ಮ ತಂತ್ರಗಾರಿಕೆಯಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದರು.
Related Articles
Advertisement
ಟೋಕಿಯೋಗೆ ತೆರಳುವವರು…ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತದ ಬಾಕ್ಸರ್‌ಗಳ ಯಾದಿ ಇಲ್ಲಿದೆ. ಎಂ.ಸಿ. ಮೇರಿ ಕೋಮ್ (51 ಕೆಜಿ), ಸಿಮ್ರನ್‌ಜಿತ್ ಕೌರ್ (60 ಕೆಜಿ), ಲೊವಿÉನಾ ಬೋರ್ಗೊಹೈನ್ (69 ಕೆಜಿ), ಪೂಜಾ ರಾಣಿ (75 ಕೆಜಿ), ಅಮಿತ್ ಪಂಘಲ್ (52 ಕೆಜಿ), ವಿಕಾಸ್ ಕೃಷ್ಣನ್ (69 ಕೆಜಿ), ಆಶಿಷ್ ಕುಮಾರ್ (75 ಕೆಜಿ), ಸತೀಶ್ ಕುಮಾರ್ (+91 ಕೆಜಿ) ಮತ್ತು ಮನೀಷ್ ಕೌಶಿಕ್ (63 ಕೆಜಿ).