Advertisement

Olympics ಅರ್ಹತಾ ಹಾಕಿ: ಅಮೆರಿಕಕ್ಕೆ ಶರಣಾದ ಭಾರತ

11:25 PM Jan 13, 2024 | Team Udayavani |

ರಾಂಚಿ: ಎಫ್ಐಎಚ್‌ ವನಿತಾ ಒಲಿಂಪಿಕ್ಸ್‌ ಅರ್ಹತಾ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಅಮೆರಿಕದ ಕೈಯಲ್ಲಿ ಆಘಾತಕ್ಕೆ ಸಿಲುಕಿದೆ. ಶನಿವಾರ ನಡೆದ “ಬಿ’ ವಿಭಾಗದ ಮೊದಲ ಪಂದ್ಯದಲ್ಲಿ ಅಮೆರಿಕ ಏಕೈಕ ಗೋಲಿನಿಂದ ಭಾರತವನ್ನು ಮಣಿಸಿತು.

Advertisement

6ನೇ ರ್‍ಯಾಂಕಿಂಗ್‌ ಹೊಂದಿರುವ ಭಾರತ 24ನೇ ರ್‍ಯಾಂಕಿಂಗ್‌ ತಂಡವಾದ ಅಮೆರಿಕದ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾಯಿತು. ಗೋಲು ಗಳಿಕೆಯ ಬಹಳಷ್ಟು ಅವಕಾಶಗಳನ್ನು ಕೈಚೆಲ್ಲಿತು. ಅಬಿಗೇಲ್‌ ಟೇಮರ್‌ 16ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಪಂದ್ಯದ ಫ‌ಲಿತಾಂಶವನ್ನು ನಿರ್ಧರಿಸಿತು.

ಇದರಿಂದ ಭಾರತದ ಪ್ಯಾರಿಸ್‌ ಪಯಣ ದುರ್ಗಮಗೊಂಡಿದೆ. ಮುಂದಿನ ತಂಡಗಳೆಲ್ಲ ಅಮೆರಿಕಕ್ಕಿಂತ ಹೆಚ್ಚು ಬಲಿಷ್ಠವಾಗಿರುವುದರಿಂದ ಭಾರತ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದ ಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next