Advertisement

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

11:09 PM Jul 23, 2021 | Team Udayavani |

ಟೋಕಿಯೊ : ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತವೇ ಸಾಮ್ರಾಟನಾಗಿ ಮೆರೆಯುತ್ತಿದ್ದ ಕಾಲವೊಂದಿತ್ತು. ಸತತ 6 ಚಿನ್ನ ಗೆದ್ದು ಬೀಗಿದ ಹಿರಿಮೆ ನಮ್ಮದು. ಆಗ ಧ್ಯಾನ್‌ಚಂದ್‌ ಎಂಬ ಮಾಂತ್ರಿಕನಿದ್ದರು. ಇವರಷ್ಟೇ ಪ್ರಭಾವಶಾಲಿ ಹಾಕಿಪಟುಗಳಿದ್ದರು. ಯುರೋಪಿಯನ್‌ ಶೈಲಿ ಇನ್ನೂ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಏಶ್ಯ ಖಂಡ ಜಾಗತಿಕ ಹಾಕಿಯ ದೊಡ್ಡ ಶಕ್ತಿಯಾಗಿತ್ತು.
ಆದರೆ ಕಾಲ ಬದಲಾಯಿತು. ಏಶ್ಯನ್‌ ಶೈಲಿ ಮೂಲೆಗುಂಪಾಯಿತು. ಭಾರತವೂ ಹಿನ್ನಡೆ ಅನುಭವಿಸುತ್ತ ಹೋಯಿತು. 1928ರಿಂದ 1980ರ ಅವಧಿಯಲ್ಲಿ 7 ಚಿನ್ನ, ಒಂದು ಬೆಳ್ಳಿ, 2 ಕಂಚಿನ ಪದಕ ಗೆದ್ದು ಮೆರೆದಿದ್ದ ಭಾರತ, 1980ರ ಬಳಿಕ ಒಂದೂ ಒಲಿಂಪಿಕ್ಸ್‌ ಪದಕ ಗೆದ್ದಿಲ್ಲ. ಇದು ಹಾಕಿ ತವರಿಗೆ ಒಂದೊದಗಿದ ದುರ್ಗತಿ.

Advertisement

ಈ ಬರಗಾಲವನ್ನು ನೀಗಿಸುವ ಸಾಮರ್ಥ್ಯ ಟೋಕಿಯೊಗೆ ಬಂದಿಳಿದಿರುವ ಮನ್‌ಪ್ರೀತ್‌ ಸಿಂಗ್‌ ಬಳಗಕ್ಕಿದೆ ಎಂಬುದು ಬಲವಾದ ನಿರೀಕ್ಷೆ. ಶನಿವಾರ ಗ್ರೂಪ್‌ “ಎ’ ಮೊದಲ ಪಂದ್ಯದಲ್ಲಿ 8ನೇ ರ್‍ಯಾಂಕಿಂಗ್‌ನ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಸೆಣಸಲಿದೆ. ಇಲ್ಲಿ ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾ, ಬಲಿಷ್ಠ ಆಸ್ಟ್ರೇಲಿಯ, ಆತಿಥೇಯ ಜಪಾನ್‌ ಮತ್ತು ಸ್ಪೇನ್‌ ತಂಡಗಳಿವೆ.

“ಬಿ’ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ, ಕೆನಡಾ, ಜರ್ಮನಿ, ಗ್ರೇಟ್‌ ಬ್ರಿಟನ್‌, ನೆದರ್ಲೆಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಪ್ರತೀ ವಿಭಾಗದ ಅಗ್ರ 4 ತಂಡಗಳು ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುತ್ತವೆ.
ರಿಯೋದಲ್ಲಿ 8ನೇ ಸ್ಥಾನಕ್ಕೆ ಕುಸಿದ ಭಾರತವನ್ನು ಮೇಲೆತ್ತಿ ನಿಲ್ಲಿಸಬೇಕಾದ ಮಹತ್ವದ ಹೊಣೆಗಾರಿಕೆ ಮನ್‌ಪ್ರೀತ್‌ ಪಡೆಯ ಮೇಲಿದೆ.

ಇದನ್ನೂ ಓದಿ :ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಭಾರತವೇ ಫೇವರಿಟ್‌
ಅಷ್ಟೇನೂ ಬಲಿಷ್ಠವಲ್ಲದ ನ್ಯೂಜಿಲ್ಯಾಂಡ್‌ ಮೊದಲ ಎದುರಾಳಿಯಾಗಿ ಸಿಕ್ಕಿರುವುದು ಭಾರತದ ಅದೃಷ್ಟವೇ ಸರಿ. ಇಲ್ಲಿ ದೊಡ್ಡ ಅಂತರದ ಜಯ ಸಾಧಿಸಿದರೆ ಮನ್‌ಪ್ರೀತ್‌ ಪಡೆಯ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಲಿದೆ.

Advertisement

ಬ್ಲ್ಯಾಕ್‌ ಸ್ಟಿಕ್ಸ್‌ ವಿರುದ್ಧ ಭಾರತವೇ ಫೇವರಿಟ್‌ ಎಂಬುದರಲ್ಲಿ ಅನುಮಾನವಿಲ್ಲ. ರಿಯೋ ಒಲಿಂಪಿಕ್ಸ್‌ ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಭಾರತ ಎಂಟನ್ನು ಗೆದ್ದಿದೆ. 34 ಗೋಲು ಸಿಡಿಸಿದೆ. ಬಿಟ್ಟುಕೊಟ್ಟದ್ದು 14 ಗೋಲು ಮಾತ್ರ. ಟೋಕಿಯೋದಲ್ಲೇ ನಡೆದ 2019ರ ಎಫ್ಐಎಚ್‌ ಟೆಸ್ಟ್‌ನಲ್ಲಿ ಕೊನೆಯ ಸಲ ನ್ಯೂಜಿಲ್ಯಾಂಡನ್ನು ಭಾರತ ಮಣಿಸಿತ್ತು.

ವನಿತೆಯರಿಗೆ ಡಚ್‌ ಸವಾಲು
ಸತತ 2ನೇ ಒಲಿಂಪಿಕ್ಸ್‌ ಕಾಣುತ್ತಿರುವ ವನಿತೆಯರಿಗೆ ಆರಂಭದಲ್ಲೇ ಡಚ್ಚರ ಕಠಿನ ಸವಾಲು ಎದುರಾಗಿದೆ. ಆದರೆ ರಿಯೋ ಬಳಿಕ ರಾಣಿ ರಾಮ್‌ಪಾಲ್‌ ಬಳಗ ಹಂತ ಹಂತವಾಗಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಲೇ ಹೋಗಿರುವುದು ಉಲ್ಲೇಖನೀಯ. 2016ರ ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ, 2017ರ ಏಶ್ಯ ಕಪ್‌ ಗೆದ್ದಿದೆ. 2018ರ ಏಶ್ಯಾಡ್‌ನ‌ಲ್ಲಿ ಬೆಳ್ಳಿ ಜಯಿಸಿದೆ. ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಸಲ ಕ್ವಾರ್ಟರ್‌ ಫೈನಲ್‌ ತಲುಪಿದ್ದೆಲ್ಲ ವನಿತೆಯರ ಸಾಧನೆ.

Advertisement

Udayavani is now on Telegram. Click here to join our channel and stay updated with the latest news.

Next