Advertisement
ರೌಂಡ್ ರಾಬಿನ್ ಲೀಗ್ ಮುಖಾಮುಖೀಯ ಮೊದಲ ಪಂದ್ಯದಲ್ಲಿ ಆತಿಥೇಯ ಜಪಾನ್‌ಗೆ 2-1 ಅಂತರದ ಸೋಲುಣಿಸಿದ ಉತ್ಸಾಹದಲ್ಲಿದ್ದ ಭಾರತ, ರವಿವಾರ ಆಸ್ಟ್ರೇಲಿಯ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿತು. ಭಾರೀ ಹೋರಾಟ ನಡೆಸಿ ಸೋಲಿನಿಂದ ಪಾರಾಯಿತು.
ವಿಶ್ವದ 10ನೇ ರ್‍ಯಾಂಕಿಂಗ್ ತಂಡವಾಗಿರುವ ಭಾರತ, ಕಾಂಗರೂಗಳ ಆಕ್ರಮಣಕಾರಿ ಶೈಲಿಗೆ ತಕ್ಕಂತೆ ಬಿರುಸಿನ ಆಟಕ್ಕೆ ಇಳಿದಿತ್ತು. ಆದರೆ 14ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಪಡೆದ ಆಸೀಸ್ ಇದನ್ನು ಗೋಲಾಗಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಸ್ಫೂರ್ತಿ ಪಡೆದ ವಿಶ್ವದ ನಂ.2 ತಂಡವಾಗಿರುವ ಆಸೀಸ್ ವಿರಾಮದ ತನಕ ಹಿಡಿತ ಸಾಧಿಸಿತು.
Related Articles
Advertisement
ಸೋಲಿನಿಂದ ಭಾರತ ಪಾರುಇನ್ನೇನು ಆಸ್ಟ್ರೇಲಿಯ ಈ ಪಂದ್ಯವನ್ನು 2-1ರಿಂದ ತನ್ನದಾಗಿಸಿಕೊಳ್ಳಲಿದೆ ಎನ್ನುವಾಗಲೇ, ಅಂತಿಮ ನಿಮಿಷದಲ್ಲಿ ಡ್ರ್ಯಾಗ್ ಫ್ಲಿಕರ್ ಗುರ್ಜೀತ್ ಕೌರ್ ಆಪತಾºಂಧವರಂತೆ ಬಂದು ಭಾರತವನ್ನು ಬಚಾಯಿಸಿದರು.ಭಾರತ ಮಂಗಳವಾರದ ಅಂತಿಮ ಲೀಗ್ ಪಂದ್ಯದಲ್ಲಿ ಚೀನವನ್ನು ಎದುರಿಸಲಿದೆ. ಪುರುಷರಿಗೆ ಸೋಲು
ರವಿವಾರ ನಡೆದ ಪುರುಷರ ಪಂದ್ಯದಲ್ಲಿ ಭಾರತ 1-2 ಅಂತರದಿಂದ ನ್ಯೂಜಿಲ್ಯಾಂಡಿಗೆ ಶರಣಾಯಿತು. ಪಂದ್ಯದ 2ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಮೇಲುಗೈ ಒದಗಿಸಿದ್ದರು. ಇದನ್ನು 46ನೇ ನಿಮಿಷದ ತನಕ ಉಳಿಸಿಕೊಂಡ ಭಾರತ, ಬಳಿಕ ಲಯ ಕಳೆದುಕೊಂಡಿತು. 47ನೇ ನಿಮಿಷದಲ್ಲಿ ಜೇಕಬ್ ಸ್ಮಿತ್ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಆಗ ಪಂದ್ಯ ಡ್ರಾ ಆಗುವ ಸಾಧ್ಯತೆ ಇತ್ತು. ಆದರೆ ಕಟ್ಟಕಡೆಯ ನಿಮಿಷದಲ್ಲಿ ಸ್ಯಾಮ್ ಲೇನ್ ಗೋಲೊಂದನ್ನು ಬಾರಿಸಿ ಕಿವೀಸ್ ಗೆಲುವನ್ನು ಸಾರಿದರು. ಭಾರತ ಮೊದಲ ಪಂದ್ಯದಲ್ಲಿ ಮಲೇಶ್ಯವನ್ನು 6-0 ಅಂತರದಿಂದ ಮಣಿಸಿತ್ತು. ಮಂಗಳವಾರ ಆತಿಥೇಯ ಜಪಾನ್ ವಿರುದ್ಧ ಆಡಲಿದೆ.