Advertisement

ಒಲಿಂಪಿಕ್‌ ಹಾಕಿ: ಭಾರತದ ಮೊದಲ ಎದುರಾಳಿ ನ್ಯೂಜಿಲ್ಯಾಂಡ್‌

07:01 AM Jul 18, 2020 | mahesh |

ಟೋಕಿಯೊ: ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ಹಾಕಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತದ ಪುರುಷರ ತಂಡ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸಲಿದೆ. ವನಿತಾ ತಂಡದ ಎದುರಾಳಿ ನೆದರ್ಲೆಂಡ್ಸ್‌. ಎರಡೂ ಪಂದ್ಯಗಳು ಜು. 24ರಂದು ನಡೆಯಲಿವೆ.

Advertisement

ಭಾರತದ ಪುರುಷರ ತಂಡ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಜು. 25ರಂದು ಆಸ್ಟ್ರೇಲಿಯ, ಜು. 27ರಂದು ಸ್ಪೇನ್‌, ಜು. 29ರಂದು ಹಾಲಿ ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾ ಹಾಗೂ ಜು. 30ರ ಕೊನೆಯ ಲೀಗ್‌ ಪಂದ್ಯದಲ್ಲಿ ಆತಿಥೇಯ ಜಪಾನ್‌ ವಿರುದ್ಧ ಆಡಲಿದೆ. ವನಿತಾ ವಿಭಾಗದಲ್ಲೂ ಭಾರತ “ಎ’ ಗುಂಪಿನಲ್ಲಿ ಕಾಣಿಸಿಕೊಂಡಿದೆ. ವನಿತೆಯರು ಜು. 26ರಂದು ಜರ್ಮನಿ, ಜು. 28ರಂದು ಗ್ರೇಟ್‌ ಬ್ರಿಟನ್‌, ಜು. 29ರಂದು ಆರ್ಜೆಂಟೀನಾ ಮತ್ತು ಜು. 30ರಂದು ಜಪಾನ್‌ ತಂಡವನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next