Advertisement

ವಿವಾದಾತಕ ಟ್ವೀಟ್; ಇಂಗ್ಲೆಂಡ್‌ ತಂಡದಿಂದ ರಾಬಿನ್ಸನ್‌ ಔಟ್‌?

08:41 AM Jun 05, 2021 | Team Udayavani |

ಲಂಡನ್‌: ಎಂಟು ವರ್ಷಗಳ ಹಿಂದೆ ಮಾಡಲಾಗಿದ್ದ ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್‌ ನಿಂದಾಗಿ ಇಂಗ್ಲೆಂಡ್‌ ವೇಗಿ ಓಲೀ ರಾಬಿನ್ಸನ್‌ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.

Advertisement

ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಿಂದ ಅವರನ್ನು ಕೈಬಿಡುವ ಎಲ್ಲ ಸಾಧ್ಯತೆ ಇದೆ ಎಂದು ಇಸಿಬಿ ಮೂಲವೊಂದು ಹೇಳಿದೆ.

ಇದರಿಂದ 28 ವರ್ಷದ ಓಲೀ ರಾಬಿನ್ಸನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಒಂದೇ ಪಂದ್ಯಕ್ಕೆ ಸೀಮಿತಗೊಳ್ಳುವ ಎಲ್ಲ ಸಾಧ್ಯತೆ ಇದೆ.

ಇದನ್ನೂ ಓದಿ:ನಾಯಕತ್ವದಿಂದ ಬೌಲಿಂಗ್‌ ಸಾಧನೆಗೆ ಅಡ್ಡಿ: ರಶೀದ್‌ ಖಾನ್‌

ಓಲೀ ರಾಬಿನ್ಸನ್‌ ಲಾರ್ಡ್ಸ್‌ ಪಂದ್ಯದಲ್ಲಿ “ಟೆಸ್ಟ್‌ ಕ್ಯಾಪ್‌’ ಧರಿಸಿದ ಸಂಭ್ರಮದಲ್ಲಿದ್ದರು. 4 ವಿಕೆಟ್‌ ಉರುಳಿಸಿ ಮೊದಲ ಸರದಿಯ ಯಶಸ್ವಿ ಬೌಲರ್‌ ಆಗಿಯೂ ಗುರುತಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next