Advertisement

ಮ್ಯಾಂಚೆಸ್ಟರ್ ಟೆಸ್ಟ್: ಶತಕದ ಜೊತೆಯಾಟವಾಡಿ ಇಂಗ್ಲೆಂಡ್ ಆಸರೆಯಾದ ಒಲಿ ಪೋಪ್ –ಬಟ್ಲರ್

02:47 PM Jul 25, 2020 | keerthan |

ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಆಟಗಾರರಾದ ಒಲಿ ಪೋಪ್ ಮತ್ತು ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಆಧರಿಸಿದ್ದಾರೆ.

Advertisement

ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಗೆ ಬೌಲರ್ ಗಳು ಉತ್ತಮ ಆರಂಭ ನೀಡಿದರು. ಮೊದಲ ಓವರ್ ನಲ್ಲೇ ಡೊಮಿನಿಕ್ ಸಿಬ್ಲಿಯನ್ನು ರೋಚ್ ಔಟ್ ಮಾಡಿದರು. ಕಳೆದ ಪಂದ್ಯದ ಹೀರೋ ಬೆನ್ ಸ್ಟೋಕ್ಸ್ 20 ರನ್ ಗೆ ಔಟಾದರೆ, ನಾಯಕ ರೂಟ್ 17 ರನ್ ಗೆ ರನ್ ಔಟ್ ಆದರು.

ಅರಂಭಿಕ ಆಟಗಾರ ರೋರಿ ಬರ್ನ್ಸ್ ಅರ್ಧಶತಕ ಬಾರಿಸಿ ಔಟಾದರು. 122 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಧರಿಸಿದ್ದು ಒಲಿ ಪೋಪ್ ಮತ್ತು ಜೋಸ್ ಬಟ್ಲರ್. ಐದನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿ ನೆರವಾದರು.

ಪೋಪ್ ಅಜೇಯ 91 ರನ್ ಬಾರಿಸಿದರೆ, ಬಟ್ಲರ್ 56 ರನ್ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರೂ ಐದನೇ ವಿಕೆಟ್ ಗೆ 136 ರನ್ ಗಳಿಸಿದ್ದಾರೆ. ವಿಂಡೀಸ್ ಪರ ಕೆಮರ್ ರೋಚ್ ಎರಡು ವಿಕೆಟ್ ಪಡೆದರೆ, ರೋಸ್ಟನ್ ಚೇಸ್ ಒಂದು ವಿಕೆಟ್ ಪಡೆದರು. ದಿನದ ಅಂತ್ಯಕ್ಕೆ ಇಂಗ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 258 ರನ್ ಗಳಸಿದೆ.

Advertisement

Udayavani is now on Telegram. Click here to join our channel and stay updated with the latest news.

Next