Advertisement

2012ರ ಭುವನ ಸುಂದರಿಗೆ ಕ್ರಾಪ್‌ ಟಾಪ್‌ ಕಾಟ!

07:42 PM Jan 15, 2022 | Team Udayavani |

2012ರ ಭುವನ ಸುಂದರಿ ಒಲಿವಿಯಾ ಕಲ್ಪೋ ಇತ್ತೀಚೆಗೆ ಮೆಕ್ಸಿಕೋಗೆ ತೆರಳಲೆಂದು ಹೊರಟಿದ್ದಾಗ ಅಮೆರಿಕನ್‌ ಏರ್‌ಲೈನ್‌ ಸಿಬ್ಬಂದಿ ಅವರನ್ನು ತಡೆದಿದ್ದಾರೆ.

Advertisement

ಕ್ರಾಪ್‌ಟಾಪ್‌ ಮತ್ತು ಸ್ಪೋರ್ಟ್ಸ್ ಶಾರ್ಟ್ಸ್ ತೊಟ್ಟು ಬಂದಿದ್ದ ಅವರಿಗೆ, ಸರಿಯಾದ ಉಡುಗೆ ತೊಟ್ಟರೆ ಮಾತ್ರ ವಿಮಾನದೊಳಗೆ ಬಿಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ನಂತರ ಆಕೆ ತನ್ನ ಬಾಯ್‌ಫ್ರೆಂಡ್‌ ತೊಟ್ಟಿದ್ದ ಹೂಡಿ ತೊಟ್ಟು ಪ್ರಯಾಣ ಮಾಡಿದ್ದಾರೆ. ಈ ವಿಚಾರವನ್ನು ಆಕೆಯ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಜನರ ಅಭಿಪ್ರಾಯ ಕೇಳಿದ್ದಾರೆ.

ಆದರೆ ನೆಟ್ಟಿಗರು ವಿಮಾನದ ಸಿಬ್ಬಂದಿಯನ್ನೇ ಬೆಂಬಲಿಸಿದ್ದು, ಒಲಿವಿಯಾಗೆ ಬೈದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next