Advertisement

ವೀರ ನಾರಿಯರ ಬೇಕರಿ : ಹುತಾತ್ಮರ ಪತ್ನಿಯರ ಸಬಲೀಕರಣಕ್ಕಾಗಿ ಈ ಉದ್ದಿಮೆ

07:30 AM Apr 30, 2018 | Karthik A |

ಸಾಂಬಾ: ಜಮ್ಮು-ಕಾಶ್ಮೀರದ ‘ಸಾಂಬಾ ಬ್ರಿಗೇಡ್‌’ ಎಂದೇ ಕರೆಸಿಕೊಳ್ಳುತ್ತಿರುವ ಮಹಿಳೆಯರ ತಂಡ ಬಾಯಲ್ಲಿ ನೀರೂರಿಸುವಂತಹ ಕುಕೀಸ್‌ ಗಳನ್ನು (ಬಿಸ್ಕೆಟ್‌) ತಯಾರಿಸುವ ಕೆಲಸದಲ್ಲಿ ನಿರತವಾಗಿದೆ. ಇವರ್ಯಾರೋ ಮಹಿಳಾ ಉದ್ಯಮಿಗಳಿರಬಹುದು ಎಂದು ಭಾವಿಸಿದರೆ ಅದು ತಪ್ಪು.

Advertisement

ಇವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಮಡದಿಯರು. ಹುತಾತ್ಮ ಯೋಧರ ಪತ್ನಿಯರ ಸಬಲೀಕರಣದ ಉದ್ದೇಶದಿಂದ ಸ್ವತಃ ಸೇನೆಯೇ ಇಂತಹುದೊಂದು ಬೇಕರಿಯನ್ನು ತೆರೆದಿದೆ. ಸೇನೆಯು ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಪುಣೆ ಮೂಲದ NGO ಅಸೀಮ್‌ ಫೌಂಡೇಶನ್‌ನ ಸಹಯೋಗದೊಂದಿಗೆ ‘ಆಲೀವ್‌ ಗ್ರೀನ್‌ ಕುಕೀಸ್‌’ ಹೆಸರಿನಲ್ಲಿ ಬೇಕರಿ ಪ್ರಾರಂಭಿಸಿದೆ. ಆರ್ಮಿ ವೈವ್ಸ್‌ ವೆಲ್ಫೇರ್‌ ಅಸೋಸಿಯೇಶನ್‌ನ ವಲಯಾಧಿಕಾರಿ ಗೀತಾ ಮೋಹನ್‌ ಒಂದೂವರೆ ತಿಂಗಳ ಹಿಂದೆಯೇ ಇದನ್ನು ಉದ್ಘಾಟಿಸಿದ್ದಾರೆ.

ಈ ಫೌಂಡೇಶನ್‌ ವಿಧವೆಯರಿಗೆ ತರಬೇತಿ ನೀಡುವುದರ ಜತೆಗೆ ಕುಕೀಸ್‌ ಗಳ ತಯಾರಿಕೆಗೆ ಬೇಕಾದ ಉಪಕರಣಗಳನ್ನೂ ಒದಗಿಸುತ್ತದೆ. ಪ್ರತಿದಿನ 10 ಕೆ.ಜಿ. ಉತ್ಪಾದಿಸಲಾಗುತ್ತಿದ್ದು, ಸೇನೆ ಕೇವಲ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಗುಣಮಟ್ಟದ ಸೇಬು, ವಾಲ್‌ ನಟ್‌ ಗಳನ್ನು ಬಳಸಿ ತಯಾರಿಸುವ ಅವುಗಳನ್ನು ತಿಂಗಳಿಗೊಮ್ಮೆ ಪುಣೆಗೆ ಕಳುಹಿಸಲಾಗುತ್ತದೆ. ನಂತರ ಇದನ್ನು NGO ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಕಳುಹಿಸುತ್ತದೆ. ಕುಕೀಸ್‌ಗಳ ಪಾಕೆಟ್‌ಗಳ ಮೇಲೆ ಕೋಶುರ್‌ ಕ್ರಂಚ್‌ (ಕಾಶ್ಮೀರದ ರುಚಿ) ಎಂದು ನಮೂದಿಸಲಾಗಿದ್ದು, ‘ಪ್ರತಿಯೊಂದು ಬಿಸ್ಕೆಟ್‌ನಲ್ಲೂ ಶೌರ್ಯ ಮತ್ತು ತ್ಯಾಗದ ಕಥೆಯಿದೆ’ ಎಂಬ ಸಂದೇಶ ಬರೆಯಲಾಗಿದೆ. ಪ್ರತಿ ಪ್ಯಾಕ್‌ ಗೆ 55 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next