Advertisement

ಇಂಗ್ಲೆಂಡ್‌ ವೇಗಿ ಓಲೀ ರಾಬಿನ್ಸನ್‌ ನಿಷೇಧಮುಕ್ತ

11:54 PM Jul 03, 2021 | Team Udayavani |

ಲಂಡನ್‌ : ಇಂಗ್ಲೆಂಡ್‌ ವೇಗಿ ಓಲೀ ರಾಬಿನ್ಸನ್‌ ನಿಷೇಧ ಮುಕ್ತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮಾಡಿದ್ದ ಜನಾಂಗೀಯ ನಿಂದನೆಯ ಟ್ವೀಟ್‌ಗೆ ಸಂಬಂಧಿಸಿ ಅವರಿಗೆ 8 ಪಂದ್ಯಗಳ ನಿಷೇಧ ವಿಧಿಸಲಾಗಿತ್ತು. ಇಲ್ಲಿನ 3 ಪಂದ್ಯಗಳಲ್ಲಿ ರಾಬಿನ್ಸನ್‌ ವಿಷೇಧ ಅನುಭವಿಸಿದ್ದು, ಉಳಿದುದನ್ನು ರದ್ದುಗೊಳಿಸಲಾಗಿದೆ ಎಂದು ಇಸಿಬಿ ತಿಳಿಸಿದೆ.

Advertisement

“ಓಲೀ ರಾಬಿನ್ಸನ್‌ ಅವರಿನ್ನು ಇಂಗ್ಲೆಂಡ್‌ ಪರ ಆಡಲು ಅರ್ಹರು. ಅವರ ಕ್ರಿಕೆಟ್‌ ವೃತ್ತಿ ಬದುಕು ಮುಂದುವರಿಸಲು ಅನುಮತಿ ನೀಡಲಾಗಿದೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಹೇಳಿದೆ. ಹೀಗಾಗಿ ಅವರಿನ್ನು ಪ್ರವಾಸಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಲಭ್ಯರಿರಲಿದ್ದಾರೆ.

ಕೀಳುಮಟ್ಟದ ಟ್ವೀಟ್‌ ಮಾಡಿದ್ದಕ್ಕಾಗಿ ರಾಬಿನ್ಸನ್‌ ಅವರಿಗೆ 8 ಪಂದ್ಯಗಳ ನಿಷೇಧದೊಂದಿಗೆ 4,400 ಡಾಲರ್‌ ದಂಡ ಕೂಡ ವಿಧಿಸಲಾಗಿತ್ತು.

ಇದನ್ನೂ ಓದಿ : ಮಾತೃಭಾಷೆ ಶಿಕ್ಷಣದಲ್ಲಿ ಕರ್ನಾಟಕವೇ ಮುಂದೆ! ರಾಜ್ಯದಲ್ಲಿ ಶೇ.53ರಷ್ಟು ಮಕ್ಕಳು ಕನ್ನಡ ಮಾಧ್ಯಮ

Advertisement

Udayavani is now on Telegram. Click here to join our channel and stay updated with the latest news.

Next