Advertisement

ಮನಮಿಡಿಯುವ ದೃಶ್ಯ:ಹಿಮದ ರಾಶಿಯಲ್ಲಿ 30 ಕಿಮೀ ತಾಯಿಯ ಶವ ಹೊತ್ತ ಯೋಧ!

05:10 PM Feb 03, 2017 | |

ಶ್ರೀನಗರ : ಇದೊಂದು ಮನಮಿನಿಡಿಯುವ ದೃಶ್ಯ.. ಕಾಶ್ಮೀರದ ಮೈಕೊರೆಯುವ ಚಳಿಯಲ್ಲಿ,ಹಿಮದ ರಾಶಿಯಲ್ಲಿ ಭಾರತೀಯ ಸೇನೆಯ ವೀರ ಯೋಧನೊಬ್ಬ ಪ್ರತಿಕೂಲ ಹವಮಾನ ಮತ್ತು ಅಧಿಕಾರಿಗಳ ಸಹಕಾರ ದೊರೆಯದೆ ಅಸಹಾಯಕನಾಗಿ ತಾಯಿಯ ಶವವನ್ನು 4 ದಿನಗಳ ಕಾಲ ಕಾದು,10 ಗಂಟೆಗಳ ಕಾಲ 30 ಕಿಲೋ ಮೀಟರ್‌ ಗಳಷ್ಟು ದೂರ ಹೆಗಲ ಮೇಲೆ  ಹೊತ್ತು ನಡೆದ ದಾರುಣ ಘಟನೆ ನಡೆದಿದೆ. ವಿಡಿಯೋ ನೋಡಿ 

Advertisement

ಏನೀ ದಾರುಣ ಕಥೆ ? 

ಕುಪ್ವಾರದ ಕರ್ನಾ ತೆಹ್‌ಸಿಲ್‌ ಎಂಬ ಹಳ್ಳಿಯ ಮಹಮದ್‌ ಅಬ್ಬಾಸ್‌ ಖಾನ್‌ (25)ಎಂಬ ಯೋಧನಿಗೆ ತಿಂಗಳ ಹಿಂದೆ  ಪಠಾಣ್‌ಕೋಟ್‌ಗೆ ವರ್ಗವಾಗಿತ್ತು.  ವಿಪರೀತ ಚಳಿಯ ಕಾರಣದಿಂದ ತಾಯಿಯನ್ನೂ ಜೊತೆಗೆ ಕರೆದೊಯ್ದಿದ್ದರು. ಆದರೆ ದುರದೃಷ್ಟವಷಾತ್‌ ಜನವರಿ 28 ರಂದು ಹೃದಯಾಘಾತ ಸಂಭವಿಸಿ ತಾಯಿ ಮೃತಪಟ್ಟರು. 

ಅಂತಿಮ ಸಂಸ್ಕಾರ ನಡೆಸಲು ಕಾಶ್ಮೀರಕ್ಕೆ ಕಳೇಬರವನ್ನು ತಂದಾಗ ಎದುರಾಗಿದ್ದು ಹಿಮದರಾಶಿ. ರಸ್ತೆಗಳೆಲ್ಲ ಹಿಮದಿಂದ ಮುಚ್ಚಿ ಹೋಗಿದ್ದವು. ಈ ವೇಳೆ ಅಬ್ಟಾಸ್‌ ಖಾನ್‌ ಅವರು ತನ್ನ ಕುಗ್ರಾಮ ಚಿತ್ರಕೂಟ್‌ ಎಂಬಲ್ಲಿಗೆ ತೆರಳಲು ಸೇನಾ ಅಧಿಕಾರಿಯೊಬ್ಬರ ಬಳಿ ಹೆಲಿಕ್ಯಾಪ್ಟರ್‌ ಒದಗಿಸುವಂತೆ ಬೇಡಿಕೊಂಡಿದ್ದು, ಅದು ಲಭ್ಯವಾಗದಿದ್ದಾಗ,ಸೈನಿಕರ ಬಳಿ 52 ಕಿಮೀ ದೂರಕ್ಕೆ ಶವವನ್ನು ಸಾಗಿಸಲು ನೆರವು ಕೇಳಿದ್ದು, ಅಲ್ಲಿಯೂ ಪ್ರಯೋಜನ ಕಾಣದಾದಾಗ ಜಿಲ್ಲಾಡಳಿತವರನ್ನೂ ಸಹಾಯಕ್ಕಾಗಿ ಕೇಳಿದ್ದು ಯರೊಬ್ಬರೂ ನೆರವು ನೀಡಲಿಲ್ಲ. 

ಎದೆಗುಂದದ ವೀರ ಯೋಧ ತನ್ನ ಹೆಗಲ ಮೇಲೆ ತಾಯಿಯ ಶವವನ್ನು ಹೊತ್ತು 10 ಗಂಟೆಗಳ ಕಾಲ 30 ಕಿಲೋ ಮೀಟರ್‌ ಗಳಷ್ಟು ಹಿಮದ ರಾಶಿಯಲ್ಲಿ ನಡೆದು, ಕೊನೆಗೂ ವಾಹನದ ಮೂಲಕ 22 ಕಿಮೀ ಪ್ರಯಾಣ ಬೆಳೆಸಿ  ತನ್ನ ಮನೆ ತಲುಪುವಲ್ಲಿ ಯಶಸ್ವಿಯಾಗಿದ್ದಾನೆ. ಕೆಲ ಸಂಬಂಧಿಕರು ಮತ್ತು ಕೆಲ ಕೆಲಸಗಾರರು ಯೋಧನಿಗೆ ನೆರವು ನೀಡಿದ್ದಾರೆ. ಮಾರ್ಗ ಮಧ್ಯೆ ಕೆಲ ಸಂಬಂಧಿಕರು ಆಹಾರ ಮತ್ತು ತಂಗಲು ಸಹಾಯ,ಅವಕಾಶ ಮಾಡಿಕೊಟ್ಟಿದ್ದಾರೆ. ಡ್ರಾಂಗ್‌ಯಾರಿ ಪ್ರದೇಶದಲ್ಲಿ  ಸೇನಾ ಪಡೆಯ ಯೋಧರು ಶವ ಸಾಗಿಸುವಲ್ಲಿ ನೆರವು ನೀಡಿದರು. 

Advertisement

ಪ್ರಯಾಣ ವೇಳೆ ಯೋಧನಿಗೆ ನೆರವಾದ ವ್ಯಕ್ತಿಯೊಬ್ಬ ಹಿಮಪಾತಕ್ಕೆ ಸಿಲುಕಿ  ಕಂಠ ಮಟ್ಟಕ್ಕೆ ಹಿಮದಲ್ಲಿ ಮುಚ್ಚಿ ಹೋಗಿದ್ದು, ಆತನನ್ನು ರಕ್ಷಿಸಲಾಯಿತು. 

10,700 ಅಡಿ ಎತ್ತರದಲ್ಲಿ  ಹಿಮದ ರಾಶಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ತಾಯಿಯ ಶವವನ್ನು ಸಾಗಾಟ ಮಾಡಿ ಅಂತಿಮ ಸಂಸ್ಕಾರ ಮಾಡಬೇಕಾಯಿತು. ಈ ಪ್ರಯಾಣ ಅಂತ್ಯಂತ ಕಠಿಣವಾಗಿತ್ತು ಎಂದು ಯೋಧ ಅಬ್ಟಾಸ್‌ ಖಾನ್‌ ಹೇಳಿಕೊಂಡಿದ್ದಾರೆ. 

Video Courtesy: Greater Kashmir

Advertisement

Udayavani is now on Telegram. Click here to join our channel and stay updated with the latest news.

Next