Advertisement

ಹಳೆ ಪಿಂಚಿಣಿ ವ್ಯವಸ್ಥೆ ರದ್ದು: ಡಿ.19 ರಿಂದ ನಡೆಯುವ ಪ್ರತಿಭಟನೆಯಲ್ಲಿ ಭಾಗಿ; ಧರ್ಮಾನಂದ ಭಟ್ಟ

01:22 PM Dec 17, 2022 | Team Udayavani |

ಶಿರಸಿ: ರಾಜ್ಯ ಸರಕಾರಿ ನೌಕರರಿಗೆ ಏ.1 2006 ರಲ್ಲಿ ಹಳೆಯ ಪಿಂಚಿಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ನಿಶ್ಚಿತ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಸರಕಾರಿ ನೌರಕರ ಸೇವಾ ಭದ್ರತೆ ಇಲ್ಲದಂತಾಗಿದೆ. ತಕ್ಷಣ‌ ಸರಕಾರ ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು‌ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ಪ್ರಕಾಶ ಪೂಜಾರಿ, ತಾಲೂಕು ಘಟಕದ ಅಧ್ಯಕ್ಷ ಧರ್ಮಾನಂದ ಭಟ್ಟ ಹೇಳಿದರು.

Advertisement

ಅವರು‌ ಜಿಲ್ಲಾ ಪತ್ರಿಕಾ ಭವನದಲ್ಲಿ‌ ಸುದ್ದಿಗೋಷ್ಟಿ ನಡೆಸಿ, ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ  ಡಿ. 19 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಅನಿರ್ಧಿಷ್ಟಾವಧಿಗೆ ಮುಷ್ಕರ ನಡೆಸಲಿದ್ದೇವೆ.  ಈ ಎನ್ ಪಿಎಸ್ ನಿಂದ ಸರಕಾರಿ ನೌರಕರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಫಲಿತಾಂಶ ದೊರೆಯುವ ತನಕ  ಅನಿರ್ಧಿಷ್ಟಾವಧಿ ಹೋರಾಟ ನಡೆಸಲಿದ್ದೇವೆ ಎಂದೂ ಎಚ್ಚರಿಸಿದರು.

ಈಗಾಗಲೇ ಎನ್.ಪಿ.ಎಸ್. ರದ್ದತಿಗೆ ಹಲವು ಹೋರಾಟ ನಡೆಸಲಾಗಿದೆ. ಇದು ಕೊನೆಯ ಹೋರಾಟ ಎಂದು ನಡೆಸುತ್ತಿದ್ದೇವೆ‌. ಹಳೆ ಪಿಂಚಣಿ ವ್ಯವಸ್ಥೆ ಯನ್ನು ಪಡದೇ ತೀರಬೇಕು ಎಂದು ಹೊರಟಿದ್ದೇವೆ. ಮೊದಲ ಎರಡು ದಿನಗಳ ಕಾಲ ಎಲ್ಲಾ ಜಿಲ್ಲಾ ಘಟಕದಿಂದ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಂತರ ರಾಜ್ಯ ಘಟಕದ ನಿರ್ದೇಶನದ ಮೇರೆಗೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಗಣೇಶ ಹೆಗಡೆ ಬಾಳಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಗುಡ್ಡದಮನೆ, ಜನಾರ್ಧನ ಮೊಗೇರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಪಟಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next