Advertisement
ಪ್ರಬಲ ಮೇಲ್ಜಾತಿಗಳಾದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಅವಕಾಶ ಸಿಕ್ಕಿದ್ದು, ಎಸ್ಸಿ-ಎಸ್ಟಿ, ಓಬಿಸಿ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ.ಪ್ರಾದೇಶಿಕ ಲೆಕ್ಕಾಚಾರದ ಪ್ರಕಾರ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಸ್ಥಾನಗಳು ಲಭಿಸಿವೆ.ಇನ್ನು ಕಿತ್ತೂರು ಕರ್ನಾಟಕ ಭಾಗಕ್ಕೆ ಒಂದು ಸ್ಥಾನ ಮಾತ್ರ ಲಭಿಸಿದ್ದು, ಪ್ರಹ್ಲಾದ್ ಜೋಶಿ ಈ ಪ್ರದೇಶವನ್ನು ಪ್ರತಿನಿಧಿಸಿದಂತಾಗಿದೆ. ಕಲ್ಯಾಣ ಕರ್ನಾಟಕದಿಂದ ಈ ಬಾರಿ ಬಿಜೆಪಿಯಿಂದ ಯಾರೂ ಗೆದ್ದಿಲ್ಲ. ಹೀಗಾಗಿ ಅವಕಾಶ ನೀಡುವ ಪ್ರಶ್ನೆ ಉದ್ಭವಿಸಿಲ್ಲ. ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಸಂಪುಟದಲ್ಲಿ ಸ್ಥಾನ ಪಡೆದಿದ್ದ ಶೋಭಾ ಕರಂದ್ಲಾಜೆ ಕರಾವಳಿ ಭಾಗವನ್ನು ಪ್ರತಿನಿಧಿಸಿದ್ದರು. ಈ ಬಾರಿ ಕರಾವಳಿ ಭಾಗದಿಂದ ಆಯ್ಕೆಗೊಂಡ ಮೂವರು ಮೊದಲ ಬಾರಿಗೆ ಸಂಸದರಾಗುತ್ತಿದ್ದಾರೆ. ಹೀಗಾಗಿ ಈ ಭಾಗಕ್ಕೂ ಸಚಿವ ಸ್ಥಾನ ದಕ್ಕಿಲ್ಲ. ಮಧ್ಯ ಕರ್ನಾಟಕಕ್ಕೂ ಯಾವುದೇ ಅವಕಾಶ ಸಿಕ್ಕಿಲ್ಲ.
Related Articles
Advertisement
ಉತ್ತರಕ್ಕೊಬ್ಬರೇ ಕೇಂದ್ರ ಸಂಪುಟ ದರ್ಜೆ ಸಚಿವಹುಬ್ಬಳ್ಳಿ: ಮೋದಿ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದ ಉತ್ತರ ಕರ್ನಾಟಕದ ಏಕೈಕ ಸಚಿವ ಪ್ರಹ್ಲಾದ ಜೋಶಿ. ಸತತ ಎರಡನೇ ಬಾರಿಗೆ ಕ್ಯಾಬಿ ನೆಟ್ ಸಚಿವ ಸ್ಥಾನ ಪಡೆದ ಕೀರ್ತಿಗೆ ಜೋಶಿ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕಕ್ಕೆ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಸಚಿವ ಸ್ಥಾನ ಕಡಿಮೆ, ಕ್ಯಾಬಿನೆಟ್ ಸಚಿವ ಸ್ಥಾನ ಇನ್ನಷ್ಟು ಕಡಿಮೆ ಎನ್ನಬಹುದು. ಆದರೆ, ಪ್ರಹ್ಲಾದ ಜೋಶಿ ಸತತ 2ನೇ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಡಾ. ಯುಪಿ ಎ ಸರ್ಕಾರ-1 ಮತ್ತು 2 ಹಾಗೂ ಪ್ರಧಾನಿ ಮೋದಿ ನೇತೃತ್ವದ 3 ಅವಧಿ ಸರ್ಕಾರ ನೋಡಿದರೆ ಉತ್ತರಕ್ಕೆ ಕ್ಯಾಬಿನೆಟ್ ರ್‍ಯಾಂಕ್ ದೊರೆತಿದ್ದು ಕಡಿಮೆ.