Advertisement

ಕಿಕ್‌ ಕೊಡ್ತಿದೆ ಓಲ್ಡ್‌ ಮಾಂಕ್‌ ಗೋಲ್ಡ್‌ ಸಾಂಗ್‌

12:23 PM Feb 09, 2022 | Team Udayavani |

ಸಿನಿಮಾಗಳ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ಚಿತ್ರ ತಂಡಗಳು ಪ್ರಚಾರಕ್ಕಾಗಿ ವಿಭಿನ್ನ ಮಾರ್ಗಗಳನ್ನು ಕಂಡು ಕೊಳ್ಳುವುದನ್ನುನೀವು ನೋಡಿರುತ್ತೀರಿ.

Advertisement

ಅದರಲ್ಲಿ ಕೆಲವು ಸಿನಿಮಾಗಳು ಇಂಥವಿಭಿನ್ನ ಪ್ರಚಾರದಮೂಲಕವೇ ಪ್ರೇಕ್ಷಕರಗಮನ ಸೆಳೆಯಲುಯಶಸ್ವಿಯಾಗಿ ಬಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಇಂಥ ವಿಭಿನ್ನ ಪ್ರಚಾರದ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಸೌಂಡ್‌ ಮಾಡುತ್ತಿರುವ ಚಿತ್ರ “ಓಲ್ಡ್‌ ಮಾಂಕ್‌’. ಈಗಾಗಲೇ ಟೀಸರ್‌,ಅನಾಗ್ಲಾಫ್ ತ್ರಿಡಿ ಸ್ಟಾಂಡಿ ಪೋಸ್ಟರ್‌, ಮಾಲ್‌ ಪ್ರಮೋಶನ್ಸ್‌ ಮೂಲಕ ಸಿನಿಪ್ರಿಯರನ್ನು ಸೆಳೆದಿರುವ “ಓಲ್ಡ್‌ ಮಾಂಕ್‌’ ಚಿತ್ರತಂಡಇದೀಗ ತನ್ನ ವಿಭಿನ್ನ ಪ್ರಮೋಶನಲ್‌ ಹಾಡಿನ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಶ್ರೀನಿ ಮತ್ತು ಅದಿತಿ ಪ್ರಭುದೇವ ಜೋಡಿಯ “ಓಲ್ಡ್‌ ಮಾಂಕ್‌’ ಚಿತ್ರ ಇದೇ ಫೆ.25ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಓಲ್ಡ್‌ ಮಾಂಕ್‌’ ಚಿತ್ರದ “ಓಲ್ಡ್‌ ಈಸ್‌ ಗೋಲ್ಡು, ವೀ ಆರ್‌ ಸ್ವಲ್ಪ ಬೋಲ್ಡು.’ ಎಂಬ ಹಾಡನ್ನು ಬಿಡುಗಡೆಗೊಳಿಸಿದೆ. ರ್ಯಾಪ್‌ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡು “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಇನ್ನೊಂದು ವಿಶೇಷವೆಂದರೆ, ಈ ಹಾಡಿನಲ್ಲಿ ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗಿನ ಅನೇಕ ಜನಪ್ರಿಯ ಸಿನಿಮಾಗಳ ಪೋಸ್ಟರ್‌ಗಳನ್ನು ಬಳಸಿಕೊಂಡು, ಅದರಲ್ಲಿ “ಓಲ್ಡ್‌ ಮಾಂಕ್‌’ ಚಿತ್ರದ ಪಾತ್ರಗಳನ್ನು ಸೇರಿಸಿ, ಹಾಡಿನ ಮೂಲಕ ಪಾತ್ರ ಪರಿಚಯ ಮಾಡಲಾಗಿದೆ. “ಕಸ್ತೂರಿ ನಿವಾಸ’, “ಬಂಧನ’, “ಆಟೋರಾಜ’, “ಸಾಂಗ್ಲಿಯಾನ’, “ರಣಧೀರ’ ಹೀಗೆ ಕನ್ನಡದ ಜನಪ್ರಿಯ ಸಿನಿಮಾಗಳ ಜೊತೆಗೆ “ದರ್ಬಾರ್‌’, “ಪಿ.ಕೆ’, “ಅವೆಂಜರ್’ನಂತಹ ಪೋಸ್ಟರ್‌ಗಳನ್ನೂ ಈ ಹಾಡಿನಲ್ಲಿ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next