Advertisement

ರಿಲೀಸ್‌ಗೂ ಮೊದಲೇ ಓಲ್ಡ್‌ ಮಾಂಕ್‌ ಸೇಲ್‌!

01:19 PM Nov 10, 2020 | Suhan S |

ನಟ ಶ್ರೀನಿ ಅಭಿನಯದ ಮತ್ತು ನಿರ್ದೇಶನದ “ಓಲ್ಡ್‌ ಮಾಂಕ್‌’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದರ ನಡುವೆಯೇ “ಓಲ್ಡ್‌ ಮಾಂಕ್‌’ ಚಿತ್ರದ ತೆಲುಗು ಡಬ್ಬಿಂಗ್‌ ಮತ್ತು ರಿಮೇಕ್‌ ರೈಟ್ಸ್‌ ಮಾರಾಟವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

Advertisement

ತೆಲುಗಿನ “ಕ್ಲಾಪ್‌ ಬೋರ್ಡ್‌ ಪ್ರೊಡಕ್ಷನ್ಸ್‌’ನ ರಾಮಕೃಷ್ಣ ನಲ್ಲಂ ಮತ್ತು  “ಸ್ಟಾರ್‌ವುಡ್‌ ಪ್ರೊಡಕ್ಷನ್ಸ್‌’ನ ರವಿ ಕಶ್ಯಪ್‌ “ಓಲ್ಡ್‌ ಮಾಂಕ್‌’ ಚಿತ್ರದ ತೆಲುಗು ಡಬ್ಬಿಂಗ್‌ ಮತ್ತು ರಿಮೇಕ್‌ ರೈಟ್ಸ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ಶ್ರೀನಿ, “ಸಾಮಾನ್ಯವಾಗಿ ಸಿನಿಮಾಗಳು ರೆಡಿಯಾದ ನಂತರ ಅಥವಾ ಬಿಡುಗಡೆಯಾಗಿ ಹಿಟ್‌ ಆದ ನಂತರ ಬೇರೆ ಭಾಷೆಯ ನಿರ್ಮಾಪಕರು ಡಬ್ಬಿಂಗ್‌, ರಿಮೇಕ್‌ ರೈಟ್ಸ್‌ಕೊಂಡುಕೊಳ್ಳಲು ಮುಂದೆ ಬರುತ್ತಾರೆ. ಆದ್ರೆ ಶೂಟಿಂಗ್‌ ನಡೆಯುತ್ತಿರುವಾಗಲೇ ಸಿನಿಮಾದ ಡಬ್ಬಿಂಗ್‌, ರಿಮೇಕ್‌ ರೈಟ್ಸ್‌ ಸೇಲ್‌ ಆಗೋದು ತುಂಬ ಅಪರೂಪ. ಅದರಲ್ಲೂ ನಮ್ಮ ಸಿನಿಮಾದಲ್ಲಿ ಯಾವುದೇ ಬಿಗ್‌ ಸ್ಟಾರ್ ಇಲ್ಲದಿದ್ರೂ, ಸಿನಿಮಾದ ಕಂಟೆಂಟ್‌ ನೋಡಿ ರೈಟ್ಸ್‌ ಕೊಂಡುಕೊಂಡಿದ್ದು ಖುಷಿಯಾಗಿದೆ’ ಎನ್ನುತ್ತಾರೆ.

ಅಂದಹಾಗೆ, ಈ ಹಿಂದೆ ಶ್ರೀನಿ ಅಭಿನಯದ “ಬೀರ್‌ಬಲ್‌’ ಚಿತ್ರ ಸದ್ಯ ತೆಲುಗಿನಲ್ಲಿ “ತಿಮ್ಮರಸು’ ಹೆಸರಿನಲ್ಲಿ ರಿಮೇಕ್‌ ಆಗುತ್ತಿದೆ. “ಬೀರ್‌ಬಲ್‌’ ಚಿತ್ರ ಕನ್ನಡದಲ್ಲಿ ಸಕ್ಸಸ್‌ ಆದ ನಂತರ, ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್‌ ಆಗುತ್ತಿದೆ. ಒಟ್ಟಾರೆ “ಬೀರ್‌ ಬಲ್‌’ ಹಿಟ್‌ ಆಗಿದ್ದೂ ಕೂಡ “ಓಲ್ಡ್‌ ಮಾಂಕ್‌’ ಸಿನಿಮಾದ ಡಬ್ಬಿಂಗ್‌, ರಿಮೇಕ್‌ ರೈಟ್ಸ್‌ ಮುಂಚಿತವಾಗಿಯೇ ಸೇಲ್‌ ಆಗೋದಕ್ಕೆಕಾರಣವಾಗಿರಬಹುದು ಎಂಬುದು ಶ್ರೀನಿ ಅಂದಾಜು ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next