ಬೆಳ್ತಂಗಡಿ: ಬೆಂಗಳೂರಿನಲ್ಲಿ ಚಿನ್ನದ ಉದ್ಯಮ ಮಾಡುತ್ತಿರುವ ಕುಟುಂಬ ಧರ್ಮಸ್ಥಳಕ್ಕೆ ಅಗಮಿಸಿ ಧರ್ಮಾಧಿಕಾರಿಗೆ (ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯೂಸಿಯಂಗೆ) 1984 ಮಾಡೆಲ್ ನ ಸ್ಕೂಟರ್ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡಿದರು.
ಬೆಂಗಳೂರು ನಗರತ್ ಪೇಟೆಯಲ್ಲಿ ಜ್ಯುವೆಲರಿ ಮಳಿಗೆ ನಡೆಸುತ್ತಿರುವ ಗುಜರಾತ್ ನಿವಾಸಿ ಬಾಬು ಲಾಲ್ ಜೀ ಮತ್ತು ಕುಟುಂಬ ಸಮೇತ ಜ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸಿ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಸುಸ್ಥಿತಿಯಲ್ಲಿರುವ 1984 ಇಸವಿಯ ಮೊಡೆಲ್ ನ ಬಜಾಜ್ ಕಂಪನಿಯ ಸ್ಕೂಟರ್ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡಿದರು.
ಚಿನ್ನದ ವ್ಯಾಪಾರಿ ಬಾಬು ಲಾಲ್ ಜೀ ಅವರು 1984 ರಲ್ಲಿ ಹೊಸದಾಗಿ ಖರೀದಿಸಿ ಉಪಯೋಗಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ತನ್ನ ಮನೆಯಲ್ಲಿ ಸರಿಯಾದ ಸರ್ವೀಸ್ ಗಳನ್ನು ಮಾಡಿಸಿ ಇಟ್ಟುಕೊಂಡಿದ್ದರು, ಇದೀಗ ಧರ್ಮಸ್ಥಳಕ್ಕೆ ನೀಡಬೇಕೆಂದು ಕುಟುಂಬ ಸದಸ್ಯರು ನಿರ್ಧರಿಸಿದರು. ಅದರಂತೆ ಜ.29 ರಂದು ಕುಟುಂಬ ಸಮೇತ ಟೆಂಪೋ ಟ್ರಾವೆರ್ ನಲ್ಲಿ ಸ್ಕೂಟರ್ ಜತೆ ಅಗಮಿಸಿ ಹಸ್ತಾಂತರ ಮಾಡಿದರು.