Advertisement
ಅದರೊಂದಿಗೆ ರೈತರು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯಬಹುದಾದ ಸಸ್ಯವರ್ಗವನ್ನು ಬೆಳೆಸಿಕೊಂಡು ತನ್ನ ಜೀವನ ನಡೆಸುವವರನ್ನು ಕಾಣಬಹುದು. ಒಂದು ಗಿಡದ ಮೂಲಕ ಹಲವು ಹಣ್ಣುಗಳನ್ನು ತನ್ನದಾಗಿಸಿಕೊಳ್ಳಬಹುದು.
Related Articles
Advertisement
ಇದು ಹೆಚ್ಚಾಗಿ ಕಾಡಿನ ಪ್ರದೇಶದಲ್ಲಿ ಸಿಗುವ ಕಾರಣದಿಂದ ಇದನ್ನು ಕಾಟುಕುಕ್ಕು ಕರೆಯುತ್ತಾರೆ ಎಂಬುದು ನನ್ನ ಊಹೆಯಾಗಿದೆ. ಇದು ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಕಾಣಬಹುದಾಗಿದೆ. ಈ ಹಣ್ಣು ಎಲ್ಲ ರೀತಿಯ ಮಾವಿನ ಹಣ್ಣಿಗಿಂತ ಬೇರೆಯದೆ ಸಿಹಿಯಾದ ರುಚಿಯನ್ನು ಹೊಂದಿದೆ.
ಇದು ನಮ್ಮ ಶಾಲಾ ವಾರ್ಷಿಕ ರಜಾ ದಿನದ ಸವಿ ನೆನಪುಗಳಲ್ಲಿ ಒಂದು ಕೂಡ. ಇದು ಮಳೆ ಅಥವಾ ಜೋರು ಗಾಳಿಯು ಬಂದು ಹೋದ ಅನಂತರ ಕಾಡಿನಿಂದ ಅವುಗಳನ್ನು ಗೆಳೆಯರೊಂದಿಗೆ ಅಥವಾ ಅಣ್ಣ ಅಕ್ಕಂದಿರೊಂದಿಗೆ ಜತೆಗೂಡಿ ಇದನ್ನು ಹೆಕ್ಕುವ ಖುಷಿಯೇ ಬೇರೆ. ಅದೆಷ್ಟೋ ದಿವಸ ಬುಟ್ಟಿ, ಚೀಲವನ್ನು ಹಿಡಿದುಕೊಂಡು ಗಾಳಿ ಮಳೆ ಬಂದಾಗ ಮರದಡಿಯಲ್ಲಿಯೇ ಕುಳಿತು ಎಷ್ಟು ಮಾವಿನಕಾಯಿ ಸಿಕ್ಕಿದೆ ಎನ್ನುವ ವಿಷಯ ಈ ಕಾಲದ ಸಮಯದಲ್ಲಿ ಕಾಣುತ್ತಿಲ್ಲ.
ಅದರ ಬದಲಿಗೆ ತಮ್ಮ ತಮ್ಮ ಮೊಬೈಲ್‌ನಲ್ಲಿ ಎಷ್ಟು ಡೇಟಾ ಮುಗಿದಿದೆ ಎನ್ನುವುದು ಲೆಕ್ಕ ಹಾಕುವುದರಲ್ಲಿ ಮುಳುಗಿರುವುದು ಬೇಸರದ ಸಂಗತಿಯಾಗಿದೆ. ನಮ್ಮ ಹಿರಿಯರು ಈ ಕಾಟು ಮಾವಿನಕಾಯಿ ಎಂದರೆ ಅದರಲ್ಲಿ ಮಾಡಬಹುದಾದಂತಹ ಖಾದ್ಯಗಳನ್ನು ಮಾಡಿ ಬಿಡುತ್ತಿದ್ದರು.
ಅವುಗಳೆಂದರೆ ಇದರ ಮಿಡಿಯಿಂದ ಉಪ್ಪಿನಕಾಯಿ ಮತ್ತು ಹಣ್ಣಿನಿಂದ ಚಂಡ್ರುಪುಳಿಯನ್ನು ಮಾಡುತ್ತಿದ್ದರು. ಕೆಲವೊಂದು ಸಂದರ್ಭದಲ್ಲಿ ಇದುವೇ ರಾತ್ರಿಯ ಪದಾರ್ಥವು ಆಗಿರುತ್ತಿತ್ತು.ಒಂದಷ್ಟು ಹಿಂದಿನ ದಿನದತ್ತ ಕಣ್ಣಾಯಿಸಿದರೆ ನಾವು ಎಷ್ಟೋ ವಿಷಯಗಳಿಂದ ಹೊರ ಉಳಿದಿದ್ದೇವೆ ಎನ್ನುವುದು ಭಾಸವಾಗುತ್ತದೆ.
ಆದರೆ ಈಗಿನ ಯುವಜನತೆ ಅದರ ರುಚಿಯನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಿರಿಯರಿಗೆ ಗೊತ್ತಿರುವ ಮರಗಳ ಹೆಸರಿನಲ್ಲಿ ನಮಗೆ ಅರ್ಧದಷ್ಟು ತಿಳಿದಿರಲು ಸಾಧ್ಯವಿಲ್ಲ. ಯಾಕೆಂದರೆ ಆಧುನಿಕ ಯುಗವೆನ್ನುತ್ತ ನಮ್ಮದೇ ಪ್ರಪಂಚವೆಂದು ಜಂಗಮವಾಣಿಯಲ್ಲಿ ಮುಳುಗಿ ಬಿಟ್ಟಿದ್ದೇವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಣ ವಿಡಿಯೋಗಳೇ ಆಕರ್ಷಣೆಗಳು ಹೊರತು ನಮ್ಮ ಸುತ್ತ ಮುತ್ತಲಿನ ಹಸಿರಿನತ್ತ ಗಮನ ಹರಿಸುವಷ್ಟು ಆಸಕ್ತಿಯನ್ನು ನಮ್ಮ ಯುವಜನತೆಯಲ್ಲಿ ಕಾಣುತ್ತಿಲ್ಲ ಹಾಗಾಗಿ ಯಾವ ಮರ ಯಾವ ಹಣ್ಣು ನೀಡುತ್ತದೆ ಎನ್ನುವುದು ನಮಗೆ ತಿಳಿದಿಲ್ಲ.
ಅನೇಕ ರೀತಿಯ ಅಭಿವೃದ್ಧಿಯ ಹೆಸರಿನಲ್ಲೇ ಮತ್ತು ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಈ ಮರಗಳನ್ನು ಬುಡ ಸಮೇತ ನೆಲಕ್ಕುರುಳಿಸುತ್ತಿದ್ದಾರೆ.ಮತ್ತು ಇನ್ನೂ ಕೆಲವು ವ್ಯಾಪಾರದ ನೆಲೆಯಲ್ಲಿ ಮರಗಳ ಕೊಂಬೆಯನ್ನು ಕಡಿದು ಹಣ್ಣುಗಳನ್ನು ಮಾರುತ್ತಿದ್ದಾರೆ.
ಇದರಿಂದ ದಾರಿಹೋಕರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ ಹಾಗೂ ಆಹಾರವು ಕಡಿಮೆಯಾಗುತ್ತಿದೆ.ಕಾಲ ಕಳೆದಂತೆ ನಮ್ಮ ನಾಡ ಪ್ರಕೃತಿಯು ಬರಿದಾಗುತ್ತಿದೆ ಎಂಬುದೇ ನಿಜವಾದ ಸಂಗತಿ ಎನ್ನಬಹುದು.ಪ್ರಕೃತಿಯ ವಸ್ತು ಯಾವಾಗಲೂ ಪ್ರಕೃತಿಗೆ ಸೇರಬೇಕು.ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ತಪ್ಪು ಎಂಬುದು ನನ್ನ ಸಂದೇಶ.
- ಅಜಿತ್ ನೆಲ್ಯಾಡಿ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು