ತಲೆಮಾರಿನ ಕತೆಗಾರರನ್ನು ಓದುವ ಮನಸ್ಸಾಗಲಿ, ಅವರನ್ನು ನೆನೆಸಿಕೊಳ್ಳುವಂತಾಗಲಿ ಎಂಬ ಹಂಬಲ ನಮ್ಮದು.
Advertisement
ಹಳ್ಳಿಯ ಇಲಿ, ಪಟ್ಟಣದ ಮೂಷಿಕಒಂದು ಸಾರಿ ಪಟ್ಟಣದ ಇಲಿಯೊಂದು ಹಳ್ಳಿಗೆ ಬಂತು. ಹಳ್ಳಿಯ ಪ್ರಶಾಂತ ವಾತಾವರಣವನ್ನೂ, ಹುಲ್ಲುಗಾವಲುಗಳನ್ನೂ ನೋಡಿ ಅದಕ್ಕೆ ಆಶ್ಚರ್ಯವಾಯಿತು. ಹಳ್ಳಿಯ ಇಲಿ ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಹಸಿಯಾದ ಬಟಾಣಿಯನ್ನೂ, ಮೂಲಂಗಿ, ಸೊಪ್ಪು ಮತ್ತಿತರ ಕಾಳುಗಳನ್ನು ತಿನ್ನುವುದಕ್ಕೆ ಕೊಟ್ಟಿತು. ಆಗ ಪಟ್ಟಣದ ಇಲಿ ಹೇಳಿತು: “ನಮ್ಮೂರಿಗೆ ಬಾ. ಅಲ್ಲಿ ಎಷ್ಟೊಂದು ಥರದ ಆಹಾರ ಇದೆ, ನೋಡುವಿಯಂತೆ!’.
Related Articles
ಅಕ್ಬರನ ಆಸ್ಥಾನದಲ್ಲಿ ದರ್ಬಾರು ನಡೆಯುತ್ತಿತ್ತು. ಮಾಮೂಲಿನ ರಾಜಕಾರಣ ಸಮಸ್ಯೆಗಳ ಚರ್ಚೆಯಾದ ಬಳಿಕ ಅಕºರ್ ಮಹಾರಾಜ ಇದ್ದಕ್ಕಿದ್ದಂತೆ,-“ನಮ್ಮ ರಾಜಧಾನಿಯಲ್ಲಿ ಎಷ್ಟು ಕಾಗೆಗಳಿವೆ ಗೊತ್ತೆ?’ ಎಂದು ಕೇಳಿದ.
Advertisement
ಸಭಾಸದರು, ಪಂಡಿತವರೇಣ್ಯರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇದೆಂಥ ಪ್ರಶ್ನೆ, ಇದಕ್ಕೆ ಉತ್ತರಿಸಲು ಸಾಧ್ಯವೇ ಎಂದು ಮನಸ್ಸಿನಲ್ಲಿಯೇ ಚಿಂತಿಸಿದರು. ಅವರಿಂದ ಉತ್ತರ ಬಾರದಿದ್ದುದನ್ನು ನೋಡಿ, ಅಕºರ್ ಮಹಾಮಂತ್ರಿ ಬೀರನಲ್ಲನತ್ತ ತಿರುಗಿ, “ನಿನಗೆ ಗೊತ್ತೇ ಬೀರಬಲ?’ ಎಂದು ಕೇಳಿದ.
ಬೀರಬಲ ಮೇಲೆದ್ದು, “ಗೊತ್ತು ಮಹಾಸ್ವಾಮಿ. ರಾಜಧಾನಿಯಲ್ಲಿ ಅರವತ್ತು ಸಾವಿರದ ಐದುನೂರ ಐವತ್ತು ಕಾಗೆಗಳಿವೆ’ ಎಂದು ಹೇಳಿದ.“ಅದು ಹ್ಯಾಗೆ? ಒಂದು ವೇಳೆ ಆ ಸಂಖ್ಯೆಗಿಂತ ಜಾಸ್ತಿ ಕಾಗೆಗಳಿದ್ದರೆ?’ ಎಂದು ಪ್ರಶ್ನಿಸಿದ ಅಕ್ಬರ.
“ಆಗ ನಮ್ಮೂರಿನ ಕಾಗೆಗಳ ನೆಂಟರಿಷ್ಟರು ಬೇರೆ ಊರಿನಿಂದ ಇಲ್ಲಿಗೆ ಬಂದಿದ್ದಾರೆ ಎಂದಾಗುತ್ತದೆ’ ಎಂದ ಬೀರಬಲ.
“ಸರಿ. ಆದರೆ, ನೀನು ಹೇಳಿದ ಸಂಖ್ಯೆಗಿಂತ ಕಡಿಮೆ ಇದ್ದರೆ?’
“ಆಗ ನಮ್ಮೂರಿನ ಕಾಗೆಗಳು ಪರವೂರಿನ ನೆಂಟರ ಮನೆಗೆ ಹೋಗಿವೆ ಎಂದು ಅರ್ಥವಾಗ್ತದೆ ಬಾದಶಹ’ ಎಂದು ಜಾಣ್ಮೆಯಿಂದ ನುಡಿದ ಬೀರಬಲ. -ಅನುಪಮಾ ನಿರಂಜನ
(“ದಿನಕ್ಕೊಂದು ಕಥೆ’ ಕಥಾಮಾಲೆಯಿಂದ) ಪರಿಚಯ:
ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಅನುಪಮಾ ನಿರಂಜನ ಅವರು ಕನ್ನಡದ ಪ್ರಮುಖ ಬರಹಗಾರ್ತಿ. ಸಾಮಾಜಿಕ ಕಾದಂಬರಿಗಳು, ವೈದ್ಯಕೀಯ ಪುಸ್ತಕಗಳನ್ನು ಇವರು ಬರೆದಿದ್ದಾರೆ. ಮಕ್ಕಳಿಗಾಗಿ ಇವರು ಬರೆದ “ದಿನಕ್ಕೊಂದು ಕಥೆ’ ಎಂಬ 12 ಸಂಪುಟಗಳ ಕಥಾಮಾಲಿಕೆ ನಾಡಿನ ಮಕ್ಕಳೆಲ್ಲರೂ ಓದುವಂಥದ್ದು.