Advertisement
ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸುವ ಕೆಎಸ್‌ಆರ್‌ಪಿ ಸಿಬಂದಿಗೆ ಉಳಿದು ಕೊಳ್ಳುವುದಕ್ಕೆ ಸೂಕ್ತ ಸ್ಥಳವಿಲ್ಲದೆ ಯಾವುದೋ ಮದುವೆ ಹಾಲ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಉಳಿದುಕೊಳ್ಳಬೇಕಿತ್ತು. ಇದೀಗ ಇಂತಹ ಸಿಬಂದಿಗಾಗಿ ಪೊಲೀಸ್ ಇಲಾಖೆ ಸೂಕ್ತ ನಿರ್ಧಾರ ಕೈಗೊಂಡಿದ್ದು, ಪ್ರಸ್ತುತ ಕಟ್ಟಡ ದುರಸ್ತಿಗೊಳ್ಳುತ್ತಿದೆ.
Related Articles
ಗೋಡೆ, ಅಡಿಪಾಯ ಸುಸಜ್ಜಿತವಾಗಿ ದ್ದರೂ, ಹಂಚಿನ ಮೇಲ್ಛಾವಣಿ ಅರ್ಧಂ ಬರ್ಧ ಬಿದ್ದುಕೊಂಡಿತ್ತು. ಆದರೆ ಇದೀಗ ಹಂಚಿನ ಮೇಲ್ಛಾವಣಿಯನ್ನು ಸಂಪೂರ್ಣ ದುರಸ್ತಿಪಡಿಸಲಾಗುತ್ತಿದೆ. ಎದುರಿನ ಭಾಗದಲ್ಲಿ ಜಿಐ ಶೀಟ್‌ಗಳ ಮೂಲಕ ಮೇಲ್ಛಾವಣಿ ಮಾಡಲಾಗಿದೆ. ಜತೆಗೆ ಸಿಮೆಂಟ್ ಫಾಸ್ಟರಿಂಗ್ ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳು ನಡೆದು ಬಣ್ಣ ಬಳಿದರೆ ಹೊಸ ಕಟ್ಟಡದಂತೆ ಮಿಂಚಲಿದೆ.
Advertisement
ಪ್ರಸ್ತುತ ಕಟ್ಟಡದಲ್ಲಿ ಕೆಎಸ್‌ಆರ್‌ಪಿ ಸಿಬಂದಿ, ಬಂದೋಬಸ್ತ್ಗೆ ಆಗಮಿಸಿದ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ಹಾಲ್ ಇರುತ್ತದೆ. ಜತೆಗೆ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆ ಬಂದಲ್ಲಿ ವಸತಿಗೃಹವಾಗಿ ಪರಿವರ್ತನೆಗೊಳ್ಳಲಿದೆ. ಎಲ್ಲೆಲ್ಲೋ ಉಳಿದುಕೊಳ್ಳುವ ಸಿಬಂದಿ ತಮ್ಮದೇ ಸೂರಿನಲ್ಲಿ ಆಶ್ರಯ ಪಡೆಯಬಹುದಾಗಿದೆ.
ವಸತಿ ಗೃಹದ ರೀತಿ ದುರಸ್ತಿಈ ಕಟ್ಟಡವು ಪೊಲೀಸ್ ಇಲಾಖೆಗೆ ಹಸ್ತಾಂತರವಾಗಿದ್ದು, ಕೆಎಸ್‌ಆರ್‌ಪಿ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ವಸತಿ ಗೃಹದ ರೀತಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ಉಳಿದುಕೊಳ್ಳುವುದಕ್ಕೆ ಹಾಲ್ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯ ವಾಗಿ ಸಿಬಂದಿ ಮದುವೆ ಹಾಲ್ ಗಳಲ್ಲಿ ಉಳಿದುಕೊಂಡಾಗ ಸಮಾರಂಭಗಳಿದ್ದಾಗ ಎದ್ದು ಹೋಗ ಬೇಕಾಗುತ್ತದೆ. ಆದರೆ ಈ ವ್ಯವಸ್ಥೆಯಿಂದ ಸೂಕ್ತ ವಸತಿ ಸಿಕ್ಕಂತಾಗುತ್ತದೆ.
-ಅವಿನಾಶ್, ಪಿಎಸ್‌ಐ, ಬಂಟ್ವಾಳ ನಗರ ಪೊಲೀಸ್ ಠಾಣೆ ಸಮಾರಂಭಗಳಿದ್ದಾಗ ತೊಂದರೆ
ಬಂಟ್ವಾಳದಲ್ಲಿ 2 ಕೆಎಸ್‌ಆರ್‌ಪಿ ತಂಡ ವಿದ್ದು, ತಲಾ 20 ಮಂದಿ ಇರುತ್ತಾರೆ. ಇವರು ಇಲ್ಲಿನ ಮದುವೆ ಹಾಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಳಿಯಬೇಕಿತ್ತು. ಹಾಲ್‌ಗಳಲ್ಲಿ ಮದುವೆ, ಇನ್ನಿತರ ಸಮಾರಂಭಗಳಿದ್ದಾಗ ಎದ್ದು ಹೋಗಬೇಕಿತ್ತು. ಇದು ಸಾಕಷ್ಟು ತೊಂದರೆಯಾಗುತ್ತಿರುವ ಕಾರಣ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ಈ ಕಟ್ಟಡವಿರುವಲ್ಲಿ ಕೆಎಸ್‌ಆರ್‌ಪಿಯ ಬಸ್ ನಿಲ್ಲಿಸುವುದಕ್ಕೂ ಸೂಕ್ತ ಸ್ಥಳವಿದೆ.