Advertisement

ಪಾಕ್ ನಲ್ಲಿ 1800 ವರ್ಷ ಹಳೆಯ ಬುದ್ಧ ವಿಗ್ರಹ ಪತ್ತೆ: ಧ್ವಂಸ ಮಾಡಿದ ಸ್ಥಳೀಯರು

01:50 PM Jul 19, 2020 | keerthan |

ಇಸ್ಲಾಮಾಬಾದ್: ಕಟ್ಟಡ ನಿರ್ಮಾಣಕ್ಕೆ ಗುಂಡಿ ತೋಡುವ ವೇಳೆ ದೊರೆತ ಪುರಾತನ ಬುದ್ಧ ಪ್ರತಿಮೆಯನ್ನು ಸ್ಥಳೀಯರು ನಾಶಪಡಿಸಿದ ಘಟನೆ ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ನಡೆದಿದೆ.

Advertisement

ಖೈಬರ್ ಪ್ರಾಂತ್ಯದ ಮರ್ದನ್ ಜಿಲ್ಲೆಯ ತಖ್ತ್ ಬಾಹಿ ಎಂಬ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಪಾಯ ತೋಡುವಾಗ ಬುದ್ಧನ ವಿಗ್ರಹ ದೊರೆತಿದೆ. ಇದು ಸುಮಾರು 1800 ವರ್ಷಗಳಷ್ಟು ಹಳೆಯದ್ದು ಎನ್ನಲಾಗಿದೆ. ಇದು ಗಾಂಧಾರ ನಾಗರಿಕತೆಗೆ ಸೇರಿದ ವಿಗ್ರಹ ಎನ್ನಲಾಗಿದೆ.

ಈ ಬುದ್ಧ ವಿಗ್ರಹವನ್ನು ಸ್ಥಳೀಯ ಮೌಲ್ವಿಯ ಸೂಚನೆಯ ಮೇರೆಗೆ ಸ್ಥಳೀಯರು ಈ ವಿಗ್ರಹವನ್ನು ನಾಶ ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ಪುರಾತತ್ವ ಇಲಾಖೆ ನಿರ್ದೇಶಕ ಅಬ್ದುಲ್ ಸಮದ್, ವಿಗ್ರಹ ನಾಶ ಮಾಡಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next