Advertisement

ನ್ಯಾಯಕ್ಕಾಗಿ ವೃದ್ಧನ ಧರಣಿ

03:18 PM Sep 15, 2021 | Team Udayavani |

ನೆಲಮಂಗಲ: ನಾನು ವಾಸವಿರುವ ಬಾಡಿಗೆ ಮನೆಯನ್ನು ಕೆಡವಿ ಸಾಮಾಗ್ರಿಗಳನ್ನು ಹೊರಗೆ ಬಿಸಾಡಿದ್ದಾರೆ ಎಂದು ನಗರದ ಜಕ್ಕಸಂದ್ರ ಗಾಲ್ಲಿ
ವಾಸವಾಗಿದ್ದ ಮುದುಕ ನಾಗಣ್ಣ ಆರೋಪಿಸಿದ್ದು ಮನೆಯ ಎದುರು ಕುಳಿತು ಪ್ರತಿಭಟನೆ ಮಾಡಿದ್ದಾರೆ. ಹಾಗೆಯೇ ವೀರಬಸಪ್ಪನ ಮೇಲೆ
ಟೌನ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ನಗರದ ಜಕ್ಕಸಂದ್ರದಲ್ಲಿನ ನಿವೇಶನದ ಜಾಗದಲ್ಲಿ ಸೀಮೆಂಟ್‌ ಇಟ್ಟಿಗೆಯಿಂದ ನಿರ್ಮಾಣವಾದ ಸಣ್ಣ ದೊಂದು ಬಾಡಿಗೆ ಮನೆಯಲ್ಲಿ ನಾಗಣ್ಣ ವಾಸವಿದ್ದರು, ನಿವೇಶನ ಮಾಲೀಕ ಸಿದ್ದರಾಜು ಮನೆ ನಿರ್ಮಾಣ ಮಾಡಿದ್ದು 2ತಿಂಗಳ ಹಿಂದೆ 5ಸಾವಿರ ಅಡ್ವಾನ್ಸ್‌ ಹಣ ನೀಡಿ ಬಾಡಿಗೆ ಪಡೆದು ಕೊಂಡಿದ್ದರು. ಆದರೆ ಕೆಲವು ವ್ಯಕ್ತಿಗಳು ನಿವೇಶನ ನನ್ನದು ನನ್ನ ಜಾಗದಲ್ಲಿ ನೀನು ವಾಸವಿರಲು ಸಾಧ್ಯವಿಲ್ಲ ಎಂದು ಮನೆಯನ್ನು ಕೆಡವಿ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದಿದ್ದಾರೆ. ಇದರಿಂದ ಮನನೊಂದ ಮುದುಕ ನಾಗಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇವರ ಫೋಟೋ ಹಿಡಿದು ಬಾಡಿಗೆ ಮನೆಯ ಎದುರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಸ್ಥಳಕ್ಕೆ ಬಂದ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಡಾ.ಬಿ ರಂಗನಾಥ್‌ ಮುದುಕ ನಾಗಣ್ಣನಿಗೆ ಧೈರ್ಯ ತುಂಬಿ ಪೊಲೀಸರಿಗೆ ದೂರು ನೀಡಿದ್ದು ಡಾ.ಬಿ ರಂಗನಾಥ್‌ ಮುದುಕನ ಜೀವನಕ್ಕೆ ಆಸರೆಯಾಗುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ಮೂರ್ತಿ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

ಕಣ್ಣೀರಿಟ್ಟ ವೃದ್ಧ
ಕೂಲಿ ನಾಲಿ ಮಾಡಿ 10ಸಾವಿರ ಹಣವನ್ನು ಕಪಾಟಿನಲ್ಲಿ ಇಟ್ಟು ಕೊಂಡಿದ್ದೇನು ನಾನು ಇಲ್ಲದ ಸಮಯದಲ್ಲಿ ಮನೆಯನ್ನು ಕೆಡವಿ ಮನೆ ಸಾಮಾಗ್ರಿಯನ್ನು ಹೊರಗೆ ಹಾಕಿದ್ದು ಹಣವೂ ಇಲ್ಲದಂತಾಗಿದೆ, ದುಡಿದು ಬದುಕುವ ನಮ್ಮ ಮೇಲೆ ವೀರ ಬಸಪ್ಪ ಎಂಬ ವ್ಯಕ್ತಿ ಮನೆ ಕೆಡವಿ ಸಮ ಸ್ಯೆ ಮಾಡಿದ್ದು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಮುದುಕ ನಾಗಣ್ಣ ಕಣ್ಣೀರಿಟ್ಟಿದ್ದಾನೆ, ಪೊಲೀಸರು ಸ್ಥಳಪರಿಶೀಲನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next