ಮಧುಗಿರಿ: ದಶಕದ ಹಿಂದೆ ಗಂಡನನ್ನು ಕಳೆದು ಕೊಂಡ ವೃದ್ಧೆ ಅಕ್ಕಮ್ಮ ಬಡತನದಿಂದಲೇ ಬದುಕಿ ಗ್ರಾಪಂನಿಂದ 1962ರಲ್ಲೆ ಮನೆ ನಿರ್ಮಾಣಕ್ಕೆ ಅನು ಮತಿ ಪಡೆದು 1983ರಲ್ಲಿ ಹೆಂಚಿನ ಮನೆ ನಿರ್ಮಿಸಿ ಕೊಂಡರು. ಆದರೆ, ಪಕ್ಕದ ಜಮೀನಿನವರಿಂದ ವಿನಾ ಕಾರಣ ಕಿರುಕುಳ ಅನುಭವಿಸುತ್ತಿದ್ದು, ಜಿಲ್ಲಾ ಸತ್ರ ನ್ಯಾಯಾಲಯವೇ ಅಕ್ಕಮ್ಮನ ಪರ ತೀರ್ಪು ನೀಡಿದ್ದರೂ ಸ್ಥಳೀಯ ವಿರೋಧಿಗಳ ಕಾಟಕ್ಕೆ ನೊಂದು ವಿಷ ಕುಡಿಯುವ ನಿರ್ಧಾರಕ್ಕೆ ಬಂದಿರುವುದು ದುರಂತ.
ಈ ಘಟನೆ ನಡೆದಿರುವುದು ಕಸಬಾ ಹೋಬಳಿಯ ಬಿಜವರ ಗ್ರಾಪಂನ ಕಂಭತ್ತಹಳ್ಳಿಯಲ್ಲಿ. ಗ್ರಾಮದ ಅಕ್ಕಮ್ಮ ಕೋಂ ಗುಜ್ಜಾರಪ್ಪ 1962ರಲ್ಲಿ ಗ್ರಾಮದ ಸರ್ಕಾರಿ ಜಾಗದಲ್ಲಿ ಹಿಂದಿನ ಭಕ್ತರಹಳ್ಳಿ ಗ್ರೂಪ್ ಪಂಚಾಯಿತಿ(ಈಗಿನ ಬಿಜವರ ಗ್ರಾಪಂ)ಗೆ ಕಿಮ್ಮತ್ತು ಕಟ್ಟಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಆದರೆ, ಈ ಜಾಗ ನಮಗೆ ಸೇರಬೇಕೆಂದು ಪಕ್ಕದ ಜಮೀನಿನ ಪುಟ್ಟತಾಯಮ್ಮ ಎಂಬುವರು 1994-95ರಲ್ಲಿ ಉಪ ವಿಭಾಗಾಧಿಕಾರಿ ಕೋರ್ಟಿನಲ್ಲಿ ದಾವೆ ಹೂಡಿದ್ದು, ಲೈಸೆನ್ಸ್ ರದ್ದುಗೊಳಿಸಲು ತಿಳಿಸಿದ್ದರು.
ಆದರೆ, ಆದೇಶದ ವಿರುದ್ಧ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋದ ಅಕ್ಕಮ್ಮ 1962ರಿಂದ ಪ್ರಸ್ತುತ ವರ್ಷದವರೆಗೂ ಸ್ಥಳೀಯ ಗ್ರಾಪಂ ನೀಡಿದ್ದ ಸಭೆಯ ನಡಾವಳಿ,ಕಂದಾಯ ರಸೀದಿ, ಖಾತಾ ನಕಲು ದಾಖಲೆ ನೀಡಿದ್ದರು. ಇದನ್ನು ಪರಿಶೀಲಿಸಿದ ಲ್ಲಾ ಸತ್ರ ನ್ಯಾಯಾಲಯ2013 ರಲ್ಲಿ ಹಾಗೂ ಮತ್ತೆ 2018ರಲ್ಲಿ ದಾಖಲೆ ಪರಿಶೀಲಿಸಿ ಪುಟ್ಟತಾಯಮ್ಮನ ಜಮೀನು ಅಳತೆ ಮಾಡಿಸಿ ಅಕ್ಕಮ್ಮ ಪುಟ್ಟತಾಯಮ್ಮನ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿಲ್ಲ ಎಂದು ತೀರ್ಪು ನೀಡಿತ್ತು.
ಇದಕ್ಕೆ ಸ್ಥಳೀಯ ಗ್ರಾಪಂ ಯಾವುದೇ ತಕರಾರು ಮಾಡಿರಲಿಲ್ಲ. ಕಾರಣ 1962ರಲ್ಲಿ ನಡೆದ ಗ್ರಾಪಂನ ನಡಾವಳಿಗಳ ಹಾಗೂ 1983ರಲ್ಲಿ ನಡೆದನಡಾವಳಿಗಳಲ್ಲಿ ಮೇಲಾಧಿಕಾರಿ ಅನುಮತಿ ಪಡೆದುಅಕ್ಕಮ್ಮನಿಗೆ ಜಾಗ ಮಂಜೂರಾಗಿದ್ದು, ಮನೆ ನಿರ್ಮಿಸಿಕೊಳ್ಳಲು ಗ್ರಾಪಂ ಅನುಮತಿ ನೀಡಿತ್ತು. ಆದರೆ, ಈ ಕಾನೂನಿಗೆ ಬೆಲೆ ನೀಡದ ಪುಟ್ಟತಾಯಮ್ಮನ ಕುಟುಂಬ ಮತ್ತೆ ಕಿರುಕುಳ ನೀಡಲು ಆರಂಭಿಸಿ ಬಿರುಕು ಬಿಟ್ಟ ಮನೆಯ ಸುತ್ತಲಿನ ಕಾಂಪೌಂಡ್‌ನ ಕಲ್ಲುಗಳನ್ನು ಜೆಸಿಬಿಯಿಂದ ನಾಶಗೊಳಿಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳದ ಪೊಲೀಸರು ವೃದ್ಧೆ ಸಬೂಬು ಹೇಳಿ ಕಳುಹಿಸದ್ದರು. ಇದರಿಂದ ಮನನೊಂದ ವೃದ್ಧೆ ಆತ್ಮಹತ್ಯೆಗೂ ಯತ್ನಿಸಿದ್ದರು.
ಈ ಬಗ್ಗೆ ಮಾತನಾಡಿದ ವೃದ್ಧೆ ಅಕ್ಕಮ್ಮ, ಪತಿ 50 ವರ್ಷದ ಹಿಂದೆಯೇ ಮೃತಪಟ್ಟಿದ್ದು, ಒಬ್ಬ ಪುತ್ರ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದಾನೆ. ಈ ಜಾಗ ಬಿಟ್ಟರೆ ನನಗೆ ಯಾವುದೇ ಆಸ್ತಿಯಿಲ್ಲ. ಸೊಂಟ ಮುರಿದುಕೊಂಡು ಕೈಲಾದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಯಾರ ಆಸರೆಯೂಇಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮದಲ್ಲದ ಜಾಗವನ್ನು ಪಡೆಯಲು ಪುಟ್ಟತಾಯಮ್ಮ ಎಂಬುವರು ನಾನಾ ತಂತ್ರ ಹಣೆದು ತೊಂದರೆ ಕೊಡುತ್ತಿದ್ದಾರೆ. ನನ್ನಜಾಗ ಕಬಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸ್ಥಳೀಯಗ್ರಾಪಂ ಹಾಗೂ ನ್ಯಾಯಾಲಯದ ಆದೇಶದಂತೆ ಪೊಲೀಸರು ನನಗೆ ಸಹಕಾರ ನೀಡಬೇಕು. ಈ ಜಾಗವಲ್ಲದೆ ಬೇರೆ ಕಡೆ ಇಷ್ಟೇ ಅಳತೆ ಜಾಗ ಕೊಟ್ಟು ಮನೆ ನಿರ್ಮಿಸಿಕೊಟ್ಟರೆ ಅಷ್ಟೇ ಸಾಕು. ಜಾಗದ ಎಲ್ಲ ದಾಖಲೆ ನನ್ನ ಬಳಿಯಿದ್ದು, ನ್ಯಾಯಾಲಯ ಆದೇಶನೀಡಿದರೂ ನನಗೆ ಅಧಿಕಾರಿಗಳಿಂದ ಯಾವುದೇ ಸಹಕಾರವಿಲ್ಲದಾಗಿದೆ. ದಯಮಾಡಿ ನನಗೆ ಕೊನೆಗಾಲದಲ್ಲಿ ಬದುಕಲು ಹಾಗೂ ಇರುವ ಜಾಗದಲ್ಲಿ ಮಗನಿಗೆ ಮನೆ ನಿರ್ಮಿಸಿ ಕೊಡಲು ಅಧಿಕಾರಿಗಳು ಸಹಾಯ ಮಾಡುವಂತೆ ಕಣ್ಣೀರಿಟ್ಟಿದ್ದಾರೆ.
ಈ ಪ್ರಕರಣದಲ್ಲಿ ಅಕ್ಕಮ್ಮನ ಪರವಾಗಿ 2ನ್ಯಾಯಾಲಯ ತೀರ್ಪು ನೀಡಿದೆ. ಮತ್ತೆ ನ್ಯಾಯಾಲಯಕ್ಕೆ ಪ್ರಕರಣ ಹೋಗಬಹುದಾಗಿದ್ದು, ಗ್ರಾಪಂನಿಂದ ಗ್ರಾಮ ಠಾಣಾ ಗುರುತಿಸಲು ಮುಂದಾಗುತ್ತೇವೆ. ಮುಂದಿನ ನ್ಯಾಯಾಲಯದಲ್ಲಿ ಏನು ಆದೇಶ ಬರುತ್ತದೋ ಅದರಂತೆ ಕ್ರಮ ಕ್ಯಗೊಳ್ಳಲಾಗುವುದು. ವೃದ್ಧೆ ಒಪ್ಪಿದರೆ ಬೇರೆ ಕಡೆ ನಿವೇಶನ ನೀಡಿ ಮನೆ ಕಟ್ಟಿಕೊಡುವ ಬಗ್ಗೆ ಚಿಂತಿಸಲಾಗುವುದು.
–ರಂಗನಾಥ್, ಪಿಡಿಒ ಬಿಜವರ ಗ್ರಾಪಂ
ಈ ಜಾಗ ಬಿಟ್ಟರೆ ನನಗೆ ಬೇರೆ ಏನೂಆಸ್ತಿಯಿಲ್ಲ. ಪಕ್ಕದವರ ಕಿರುಕುಳಕ್ಕೆಬದುಕಲು ಭಯವಾಗುತ್ತಿದೆ. ದಾಖಲೆ ನನ್ನಪರವಾಗಿದ್ದು, ನ್ಯಾಯಕ್ಕಾಗಿ ಹೋರಾಡುತ್ತೇನೆ.ನನಗೆ ನನ್ನ ಜಾಗ ಬಿಡಿಸಿಕೊಟ್ಟರೆ ಮನೆ ಕಟ್ಟಿಕೊಳ್ಳುತ್ತೇನೆ.
–ಅಕ್ಕಮ್ಮ, ನೊಂದ ವೃದ್ಧೆ.
–ಮಧುಗಿರಿ ಸತೀಶ್