– ಹೀಗಂತ “ಎ ಪ್ಲಸ್’ ಚಿತ್ರದ ಶೀರ್ಷಿಕೆ ಕೆಳಗೆ ಬರೆಯಲಾಗಿತ್ತು. ಗಿಮಿಕ್ಗಾಗಿ ಈ ಅಡಿಬರಹ ಬಳಸಲಾಗಿದೆಯಾ? ಈ ಪ್ರಶ್ನೆಗೆ ಉತ್ತರಿಸಲು ಮೈಕ್ ಎತ್ತಿಕೊಂಡರು ನಿರ್ದೇಶಕ ವಿಜಯ್ ಸೂರ್ಯ. ಅವರಿಗೆ ಇದು ಮೊದಲ ಚಿತ್ರ. ಅಕ್ಟೋಬರ್ 5 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೊದಲು ಮಾತಿಗಿಳಿದ ನಿರ್ದೇಶಕರು, “ಯಾವುದೇ ಒಂದು ಚಿತ್ರದ ಪೋಸ್ಟರ್ ಇರಲಿ, ಟೀಸರ್, ಟ್ರೇಲರ್ ಇರಲಿ, ಆ ಚಿತ್ರದ ಬಗ್ಗೆ ಒಂದೊಂದು ಕಥೆ ಹೇಳುತ್ತವೆ. ಹಾಗೆಯೇ, ಇಲ್ಲಿರುವ ಅಡಿಬರಹ ಕೂಡ ಕುತೂಹಲ ಮೂಡಿಸಿದೆ. ಆದರೆ, ಯಾಕೆ ಹೀಗೆ ಬರೆಯಲಾಗಿದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರ ನೋಡಿದಾಗಲಷ್ಟೇ ಅದರ ಅರ್ಥ ಗೊತ್ತಾಗುತ್ತೆ. ನಾನು ಉಪೇಂದ್ರ ಅವರ ಬಳಿ ಕೆಲಸ ಮಾಡಿದ್ದೇನೆ. ಅವರ ಸೂಕ್ಷ್ಮತೆ ಅರಿತಿದ್ದೇನೆ. ಅವರ ಜೊತೆಗಿನ ಅನುಭವ ಬೆರೆಸಿ, ಈ ಚಿತ್ರ ಮಾಡಿದ್ದೇನೆ. ಅವರ “ಎ’ ಚಿತ್ರಕ್ಕೂ ನನ್ನ “ಎ ಪ್ಲಸ್’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂಬುದು ನಿರ್ದೇಶಕರ ಮಾತು. ಎಲ್ಲಾ ಸರಿ, “ಎ ಪ್ಲಸ್’ ವಿಶೇಷತೆ ಏನು? “ಲವ್ ಥ್ರಿಲ್ಲರ್ ಅಂದುಕೊಳ್ಳಬಹುದು, ರಾಜಕೀಯ ವಿಷಯಗಳ ಮೇಲಿನ ಚಿತ್ರಣವೂ ಇದೆ ಅಂದುಕೊಳ್ಳಬಹುದು. ಆ್ಯಕ್ಷನ್, ಅಂಡರ್‌ವರ್ಲ್ಡ್ ಅಂಶಗಳು ಇರಬಹುದಾ ಎಂಬ ಪ್ರಶ್ನೆ ಕಾಡಬಹುದು. ಆದರೆ, ಇದು ಇವೆಲ್ಲದರ ಮಿಶ್ರಣದ ಜೊತೆಗೆ ಹೊಸತೇನನ್ನೋ ಹೇಳಲಿದೆ. ಅದನ್ನು ಚಿತ್ರದಲ್ಲೇ ನೋಡಿ’ ಅಂತ ಹೇಳಿ ಸುಮ್ಮನಾದರು ವಿಜಯ್ ಸೂರ್ಯ.
Advertisement
ನಿರ್ಮಾಪಕ ಪ್ರಭುಕುಮಾರ್ ಅವರಿಗೆ ಇದು ಮೊದಲ ಚಿತ್ರ. ಅವರು ಅರ್ಧ ಗಂಟೆ ಕಥೆ ಕೇಳಿದರಂತೆ. ಆಮೇಲೆ, ಮುಂದಕ್ಕೆ ಕಥೆ ಕೇಳದೆ, ಕೆಲ ಪ್ರಶ್ನೆಗಳನ್ನು ಕೇಳಿದರಂತೆ. ಆಗ ನಿರ್ದೇಶಕರು, ಅದೇ ಸಿನಿಮಾ ಅಂದರಂತೆ. ಇಲ್ಲಿ ಹೊಸ ವಿಷಯ ಇದೆ ಎಂಬ ಕಾರಣಕ್ಕೆ ನಾನು ಚಿತ್ರ ಮಾಡೋಕೆ ಗ್ರೀನ್‌ಸಿಗ್ನಲ್ ಕೊಟ್ಟೆ. ರಾಜ್ಯಾದ್ಯಂತ 150 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ. ಜಯಣ್ಣ ವಿತರಣೆ ಮಾಡುತ್ತಿದ್ದಾರೆ’ ಎಂದು ವಿವರ ಕೊಟ್ಟರು ಪ್ರಭುಕುಮಾರ್.