Advertisement
ಈಗ ನಗರ ವ್ಯಾಪ್ತಿಯನ್ನು ಕೇಂದ್ರೀಕರಿಸಿ ಸುಮಾರು 250ಕ್ಕೂ ಅಧಿಕ ಓಲಾ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ನಡೆಸುತ್ತಿದೆ. ಸರಕಾರದ ಆದೇಶದ ಪ್ರಕಾರ ಮಾ. 25ರಿಂದ 2021ರ ಜೂ. 19ರ ವರೆಗೆ ಚಾಲ್ತಿಯಲ್ಲಿರುವ ಪರವಾನಿಗೆಯನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸಬೇಕಾಗಿದೆ. ಜತೆಗೆ ಟ್ಯಾಕ್ಸಿ ಸೇವೆಯನ್ನು ಮಾ.25ರಿಂದ ನಿಲ್ಲಿಸಬೇಕು. ಮುಂದಿನ ಆರು ತಿಂಗಳುಗಳ ಕಾಲ ಪರವಾನಿಗೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಮತ್ತು ಡ್ರೈವರ್ ಅಸೋಸಿಯೇಶನ್ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ‘ಸುದಿನ’ ಜತೆಗೆ ಮಾತನಾಡಿ, ‘ಓಲಾ ಸಂಸ್ಥೆಯ ಪರವಾನಿಗೆ 6 ತಿಂಗಳು ರದ್ದುಗೊಳಿಸಿ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸುಮಾರು 250ಕ್ಕೂ ಅಧಿಕ ವಾಹನಗಳ ಚಾಲಕರು ಅತಂತ್ರರಾಗಿದ್ದಾರೆ. ಸರಕಾರದ ಆದೇಶದಿಂದ ಚಾಲಕರು ಆತಂಕ ಎದುರಿಸುವಂತಾಗಿದೆ. ಕಂಪೆನಿಯವರ ತಪ್ಪಿನಿಂದಾಗಿ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಡ್ರೈವರ್ ಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಮಾಡಿಕೊಡಬೇಕು. ಸರಕಾರದ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಮತ್ತು ಓಲಾ ಕಾರುಗಳ ಮೇಲೆ ಇತರ ಖಾಸಗಿ ಕಾರುಗಳ ಚಾಲಕರು, ಮಾಲಕರು ದಬ್ಟಾಳಿಕೆ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Related Articles
ಮಾ. 25ರಿಂದ ಓಲಾ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ. ಹೀಗಾಗಿ ಮಂಗಳೂರು ಅಂ.ವಿಮಾನ ನಿಲ್ದಾಣ, ರೈಲು ನಿಲ್ದಾಣದಲ್ಲಿ ಓಲಾ ಸೇವೆ ಮುಂದುವರಿಸದಂತೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮಾ.25ರಿಂದ ಈ ಬಗ್ಗೆ ಇಲಾಖೆಯಿಂದ ತಪಾಸಣೆ ನಡೆಸಲಾಗುವುದು.
– ಜಿ.ಎಸ್. ಹೆಗಡೆ, ಪ್ರಾದೇಶಿಕ
ಸಾರಿಗೆ ಅಧಿಕಾರಿ ಮಂಗಳೂರು
Advertisement