Advertisement
ಸುಗ್ಗಿ ಹಬ್ಬ ಮುಗಿದಿದ್ದು ತಾಲೂಕಿನಲ್ಲಿ ಭತ್ತ, ರಾಗಿ, ಹುರುಳಿ, ಜೋಳ, ಸೇರಿದಂತೆ ದವಸ ಧಾನ್ಯಗಳ ಒಕ್ಕಣೆ ಕೆಲಸ ಪ್ರಾರಂಭಿಸಿರುವ ರೈತರು ಒಕ್ಕಣೆಗೆ ಕಣಮಾಡಿಕೊಳ್ಳದೆ ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ಇದರಿಂದ ಹಲವು ತೊಂದರೆಗಳುಉಂಟಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆಕಾರುಗಳನ್ನು ರಸ್ತೆಯಲ್ಲಿ ಸರಾಗವಾಗಿ ಸಂಚಾರ ಮಾಡಲು ಚಾಲಕರು ಹರಸಾಹಸ ಪಡುವಂತಾಗಿದೆ.
Related Articles
Advertisement
ಕಿರಿ ಕಿರಿಯಲ್ಲಿ ಸಂಚಾರ: ರಸ್ತೆಗಳಲ್ಲಿ ಮಂಡಿಯುದ್ದ ಒಕ್ಕಣೆ ಮಾಡಲಾಗಿರುವ ಹುಲ್ಲಿನ ಮೇಲೆ ಲಘು ವಾಹನಗಳು ರಸ್ತೆಯ ಮೇಲೆ ನಿಧಾನವಾಗಿ ಭಯದ ಆತಂಕದಲ್ಲಿ ಚಲಿಸುವಂತ ಅನಿವಾರ್ಯತೆ ಎದುರಾಗಿದೆ. ಇನ್ನೊಂದೆಡೆ ಕಾರು, ಜೀಪು, ಆಟೋ ಇನ್ನಿತರ ವಾಹನ ಸಂಚರಿಸಲು ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದು, ಆರ್‌ಟಿಒ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ರೈತರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅನಾಹುತ ಸಂಭವಿಸುವ ಸಾಧ್ಯತೆ: ನುಣುಪಾದ ಹುಲ್ಲಿನ ಮೇಲೆ ವಾಹನ ಸಂಚಾರ ಮಾಡು ವೇಳೆತಕ್ಷಣ ಬ್ರೇಕ್ ಹಾಕಿದರೆ ವಾಹನ ಚಾಲಕನ ನಿಯಂತ್ರಣಕ್ಕೆ ದಿಗದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ, ಜತೆಗೆ ವಾಹನ ಚಕ್ರದ ತಳದಲ್ಲಿ ತಿರುಗುವಇನ್ನಿತರ ಯಂತ್ರಕ್ಕೆ ಹುಲ್ಲು ಸುತ್ತುಕೊಂಡಾಗ ಅದನ್ನುತೆಗೆಯದೆ ಹಾಗೆ ಮುಂದಕ್ಕೆ ಸಾಗಿದರೆ ಬೆಂಕಿಹತ್ತಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಚಾಲಕರು.
ಬಹುತೇಕ ಹಳ್ಳಿಗಳ ರೈತರಿಗೆ ಒಕ್ಕಣೆ ಮತ್ತು ರಾಶಿ ಮಾಡಲುಕಣಗಳ ಅಭಾವ ಇರುವುದರಿಂದಅನಿವಾರ್ಯವಾಗಿ ರಸ್ತೆಗಳೇಕಣವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕಣ ನಿರ್ಮಿಸಿ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ. –ಕುಳ್ಳೇಗೌಡ. ಡಿಂಕ ಗ್ರಾಮ ರೈತ
ರಸ್ತೆ ಮೇಲೆ ಕೆಲ ರೈತರು ಈ ರೀತಿ ಒಕ್ಕಣೆ ಮಾಡಿತ್ತಿರುವುದರಿಂದದ್ವಿಚಕ್ರ ಹಾಗೂ ಕಾರು ಚಾಲಕರು ಸುಗಮಸಂಚಾರ ದುಸ್ಥರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆಮುಂದಾಗಬೇಕು. ಗ್ರಾಪಂ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ಎನ್‌ಆರ್‌ಇಜಿ ಮೂಲಕ ಕಣ ನಿರ್ಮಾಣಕ್ಕೆ ಮುಂದಾಗಬೇಕಿದೆ. –ಪುನೀತ್‌ಬಾಬು, ವಾಹನ ಸವಾರ ಚಿಕ್ಕಬಿಳತಿ ಗ್ರಾಮ
– ಶಾಮಸುಂದರ್ ಕೆ. ಅಣ್ಣೇನಹಳ್ಳಿ