Advertisement
ಇನ್ನು ಕಾರಿಡಾ ರ್‌ನ ಭಾಗವಾಗಿ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಕೆಳಸೇತುವೆ ಕಾಮಗಾರಿಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ತ್ಯಾಜ್ಯ ನೀರು ಕೊಳವೆ ಅಳವಡಿಕೆ ಹಾಗೂ ಕೆಪಿಟಿಸಿಎಲ್ ಕೇಬಲ್ ಲೈನ್ ಸ್ಥಳಾಂತ ರ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಕೆಪಿಟಿಸಿಎಲ್ ಕೇಬಲ್ ಲೈನ್ ಸ್ಥಳಾಂತ ರ ಕೆಲಸ ನಡೆಯುತ್ತಿದ್ದು, ಮುಂದಿನ ಒಂದು ವಾರ ಅಥವಾ ಹತ್ತು ದಿನ ಗ ಳಲ್ಲಿ ಈ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಾರಿಡಾರ್ ಮಾರ್ಗ ದಲ್ಲಿ ಚೆನ್ನೈಟ್ರ್ಯಾಕ್‌ನ ಕೆಳಗೆ ನಾಲ್ಕು (ರೈಲ್ವೆ ಅಂಡ ರ್ ಪಾಸ್ ಬ್ರಿಡ್ಜ್) ಬಾಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಎರಡು ಬಾಕ್ಸ್ ಗಳ ನಿರ್ಮಾಣ ಬಾಕಿ ಇದ್ದು, ಕೆಲಸ ನಡೆಯುತ್ತಿದೆ. ತುಮಕೂರು ಟ್ರ್ಯಾಕ್‌ನ ಕೆಳಗೆ ಆರು ಬಾಕ್ಸ್ ನಿರ್ಮಿ ಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಒಂದು ಬಾಕ್ಸ್ ನಿರ್ಮಾಣ
Related Articles
Advertisement
ರೈಲ್ವೆ ಇಲಾಖೆಯಿಂದ ವಿಳಂಬ ನೀತಿ ಆರೋಪ :
ಉದ್ದೇಶಿತ ಕಾರಿಡಾರ್ ಯೋಜನೆಗೆ ರೈಲ್ವೆ ಇಲಾಖೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹ ಕಾರ ಸಿಗುತ್ತಿಲ್ಲ. ಸ್ಥಳೀಯ ನಾಯಕರು, ಅಧಿಕಾರಿಗಳಿಗಿಂತ ಅವರು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಅವರು ಉತ್ತರ ನೀಡುತ್ತಾರೆ. ಈ ಕಾಮಗಾರಿ ಸವಾಲಿನದ್ದೂ ಆಗಿರುವುದರಿಂದ ಅವರು ತುರ್ತಾಗಿ ನಿರ್ಣಯ ತೆಗೆದುಕೊಳ್ಳುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪಾಲಿ ಕೆಯ ಎಂಜಿನಿಯರ್‌ವೊಬ್ಬರು ಮಾಹಿತಿ ನೀಡಿದರು.
ಕಾಮಗಾರಿ ಸವಾಲು :
ರೈಲ್ವೆ ಹಳಿಗಳು ಹಾದು ಹೋಗಿ ರುವ ಭಾಗದಲ್ಲಿ ಬಾಕ್ಸ್ ಗಳನ್ನು ಅಳವಡಿಸಬೇಕು. ರೈಲು ಸಂಚಾರ ಇಲ್ಲದ ಸಂದರ್ಭದಲ್ಲೇ ಕೆಲಸ ನಡೆಯಬೇಕು !
ಪೂರ್ಣ ಯಾವಾಗ? :
ರೈಲ್ವೆಯಿಂದ ಬಾಕ್ಸ್ ನಿರ್ಮಾ ಣಕ್ಕೆ (ಒಂದು) 4ರಿಂದ 5 ತಿಂಗಳ ಕಾಲ ಬೇಕು. ರಸ್ತೆ ನಿರ್ಮಾ ಣಕ್ಕೆ ಪಾಲಿ ಕೆ ಯಿಂದ ಕನಿಷ್ಠ ಎರಡು ತಿಂಗಳು ಬೇಕು. ಒಟ್ಟಾರೆ ಇನ್ನೂ ಒಂದು ವರ್ಷವಾಗುವ ನಿರೀಕ್ಷೆ.
ರೈಲ್ವೆ ಇಲಾ ಖೆಯಿಂದ ಬಾಕ್ಸ್ ಗಳನ್ನು ಅಳವಡಿಸುವ ಕಾರ್ಯವಾದರೆ ಪಾಲಿಕೆಯಿಂದ ರಸ್ತೆ ಕಾಮಗಾರಿ ನಡೆಸಲಾಗುವುದು. ಪಾಲಿಕೆಯಿಂದ ಹೆಚ್ಚು ಕಾಮಗಾರಿ ಬಾಕಿ ಉಳಿದಿಲ್ಲ. –ಬಿಬಿಎಂಪಿ ಸಹಾಯಕ ಎಂಜಿನಿಯರ್