Advertisement

ತೈಲ ಬೆಲೆ ಏರಿಕೆ ಖಂಡಿಸಿ ಕೈ ಪ್ರತಿಭಟನೆ

06:43 PM Jun 12, 2021 | Team Udayavani |

ಹಾಸನ: ಪೆಟ್ರೋಲ್‌ ಮತ್ತು ಡಿಸೇಲ್‌ದರ ಏರಿಕೆ ಖಂಡಿಸಿ ಕಾಂಗ್ರೆಸ್‌ಕಾರ್ಯಕರ್ತರು ಹಾಸನದಲ್ಲಿ ವಿವಿಧಪೆಟ್ರೋಲ್‌ ಬಂಕ್‌ಗಳ ಎದುರುಪ್ರತಿಭಟನೆ ನಡೆಸಿದರು.ನಗರದ ಡೇರಿ ವೃತ್ತ, ಬಿ.ಎಂ.ರಸ್ತೆಯ ಕೆಂಚಾಂಬ ಪೆಟ್ರೋಲ್‌ ಬಂಕ್‌ಗಳಎದರು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ರೈತರು ಹಾಗೂ ಜನಸಾಮಾನ್ಯರನ್ನು ಬೀದಿಗೆ ತಳ್ಳಿವೆ ಎಂದುಆರೋಪಿಸಿದರು.

Advertisement

ಅಭಿವೃದ್ಧಿ ಕಡೆಗಣನೆ: ಕಳೆದೊಂದುವರ್ಷದಿಂದ ಜನ ಕೊರೊನಾಸೋಂಕಿನಿಂದ ಸಂಕಷ್ಟಅನುಭವಿಸುತ್ತಿದ್ದರೂ ಪೆಟ್ರೋಲ್‌ಮತ್ತು ಡಿಸೇಲ್‌ ದರವನ್ನು 44 ಬಾರಿಏರಿಕೆ ಮಾಡಿದ್ದು, ಪೆಟ್ರೋಲ್‌ ದರ100 ರೂ.ದಾಟಿದೆ. ರಾಜ್ಯ ಸರ್ಕಾರಶಿವಮೊಗ್ಗ ಮತ್ತು ಬೆಂಗಳೂರಿಗೆಸೀಮಿತವಾಗಿದ್ದು, ಹಾಸನ ಸೇರಿಕಾಂಗ್ರೆಸ್‌, ಜೆಡಿಎಸ್‌ ಶಾಸಕರಿರುವಜಿಲ್ಲೆಗಳ ಅಭಿವೃದ್ಧಿ ಕಡೆಗಣಿಸಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿವಿಧಾನ ಪರಿಷತ್‌ ಸದಸ್ಯಎಂ.ಎ.ಗೋಪಾಲಸ್ವಾಮಿ, ಪಕ್ಷದಮುಖಂಡರಾದ ಎಚ್‌.ಕೆ.ಮಹೇಶ್‌,ಬನವಾಸೆ ರಂಗಸ್ವಾಮಿ,ಕುಮಾರಸ್ವಾಮಿ, ಕೆಲವತ್ತಿಸೋಮಶೇಖರ್‌, ಬಸವರಾಜು,ಬಾಲಶಂಕರ್‌, ಕೋಮಲೇಶ್‌, ರಾಜಣ್ಣ,ವೆಂಕಟೇಗೌಡ, ಸೋಮಣ್ಣ ಮತ್ತಿತರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್‌ ಮುಖಂಡ ಬಾಗೂರುಮಂಜೇಗೌಡ ತಮ್ಮ ಬೆಂಬಲಿಗರೊಂದಿಗೆಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next