Advertisement

ತೈಲ ಬೆಲೆ ಇಳಿಕೆ ಕೇಂದ್ರದ ಜವಾಬ್ದಾರಿ: ಸಿಎಂ

10:40 AM Oct 06, 2017 | Team Udayavani |

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಕೇಂದ್ರ ಸರಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರಾಜ್ಯ ಸರಕಾರಗಳತ್ತ ಬೆರಳು ತೋರಿಸುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಸರಕಾರ ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿ ದರೆ ಕರ್ನಾಟಕದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಇದೆ ಎಂದು ಹೇಳಿದ್ದಾರೆ.

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಬ್ಯಾರೆಲ್‌ ಕಚ್ಚಾತೈಲ ಬೆಲೆ 120 ಡಾಲರ್‌ ಇದ್ದಾಗ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿತ್ತು, ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 42 ಡಾಲರ್‌ಗೆ ಇಳಿದಿರುವಾಗ ತೈಲ ಬೆಲೆ ಎಷ್ಟಿದೆ ಎಂಬುದನ್ನು ಗಮನಿಸಿದರೆ ಸ್ಪಷ್ಟವಾಗಲಿದೆ. ಹಾಗಿದ್ದರೂ ತೆರಿಗೆ ಇಳಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ ಲೀಟರ್‌ ತೈಲದ ಮೂಲ ಬೆಲೆಯೊಂದಿಗೆ ಕೇಂದ್ರ ವಿಧಿಸುವ ಅಬಕಾರಿ ಸುಂಕ, ಮಾರುಕಟ್ಟೆ ಕಮಿಷನ್‌, ಸಾಗಣೆ ವೆಚ್ಚ, ಡೀಲರ್‌ ಕಮೀಷನ್‌ನ ಒಟ್ಟು ಮೊತ್ತದ ಮೇಲೆ ರಾಜ್ಯ ಸರಕಾರವು ಪೆಟ್ರೋಲ್‌ ಮೇಲೆ ಶೇ. 30 ಹಾಗೂ ಡೀಸೆಲ್‌ ಮೇಲೆ ಶೇ. 19ರಷ್ಟು ತೆರಿಗೆ ವಿಧಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next