ಒಂದು ವಾರದಿಂದ ಹಾವು-ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರ ಶನಿವಾರ ದಿಢೀರ್ ಗಗನಕ್ಕೇರಿದೆ. ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈನ್x ಎಣ್ಣೆ ದರ ಒಂದೇ ದಿನದಲ್ಲಿ ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಈಗಾಗಲೇ ಜಿಎಸ್ಟಿ ವ್ಯಾಪ್ತಿಗೆ ಸೇರಿದೆ. ಆದರೆ ಹೆಚ್ಚುವರಿಯಾಗಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ದರ ಹಠಾತ್ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.
Advertisement
ದ್ವಿತೀಯ ಶನಿವಾರ, ರವಿವಾರ ಹಾಗೂ ಸೋಮವಾರ ಈದ್-ಮಿಲಾದ್ ಹಿನ್ನೆಲೆಯಲ್ಲಿ ಸತತ ಮೂರು ದಿನ ಸರಕಾರಿ ರಜೆ ಇರುವ ಕಾರಣ ಮಂಗಳವಾರವೇ ಸುಂಕ ಕುರಿತು ನಿಖರ ಮಾಹಿತಿ ಜತೆಗೆ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಸ್ಪಷ್ಟತೆ ತಿಳಿಯಲಿದೆ ಎನ್ನಲಾಗಿದೆ.
Related Articles
-ಸೋಮಶೇಖರ ಕರಸಿದ್ದಿಮಠ, ಗ್ರಾಹಕರು
Advertisement
ತಾಳೆ ಎಣ್ಣೆ, ಸೂರ್ಯಕಾಂತಿ ರಿಫೈನ್ಡ್ ಎಣ್ಣೆ ಸಹಿತ ಅಡುಗೆ ಎಣ್ಣೆ ಈಗಾಗಲೇ ಜಿಎಸ್ಟಿ ವ್ಯಾಪ್ತಿಗೆ ಸೇರಿತ್ತು. ಆಮದು ಸುಂಕವನ್ನು ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನದ ವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ.-ಹಿಮಾಂಶು ಜೈನ್, ವ್ಯಾಪಾರಸ್ಥರು ಅರುಣಕುಮಾರ ಹಿರೇಮಠ