Advertisement

ರಿಲಯನ್ಸ್‌, ಶೆಲ್‌, ಒಎನ್‌ಜಿಸಿಯಿಂದ 3 ಬಿಲಿಯ ದಂಡ ಕೇಳಿದ ಸರಕಾರ

05:35 PM Jul 18, 2017 | |

ಹೊಸದಿಲ್ಲಿ : ಅರಬ್ಬಿ ಸಮುದ್ರದಲ್ಲಿನ ಪನ್ನಾ, ಮುಕ್ತಾ ಮತ್ತು ತಪತಿ (ಪಿಎಂಟಿ) ತೈಲ ಮತ್ತು ಅನಿಲ ಕ್ಷೇತ್ರದ ವೆಚ್ಚ ವಸೂಲಿ ಕುರಿತಾಗಿ ತನ್ನ ಪರವಾಗಿ ಬಂದಿರುವ ಆಂಶಿಕ ರಾಜಿ ಪಂಚಾಯ್ತಿಕೆ ತೀರ್ಪನ್ನು ಅನುಸರಿಸಿ ಭಾರತ ಸರಕಾರ ರಿಲಯನ್ಸ್‌ ಇಂಡಸ್ಟ್ರೀಸ್‌, ರಾಯಲ್‌ ಡಚ್‌ ಶೆಲ್‌ ಮತ್ತು ಒಎನ್‌ಜಿಸಿ ಕಂಪೆನಿಯಿಂದ 3 ಶತಕೋಟಿ ಡಾಲರ್‌ಗಳ ದಂಡ ಮೊತ್ತವನ್ನು  ಕೇಳಿದೆ. 

Advertisement

ಡೈರೆಕ್ಟೊರೇಟ್‌ ಜನರಲ್‌ ಆಫ್ ಹೈಡ್ರೋಕಾರ್ಬನ್ಸ್‌ (ಡಿಜಿಎಚ್‌) ಕಳೆದ ಮೇ ತಿಂಗಳಾಂತ್ಯದಲ್ಲಿ ಈ ಕಂಪೆನಿಗಳಿಗೆ ಡಿಮಾಂಡ್‌ ನೊಟೀಸ್‌ ಜಾರಿ ಮಾಡಿತ್ತು.

2016ರ ಅಕ್ಟೋಬರ್‌ ವರೆಗಿನ ಅವಧಿಗೆ ಸಂಬಂಧಿಸಿದ ಅಂತಿಮ ಆಂಶಿಕ ತೀರ್ಪಿನ ಆಧಾರದಲ್ಲಿ ತಾನು ಲೆಕ್ಕ ಹಾಕಿದ್ದ ನಿವ್ವಳ ಮೊತ್ತದ ಮೇಲೆ ಬಡ್ಡಿ ಮತ್ತು ಇತರ ನಿರ್ದಿಷ್ಟ ಶುಲ್ಕಗಳನ್ನು ಸೇರಿಸಿ 3 ಬಿಲಿಯ ಡಾಲರ್‌ಗಳ ಪಾವತಿಯನ್ನು ಆಗ್ರಹಿಸಿತ್ತು ಎಂದು ಸರಕಾರ ಮತ್ತು ಪಿಎಂಟಿ ಜಂಟಿ ಉದ್ಯಮ ಮೂಲಗಳು ತಿಳಿಸಿವೆ. 

ನೊಟೀಸಿನಲ್ಲಿ  ಪರಿಹಾರ ಮೊತ್ತ ಪಾವತಿಯ ಅಂತಿಮ ದಿನಾಂಕವನ್ನು ನಮೂದಿಸಲಾಗಿಲ್ಲ; ಮಾತ್ರವಲ್ಲ  ಹಣ ಪಾವತಿಸಿದಿರುವುದರ ಪರಿಣಾಮಗಳನ್ನು ಕೂಡ ವಿಷದಪಡಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next