ದುಬೈ: ಮೊದಲ ಪಂದ್ಯ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲನುಭವಿಸಿದೆ. ಈ ಅವಮಾನದ ನಡುವೆ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಗಾಗಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಇದು ಐಪಿಎಲ್ ನಲ್ಲಿ ಆರ್ ಸಿಬಿ ನಾಯಕನ ಮೊದಲ ನಿಧಾನಗತಿಯ ಓವರ್ ರೇಟ್ ಪ್ರಸಂಗವಾಗಿದೆ.
ಗುರವಾರ ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡದ ಸಂಘಟಿತ ಪ್ರದರ್ಶನದ ಎದುರು ಆರ್ ಸಿಬಿ ಶರಣಾಯಿತು. ಪಂಜಾಬ್ ನಾಯಕ ಕೆ ಎಲ್ ರಾಹುಲ್ ಭರ್ಜರಿ 132 ಬಾರಿಸಿದರು. ಏಳು ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸಿದ್ದ ಕೆ ಎಲ್ ರಾಹುಲ್ ಆರ್ ಸಿಬಿ ಬೌಲರ್ ಗಳಿಗೆ ಮೈದಾನದ ಮೂಲೆ ಮೂಲೆ ದರ್ಶನ ಮಾಡಿಸಿದರು. ಪಂಜಾಬ್ 206 ರನ್ ಗಳಿಸಿತ್ತು.
ಇದನ್ನೂ ಓದಿ: ಸಚಿನ್ ಪುತ್ರಿ ಸಾರಾ-ಶುಬ್ಮನ್ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್
ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಎರಡು ಸುಲಭ ಕ್ಯಾಚ್ ಗಳನ್ನು ಚೆಲ್ಲಿದರು. ಬ್ಯಾಟಿಂಗ್ ವೇಳೆ ಸತತ ವಿಕೆಟ್ ಕಳೆದುಕೊಂಡ ಆರ್ ಸಿಬಿ ಕೇವಲ 109 ರನ್ ಗೆ ಆಲ್ ಔಟ್ ಆಯಿತು.