Advertisement
ಪಂಜಾಬ್ ವಿರುದ್ಧ 27 ಎಸೆತಗಳಲ್ಲಿ 44 ರನ್ ಬಾರಿಸಿದ ರೋಹಿತ್ ಶರ್ಮಾ ಮೂರು ಭರ್ಜರಿ ಸಿಕ್ಸರ್ ಚಚ್ಚಿದರು. ಇದೇ ವೇಳೆ ಐಪಿಎಲ್ ನಲ್ಲಿ 250 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು. ಈ ಸಾಧನೆಗೈದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೂ ರೋಹಿತ್ ಪಾತ್ರರಾದರು.
Related Articles
Advertisement
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಐದು ಆಟಗಾರರು: ಕ್ರಿಸ್ ಗೇಲ್ – 357, ಎಬಿ ಡಿವಿಲಿಯರ್ಸ್ – 251, ರೋಹಿತ್ ಶರ್ಮಾ – 250, ಎಂಎಸ್ ಧೋನಿ – 235, ವಿರಾಟ್ ಕೊಹ್ಲಿ – 229.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 214 ರನ್ ಮಾಡಿದರೆ, ಮುಂಬೈ ಇಂಡಿಯನ್ಸ್ 201 ರನ್ ಮಾತ್ರ ಕಲೆಹಾಕಲು ಶಕ್ತವಾಯಿತು.