Advertisement
ಗವಿಗಂಗಾಧರೇಶ್ವರ: ಬಸವನಗುಡಿಯ ಗವಿಪುರಂನಲ್ಲಿರುವ ಈ ಪುರಾತನ ಶಿವಾಲಯವನ್ನು ಕಟ್ಟಿಸಿದ್ದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ. ಇಲ್ಲಿ ನೈಸರ್ಗಿಕ ಗುಹೆಯನ್ನೇ ಕಡೆದು ದೇವಸ್ಥಾನವನ್ನಾಗಿ ಮಾಡಿರುವುದು ವಿಶೇಷ. ಮಕರ ಸಂಕ್ರಾತಿಯ ದಿನದಂದು ಸೂರ್ಯನ ಕಿರಣಗಳು ನಂದಿ ವಿಗ್ರಹದ ಕೊಂಬುಗಳ ನಡುವಿಂದ ಹಾದು ಶಿವಲಿಂಗದ ಮೇಲೆ ಬೀಳುವಂತೆ ದೇವಸ್ಥಾನವನ್ನು ಕಟ್ಟಿರುವುದು ಇನ್ನೊಂದು ಅದ್ಭುತ.
Related Articles
Advertisement
ಏರ್‌ಫೋರ್ಟ್ ಶಿವ: ಏರ್‌ಪೋರ್ಟ್ ಶಿವ ಎಂದೇ ಹೆಸರಾಗಿರುವ ಈ ದೇವಸ್ಥಾನದಲ್ಲಿರುವ ಶಿವನ ಮೂರ್ತಿ ಸುಮಾರು 65 ಅಡಿ ಎತ್ತರವಿದೆ. ಅಮೃತಶಿಲೆಯಲ್ಲಿ ರೂಪಿಸಲಾದ ಶಿವ ಮತ್ತು ನೀರಿನ ಕೊಳ ಭಕ್ತರನ್ನು ಮಾತ್ರವೇ ಅಲ್ಲ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಹಿಮಾಲಯ ಮತ್ತು ಕೈಲಾಸವನ್ನು ನೆನಪಿಸುವ ಮಾದರಿಯಲ್ಲಿ ವಿಗ್ರಹವನ್ನು ರಚಿಸಲಾಗಿದೆ. ಭಜನೆ, ಪ್ರವಚನ ಹೀಗೆ ಧಾರ್ಮಿಕ ಚಟುವಟಿಕೆಗಳು ಆಗಿಂದಾಗ್ಗೆ ಜರುಗುತ್ತಿರುತ್ತದೆ. ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ಕೆಂಪ್ ಫೋರ್ಟ್ ಮಾಲ್ ಹಿಂಭಾಗ ಇದೆ ಈ ಶಿವಾಲಯ.
ಬೇಗೂರು ನಾಗೇಶ್ವರ: ನಗರದ ಪುರಾತನ ದೇಗುಲಗಳಲ್ಲಿ ಇದೂ ಒಂದು. ಜಿಲ್ಲೆಯೊಳಗಿರುವ ಬೇಗೂರಿನಲ್ಲಿರುವ ಈ ದೇಗುಲವು ಗಂಗ ವಂಶಸ್ಥರಾದ ನೀತಿಮಾರ್ಗ ಹಾಗೂ ನೀತಿ ಮಾರ್ಗ 2 ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಈ ಶಿವ ಮಂದಿರವು ಗರ್ಭಗುಡಿ, ನವರಂಗ, ಮಹಾಮಂಟಪ ಎಂಬ ಮೂರು ಪ್ರಾಕಾರಗಳಿವೆ. ಗರ್ಭಗುಡಿಯಲ್ಲಿರುವ ಲಿಂಗವಿದೆ. ನವರಂಗವು ಎಂಟು ಸ್ತಂಭಗಳುಳ್ಳ, ಸುಂದರ ಕೆತ್ತನೆಗಳುಳ್ಳ ಮಂಟಪವಾಗಿದ್ದು, ಇದರಲ್ಲಿ ಶಿವನ ಚತುರ್ಮುಖ ರೂಪವುಳ್ಳ ಉಮಾ ಮಹೇಶ್ವರ, ಗಣೇಶ ಹಾಗೂ ಕಾಲಭೈರವನ ಕೆತ್ತೆನೆಯಿದ್ದು, ಭಕ್ತಿ ಪರವಶಗೊಳಿಸುತ್ತದೆ.
ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನ: ಬನಶಂಕರಿ 2ನೇ ಹಂತದಲ್ಲಿರುವ ಧರ್ಮಗಿರಿಯಲ್ಲಿ ಈ ಶಿವನ ದೇಗುಲವಿದೆ. ಇದು ಬೆಂಗಳೂರಿನಲ್ಲಿರುವ ಪ್ರಮುಖ ಶಿವನ ದೇವಾಲಯಗಳಲ್ಲೊಂದು. ಮಂಜುನಾಥ ಸ್ವಾಮಿಯೆಂದು ಕರೆಯಲ್ಪಡುವ ಇಲ್ಲಿನ ಶಿವ, ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವ. ಇದೊಂದು ಹಳೆಯ ದೇಗುಲವಾದರೂ, ಆಧುನಿಕತೆಯ ಸ್ಪರ್ಶ ಗಳಿಸಿಕೊಂಡಿರುವ ಮಂದಿರ. ದೇಗುಲದ ಪಕ್ಕದಲ್ಲಿರುವ ಬೃಹತ್ ಶಿವಲಿಂಗ ಹಾಗೂ ಶಿವನ ಮಹಿಮೆಗಳನ್ನು ಸಾರುವ ಪುತ್ಥಳಿ, ನಂದಿಯು ಇಲ್ಲಿನ ಪ್ರಧಾನ ಆಕರ್ಷಣೆ.
ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ: ಉತ್ತರ ಹಳ್ಳಿ ಸಮೀಪದ ಶ್ರೀನಿವಾಸಪುರದಲ್ಲಿರುವ ಓಂಕಾರ ಹಿಲ್ಸ್‌ನಲ್ಲಿರುವ ದೇವಾಲಯ. ಈ ದೇಗುಲ ದಲ್ಲಿ 12 ಜ್ಯೋತಿರ್ಲಿಂಗಗಳನ್ನು ಆರಾಧಿಸಲಾಗುತ್ತದೆ. ಪ್ರತಿಯೊಂದು ಜ್ಯೋತಿರ್ಲಿಂಗಕ್ಕೂ ಪ್ರತ್ಯೇಕ ಗರ್ಭಗುಡಿ, ವಿಮಾನ ಗೋಪುರಗಳಿವೆ. ಈ ದೇಗುಲದಲ್ಲಿ ಮತ್ಸé ನಾರಾಯ, ಶ್ರೀ ವನದುರ್ಗ ದೇಗುಲ, ಶ್ರೀ ನಾಗದೇವತೆ, ಶ್ರೀ ಮುನೇಶ್ವರ ದೇಗುಲಗಳಿವೆ. ಗೋಶಾಲೆ, ವಿಶ್ವಾಮಿತ್ರ ವೇದ ವಿದ್ಯಾಲಯ, ಪವಿತ್ರ ಆಲದ ಮರ, ಟವರ್ ಕ್ಲಾಕ್ ಕ್ಷೇತ್ರದ ಮಹತ್ವ ಹೆಚ್ಚಿಸಿವೆ.