Advertisement

ಓ ಮೈ ಲವ್‌ಗೆ ಕೀರ್ತಿ ನಾಯಕಿ

12:54 PM Dec 22, 2020 | Suhan S |

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಸದ್ದಿಲ್ಲದೇ “ಓ ಮೈ ಲವ್‌’ ಸಿನಿಮಾ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.  ಜೊತೆಗೆ ಸಖತ್‌ ಬೋಲ್ಡ್‌ ಆಗಿ ಫೋಟೋ ಶೂಟ್‌ ಕೂಡಾ ಮಾಡಲಾಗಿದೆ.ಕೀರ್ತಿ ಈ ಚಿತ್ರದ ನಾಯಕಿ.

Advertisement

ಈಗಾಗಲೇ ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕರಾಗಿರುವ “ಪ್ರಾರಂಭ’ ಚಿತ್ರದಲ್ಲಿಕೀರ್ತಿ ನಟಿಸಿದ್ದಾರೆ. ಈಗ “ಓ ಮೈ ಲವ್‌’ ಸ್ಮೈಲ್‌ ಶ್ರೀನು ಈ ಚಿತ್ರದ ನಿರ್ದೇಶಕರು. ಈಗಾಗಲೇ “ತೂಫಾನ್‌’, “ಬಳ್ಳಾರಿ ದರ್ಬಾರ್‌’, “18 ಟು 25′ ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್‌ ಶ್ರೀನು ಈಗ ಲವ್‌ ಸ್ಟೋರಿ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ : ಮಿಲನಾ ಬ್ಯಾಚುಲರ್‌ ಪಾರ್ಟಿ : ಫೆಬ್ರವರಿ 14 ಮದುವೆ

ಈ ಚಿತ್ರದಲ್ಲಿ ಹದಿ ಹರೆಯದ ಪ್ರೇಮ ತುಡಿತಗಳ ಜೊತೆ ಜೊತೆಗೆ ಕಮರ್ಷಿಯಲ್‌ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಜಿಸಿಬಿ ರಾಮಾಂಜಿನಿ ಕಥೆ ಬರೆಯುವುದರ ಜೊತೆಗೆ ಜಿಸಿಬಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಕ್ಕೂಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಸ್ಮೈಲ್‌ ಶ್ರೀನು ಅವರದ್ದು. ಚಿತ್ರದ ಬಗ್ಗೆ ಮಾತನಾಡುವ ಶ್ರೀನು, ಇದೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ. ಹಾಗಂತಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಇದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌ ಕೂಡಾ ಇದ್ದು, ಚಿತ್ರ ಅದ್ಧೂರಿಯಾಗಿ ತಯಾರಾಗಲಿದೆ. ಈ ಹಿಂದೆ ಈ ತರಹದ ಲವ್‌ ಸ್ಟೋರಿ ಬಂದಿಲ್ಲ ಎನ್ನುವುದು ಶ್ರೀನು ಮಾತು.

Advertisement

Udayavani is now on Telegram. Click here to join our channel and stay updated with the latest news.

Next