Advertisement
ಈ ವೇಳೆ ಅಬ್ದುಲ್ ಖಾದರ್ ಅವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಅಪಾಯ ಮನಗಂಡು ಮನೆಯಿಂದ ಹೊರಗೋಡಿದ ಕುಟುಂಬ ಪಾರಾಗಿದೆ. ಸ್ಥಳಕ್ಕೆ ಕೂಡಲೇ ತಲುಪಿದ ಪೊಲೀಸ್, ಅಗ್ನಿಶಾಮಕದಳ ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್ ಖಾದರ್ ಅವರ ಕುಟುಂಬ ವನ್ನು ಬೇರೆಡೆಗೆ ಸ್ಥಳಾಂತರಿಸಲು ನೆರವು ನೀಡಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣವಾಗಿ ಸಮುದ್ರ ಪಾಲಾಯಿತು. ಸಮುದ್ರ ಪಾಲಾದ ಮನೆಗಳು ಖದೀಜಮ್ಮ, ಇಬ್ರಾಹಿಂ, ಅಶ್ರಫ್ ಅವರ ಮನೆಗಳಾಗಿವೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿಸಲಾಗಿತ್ತು. ಕಡಲ್ಕೊರೆತ ಮುಂದುವರಿ ದಿದ್ದು ಸುಮಾರು 200 ಮೀಟರ್ ಪ್ರದೇಶ ಸಮುದ್ರ ಪಾಲಾಗಿದೆ.
ಮಂದಿರದ ಬಳಿ ಬೀಚ್ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿತು. ಚಂಡ ಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರ ಗೋಡು ಮತ್ತು ಚೇರಂಗೈ ಕಡಪ್ಪುರದಲ್ಲಿ ಪೊಲೀಸರು ಧ್ವನಿ ವರ್ಧಕ ಮೂಲಕ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಬೆಸ್ತರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.