Advertisement

Davanagere; ಫಲಾನುಭವಿಗೆ ನೀಡಬೇಕಿದ್ದ ಟಿಸಿ ಮಾರಿದ ಅಧಿಕಾರಿಗಳು!

09:58 PM Aug 13, 2024 | Team Udayavani |

ದಾವಣಗೆರೆ: ಆದಿಜಾಂಬವ ಅಭಿವೃದ್ಧಿ ನಿಗಮದಡಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಒಬ್ಬ ಫಲಾನುಭವಿಗೆ ಹಳೆಯ ವಿದ್ಯುತ್‌ ಪರಿವರ್ತಕ (ಟಿಸಿ) ನೀಡಿದ್ದರೆ, ಇನ್ನೊಬ್ಬ ಫಲಾನುಭವಿಗೆ ನೀಡಬೇಕಿದ್ದ ವಿದ್ಯುತ್‌ ಪರಿವರ್ತಕವನ್ನು ಅಧಿಕಾರಿಗಳೇ ಮಾರಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಮಂಗಳವಾರ ನಡೆದ ದಾವಣಗೆರೆ ತಾ.ಪಂ. ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಈ ವಿಷಯ ಬಹಿರಂಗಪಡಿಸಿದ್ದಾರೆ.

ಆದಿಜಾಂಬವ ಅಭಿವೃದ್ಧಿ ನಿಗಮದ ಮೂಲಕ ಕೊಳವೆಬಾವಿ ಕೊರೆಸಲಾಗಿದ್ದ ಕಂದಗಲ್ಲು ಗ್ರಾಮದ ಗಂಗಾಧರಪ್ಪ ಅವರಿಗೆ ಪಂಪ್‌ಸೆಟ್‌, ಪೈಪ್‌ ಕೊಟ್ಟಿದ್ದಾರೆ. ಆದರೆ ಹೊಸ ಟಿಸಿ ಬದಲು ಹಳೆಯದನ್ನು ಕೊಟ್ಟಿದ್ದಾರೆ. ಹುಲಿಕಟ್ಟೆ ಗ್ರಾಮದ ಚನ್ನಬಸಪ್ಪ ಅವರಿಗೆ ಕೊಳವೆಬಾವಿ ಕೊರೆಸಿದ 3 ವರ್ಷದ ಬಳಿಕ ಟಿಸಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ತಾ.ಪಂ. ಆಡಳಿತಾಧಿಕಾರಿ ಕೃಷ್ಣ ನಾಯ್ಕ ಮತ್ತು ಇಒ ರಾಮ ಭೋವಿ, ಕೂಡಲೇ ಈ ಬಗ್ಗೆ ತನಿಖೆ ಮಾಡಿ ವಾರದೊಳಗೆ ವಸ್ತುನಿಷ್ಠ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸೌಲಭ್ಯ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next