Advertisement

ಒಡೆದ ಪೈಪ್‌ ಸರಿಪಡಿಸದ ಅಧಿಕಾರಿಗಳು; ಕಲುಷಿತ ನೀರು ಸೇವಿಸುತ್ತಿರುವ ಜನತೆ

06:30 PM Jun 12, 2023 | Team Udayavani |

ದೋಟಿಹಾಳ: ಕಳೆದ ಒಂದು ತಿಂಗಳಿನಿಂದ ಜೆಜೆಎಂನವರು ನೀಡುವ ನೀರನ್ನೇ ಕುಡಿಯುತ್ತಿದ್ದೇವೆ. ಕಲುಷಿತ ನೀರಿನ ಬಗ್ಗೆ ಅಧಿ ಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಕೇಸೂರ ಗ್ರಾಪಂ ವ್ಯಾಪ್ತಿಯ ಕಲಕೇರಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಅಳವಡಿಸಲಾದ ಪೈಪಲೈನ್‌ ಗಳು ಒಡೆದು ಸುಮಾರು 2 ತಿಂಗಳಾದರು ಸರಿಪಡಿಸುವ ಕೆಲಸಕ್ಕೆ ಜೆಜೆಎಂ ಅ ಧಿಕಾರಿಗಳು ಮುಂದಾಗಿಲ್ಲ. ಇದರಿಂದ ಈ ಗ್ರಾಮದ ಜನ ಪ್ರತಿನಿತ್ಯ ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ.

ಕಲಕೇರಿ ಗ್ರಾಮದಲ್ಲಿ ಇದುವರೆಗೂ ಒಂದು ಶುದ್ಧ ಕುಡಿಯುವ ನೀರಿ ಘಟಕವಿಲ್ಲ. ಇಲ್ಲಿ ಜನ ನಲಿ ನೀರನ್ನು ಕುಡಿಯುತ್ತಿದ್ದಾರೆ. ಕಲಕೇರಿ ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಇವರಿಗೆ ಇದುವರೆಗೂ ಶುದ್ಧ ನೀರು ಸಿಗುತ್ತಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನಗಾಗಿ ಗ್ರಾಮಸ್ಥರು ನಡವಲಕೊಪ್ಪ, ಕೇಸೂರು ಹಾಗೂ ದೋಟಿಹಾಳ ಗ್ರಾಮಗಳಿಗೆ ಹೋಗಿ ತರಬೇಕು.
ಕೆಲವು ಗ್ರಾಮಸ್ಥರು ಈ ಗ್ರಾಮಗಳನ್ನೇ ಅವಲಂಬಿಸಿದ್ದಾರೆ.

ಇಂತಹ ಸ್ಥಿತಿಯಲ್ಲಿ ಹಾಗೂ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಸದ್ಯ ವಾಂತಿ ಭೇದಿಗಳ ಪ್ರಕರಣಗಳು ಕಾಣಿಸುತ್ತಿದ್ದರು. ಈ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹಾಗೂ ಗ್ರಾಮದಲ್ಲಿ ಒಡೆದ ಪೈಪ್‌ಗ್ಳನ್ನು ಸರಿಪಡಿಸುತ್ತಿಲ್ಲ. ಕಲುಷಿತ ನೀರು ಸೇವಿಸಿ ಹತ್ತು ವರ್ಷದ ಬಾಲಕಿ ಮೃತಪಟ್ಟಿದಾಳೆ. ಇಡೀ ತಾಲೂಕು ಆಡಳಿತ ಕಳೆದ 3-4 ದಿನಗಳಿಂದ ಹಗಲಿರುಳು ಶ್ರಮಿಸುತ್ತಿದೆ. ಆದರೆ ಜೆಜೆಎಂ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ಕಾಲಹರಣ ಮಾಡುತ್ತಿದ್ದಾರೆ
ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಚ್ಚರಗೊಳ್ಳಿ
ತಾಲೂಕಿನ ಬಿಜಕಲ್‌ ಜುಮಲಾಪುರ, ಸಾಸ್ವಿಹಾಳ, ಕೆ. ಬೋದೂರ, ಕೆ. ಬೋದೂರ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈಗಾಗಲೇ ವಾಂತಿ ಭೇದಿ ಪ್ರಕರಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜೆಜೆಎಂ ನವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವದರ ಜೊತೆಗೆ ಕಳಪೆ ಮಟ್ಟದ ಕಾಮಗಾರಿಗಳನ್ನು ಸರಿಪಡಿಸಿ ಮುಂದೇ ಆಗುವ ಅನಾಹುತಗಳು ತಡೆಗಟ್ಟಬೇಕು ಎಂಬುವುದು ಪ್ರಜ್ಞಾವಂತರ ನಾಗರಿಕರ ಕಳಕಳಿಯಾಗಿದೆ.

Advertisement

ವಾಂತಿ ಭೇದಿ ಆತಂಕ
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜೆಜೆಎಂನವರು ಹಾಕಿರುವ ಪೈಪ್‌ಲೈನಗಳು ತಿಪ್ಪೆಗುಂಡಿ, ಚರಂಡಿ ಸೇರಿದಂತೆ ಅನೇಕ ಅನೈರ್ಮಲ್ಯ ಪ್ರದೇಶಗಳ ಇರುವ ಜಾಗಗಳಲ್ಲಿ ಇವೆ. ಒಂದು ವೇಳೆ ಆ ಪೈಪ್‌ಗಳಲ್ಲಿ ಡ್ಯಾಮೇಜ್‌ ಉಂಟಾದರೆ ಆ ನೀರು ಕುಡಿಯುವ ಜನರು ವಾಂತಿ ಭೇದಿಯಿಂದ ನರಳಬೇಕಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಹೀಗಾಗಿ 15 ದಿನಗಳನಿಂದ ನಲ್ಲಿ ನೀರನ್ನೆ ಕುಡಿಯುತ್ತಿದ್ದೇವೆ. ಜೆಜೆಎಂ ನಲ್ಲಿ ಮೂಲಕ ನೀರು ಕಲುಷಿತವಾಗಿ ಬರುತ್ತದೆ. ಅದೇ ನೀರಿನ್ನೆ ಕುಡಿಯುತ್ತಿದೇವೆ. ಗ್ರಾಮದಲ್ಲಿ 1-2 ಕಡೆಗಳಲ್ಲಿ ಪೈಪ್‌ಗಳು ಒಡೆದಿವೆ. ಅವುಗಳನ್ನು ಸರಿಪಡಿಸಿಲ್ಲ.
ಲಕ್ಷ್ಮವ್ವ ಬಲಕುಂದಿ, ಕಲಕೇರಿ ಗ್ರಾಮಸ್ಥೆ

ಕಲಕೇರಿ ಗ್ರಾಮದಲ್ಲಿ ಜೆಜೆಎಂ ನೀರು ಜನರು ಕುಡಿಯುತ್ತಿದ್ದಾರೆ. ಅಲ್ಲಿ 1-2 ಕಡೆ ಜೆಜೆಎಂ ಪೈಪ್‌ಲೈನ್‌ ಡ್ಯಾಮೇಜ್‌ ಆಗಿದೆ.
ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಹಾಗೂ ನೀರು ಸರಬರಾಜು, ಜೆಜೆಎಂ ಅ ಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ
ಯಾವುದೇ ಪ್ರಯೋಜನವಾಗಿಲ್ಲ.
ಅಮೀನಸಾಬ್‌ ಅಲಂದಾರ
ಕೇಸೂರ ಗ್ರಾಪಂ ಪಿಡಿಒ

ಕೂಡಲೇ ಕಲಕೇರಿ ಗ್ರಾಮದಲ್ಲಿ ಜೆಜೆಎಂ ಪೈಪ್‌ಲೈನ್‌ ಡ್ಯಾಮೇಜ್‌ ಆಗಿದನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುತ್ತೇವೆ.
ಶಿವಪ್ಪ ಸುಭೇದಾರ, ತಾಪಂ ಇಒ ಕುಷ್ಟಗಿ

ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next