Advertisement
ಪೊಲೀಸ್ ಇಲಾಖೆಗೆ ನೇಮಕ ಹೊಂದಿದ ಪೇದೆಗಳಿಗೆ ಇಲ್ಲಿ ವಿವಿಧ ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿ ವೇಳೆ ಕೆಳ ಹಂತದ ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿ ಕಾರಿಗಳು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಹೆಡ್ ಕಾನ್ಸ್‌ಟೇಬಲ್ ಹನುಮಂತಪ್ಪ ಅವರು ಕೆಳ ಹಂತದ ಸಿಬ್ಬಂದಿಯಿಂದ ತಮ್ಮ ಖಾಸಗಿ ಬಟ್ಟೆಗಳನ್ನು ತೊಳೆಸಿಕೊಂಡಿದ್ದಾರೆ. ಇನ್ನೂ ಕೆಲವರು ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕೆಲವು ವಿಡಿಯೋ ಹಾಗೂ ಪೋಟೋ ವೈರಲ್ ಆಗಿವೆ. ಅಲ್ಲಿನ ಪೇದೆಗಳಿಗೆ ತಮ್ಮ ನೋವು ಯಾರ ಮುಂದೆಯೂ ಹೇಳಿಕೊಳ್ಳದಂತ ಪರಿಸ್ಥಿತಿಯಿದೆ. ಹಿರಿಯ ಅ ಧಿಕಾರಿಗಳ ಮಾತು ಕೇಳಲೇ ಬೇಕು. ಇಲ್ಲದಿದ್ದರೆ ಮುಂದೆ ಹುದ್ದೆಗೆ ತೊಂದರೆ, ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ಬೀಳಲಿದೆ ಎಂಬ ನೋವಿನಲ್ಲಿ ನರಳಾಡುತ್ತಿದ್ದಾರೆ. ವಿಡಿಯೋಗಳು ವೈರಲ್ ಆಗಿ ಮಾಧ್ಯಮದಲ್ಲಿ ವರದಿ ಬಿತ್ತರವಾದ ಬಳಿಕ ಎಚ್ಚೆತ್ತ ಹಿರಿಯ ಅ ಧಿಕಾರಿಗಳು ವಿಚಾರಣೆ ಶುರು ಮಾಡಿದ್ದಾರೆ.
– ರಾಮಕೃಷ್ಣ ಮುದ್ದೆಪಾಲ, ಐಆರ್‌ಬಿ ಮುಖ್ಯಸ್ಥ, ಮುನಿರಾಬಾದ್