ಕೊರಟಗೆರೆ: ಹೊಳವನಹಳ್ಳಿ ಗ್ರಾಪಂಯ ಅಭಿವೃದ್ಧಿಗಾಗಿ ತುಮಕೂರು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಿಂದ ಅಂಗಡಿ ಮಳಿಗೆಗಳನ್ನ ನಿರ್ಮಾಣ ಮಾಡಿಕೊಟ್ಟರೂ ಗ್ರಾ.ಪಂ. ವತಿಯಿಂದ ಅಧಿಕಾರಿಗಳು ಸರ್ಮಪಕ ಮೂಲಸೌಕರ್ಯ ನೀಡದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದೆ.
ಕೊರಟಗೆರೆ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಹೊಳವನಹಳ್ಳಿ ಗ್ರಾಪಂ ತಾಲೂಕಿನಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯತ್ ಆಗಿದೆ. 2016 ರಲ್ಲಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿದ್ದ ಕೋಡ್ಲಹಳ್ಳಿ ಆಶ್ವಥ್‌ನಾರಾಯಣ್ ವೇಳೆ ಹೊಳವನಹಳ್ಳಿ ಗ್ರಾಪಂ ಅಭಿವೃದ್ಧಿಗಾಗಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿವತಿಯಿಂದ ಸುಮಾರು 2 ಕೋಟಿ 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 70 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನ ನಿರ್ಮಾಣ ಮಾಡಿಕೊಡಲಾಗಿತ್ತು.
ಗ್ರಾಪಂ ಯಿಂದ ನೀರು, ರಸ್ತೆ, ಸೇರಿದಂತೆ ಅನೇಕ ಮೂಲ ಸೌಕರ್ಯ ನೀಡಬೇಕಾದ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಗೆಗಳ ತಾಣವಾಗಿದೆ. ಗ್ರಾಪಂಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ವರಮಾನ ತಂದುಕೊಡುವ ಅಂಗಡಿಗಳನ್ನ ಹಾರಜು ಮಾಡದೆ ಅಧಿಕಾರಿಗಳು ಮೌನವಹಿಸಿದ್ದಾರೆ. ಇನ್ನೂ ಗ್ರಾಪಂಯನ್ನ ಎಷ್ಟರ ಮಟ್ಟಿಗೆ ಅಭಿವೃದ್ದಿ ಮಾಡುತ್ತಾರೆ ಎಂದು ಸಾರ್ವಜನಿಕರ ದೂರಿದರು.
ವಾರದ ಸಂತೆ ನಿಂತು ವರ್ಷಗಳೇ ಕಳೆದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು. ಪ್ರತಿ ಶುಕ್ರವಾರ ನಡೆಯುತ್ತಿದ್ದ ವಾರದ ಸಂತೆ ಸ್ಥಗಿತಗೊಂಡಿದ್ದು, ಕರೋನ ಸಂದರ್ಭದಲ್ಲಿ ನಿಂತ ವಾರದ ಸಂತೆ ಇಲ್ಲಿಯವರೆಗೂ ಪ್ರಾರಂಭಿಸಲು ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಲಿ ತಲೆಕೊಡಿಸಿಕೊಳ್ಳದಿರುವುದು ವಿರ್ಪಯಾಸವೇ ಸರಿ. ಹೊಳವನಹಳ್ಳಿ ಸುತ್ತುಮುತ್ತ ಸುಮಾರು 50 ಗ್ರಾಮಗಳು ಇದ್ದು, ಹಣ್ಣು, ತರಕಾರಿ ತರಬೇಕಾದರೆ ಕೊರಟಗೆರೆ ಪಟ್ಟಣಕ್ಕೆ ಹೋಗಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಳವನಹಳ್ಳಿ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ತತ್ ಕ್ಷಣ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊಳವನಹಳ್ಳಿ ಗ್ರಾಪಂ ಸಮಸ್ಯೆಗಳನ್ನ ನೋಡಿ ಇಲ್ಲಿನ ಆಡಳಿತವನ್ನ ಚುರಕುಗೊಳಿಸುವರೆ ಕಾದು ನೋಡಬೇಕಿದೆ.
ಎರಡು ಕೋಟಿಗೂ ಅಧಿಕ ಖರ್ಚು ಮಾಡಿ 70ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನ ನಿರ್ಮಾಣ ಮಾಡಿದ್ದರೂ ಸಹ ಗ್ರಾಪಂ ಅಧಿಕಾರಿಗಳು ಮೂಲ ಸೌಕರ್ಯ ನೀಡಲು ವಿಫಲರಾದ ಕಾರಣ ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪ್ರತಿ ಶುಕ್ರವಾರ ನಡೆಯುತ್ತಿದ್ದ ಸಂತೆ ನಿಂತು ವರ್ಷಗಳೇ ಕಳೆದರೂ ಮತ್ತೆ ಸಂತೆಯನ್ನ ಪ್ರಾರಂಬಿಸಲು ಅಧಿಕಾರಿಗಳು ಮೀನಾಮೇಷ ಏಣಿಸುತ್ತಿದ್ದಾರೆ.
ಜಯರಾಜು, ಹೊಳವನಹಳ್ಳಿ ಗ್ರಾಮಸ್ಥ.